ಮುಂಬೈ, ಮಹಾರಾಷ್ಟ್ರ:ಕ್ರೂಸ್ಶಿಪ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗ ಹೊಸ ಹೊಸ ದಿಕ್ಕಿಗೆ ಈ ಪ್ರಕರಣ ಹೊರಳುತ್ತಿದ್ದು, ಎನ್ಸಿಪಿ ವಕ್ತಾರ ಮತ್ತು ಮಹಾರಾಷ್ಟ್ರ ರಾಜ್ಯದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಅವರು ಮಾದಕ ವಸ್ತು ನಿಗ್ರಹ ದಳ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನವಾಬ್ ಮಲಿಕ್ 'ಸರ್ಕಾರದ ಕೆಲಸಕ್ಕೆ ಸೇರಿದ ನಂತರ ಸಮೀರ್ ವಾಂಖೆಡೆ ಮಾಲ್ಡೀವ್ಸ್ಗೆ ಹೋಗಿದ್ದಾಗಿ, ಆದರೆ ಈವರೆಗೆ ದುಬೈಗೆ ಹೋಗಿಲ್ಲ ಎಂದು ಹೇಳಿದ್ದರು. ಆದರೆ ಈ ಫೋಟೋ ಸತ್ಯವನ್ನು ಮತ್ತು ಸಮೀರ್ ವಾಂಖೆಡೆ ಜೀವನವನ್ನು ಬಹಿರಂಗಪಡಿಸುತ್ತದೆ. 2020 ಡಿಸೆಂಬರ್ 10ರಂದು ದುಬೈನ ಗ್ರ್ಯಾಂಡ್ ಹಯಾತ್ ಹೋಟೆಲ್ನಲ್ಲಿ ಸಮೀರ್ ವಾಂಖೆಡೆ ಇದ್ದರು' ಎಂದಿದ್ದಾರೆ.
ಟ್ವೀಟ್ನ ಜೊತೆಗೆ ಎರಡು ಫೋಟೋಗಳನ್ನೂ ಕೂಡಾ ನವಾಬ್ ಮಲಿಕ್ ಹಂಚಿಕೊಂಡಿದ್ದು, ಜಾಸ್ಮೀನ್ ವಾಂಖೆಡೆ ಎಂಬುವವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.