ಮುಂಬೈ(ಮಹಾರಾಷ್ಟ್ರ):ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಭಾರತೀಯ ನೌಕಾಪಡೆ ಕೈಜೋಡಿಸಿದ್ದು, ವಿವಿಧ ದೇಶಗಳಿಂದ ಆಕ್ಸಿಜನ್ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊತ್ತು ವಿವಿಧ ಹಡಗುಗಳು ಭಾರತಕ್ಕೆ ತರುತ್ತಿವೆ.
ಸದ್ಯ ಭಾರತೀಯ ನೌಕಾಪಡೆಯ ಐಎನ್ಎಸ್ ತ್ರಿಕಾಂಡ್ 40 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ಮುಂಬೈಗೆ ಬಂದು ತಲುಪಿದೆ. ಕತಾರ್ನಿಂದ ಈ ಆಕ್ಸಿಜನ್ ಸಿಲಿಂಡರ್ಅನ್ನು ತಂದಿದೆ.
ಭಾರತೀಯ ನೌಕಾಪಡೆಯ 9 ಹಡಗುಗಳಾದ ಕೋಲ್ಕತ್ತಾ, ಕೊಚ್ಚಿ, ತಲ್ವಾರ್, ತಬಾರ್, ತ್ರಿಕಾಂಡ್, ಜಲಾಶ್ವ, ಐರಾವತ್ ಹಾಗೂ ಇತರೆ ಎರಡು ಹಡಗು ಆಪರೇಷನ್ ಸಮುದ್ರ ಸೇತು-II ರಲ್ಲಿ ಭಾಗಿಯಾಗಿವೆ. ಸಿಂಗಪುರ್, ಥೈಲ್ಯಾಂಡ್, ಗಲ್ಫ್ ಹಾಗೂ ಕತಾರ್ ಸೇರಿದಂತೆ ಅನೇಕ ರಾಷ್ಟ್ರಗಳಿಂದ ಆಮ್ಲಜನಕ ಹಾಗೂ ಅಗತ್ಯ ವಸ್ತುಗಳನ್ನು ಹೊತ್ತು ತರುತ್ತಿವೆ. ಮುಂಬೈಗೆ ಐಎನ್ಎಸ್ ತ್ರಿಕಾಂಡ್ ಆಗಮಿಸಿರುವ ಮಾಹಿತಿಯನ್ನ ನೌಕಾಪಡೆಯ ವಕ್ತಾರ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: Video: ಟ್ರಕ್ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ... ರಭಸಕ್ಕೆ ಹಾರಿ ಬಿದ್ದ ಡ್ರೈವರ್
ಆಪರೇಷನ್ ಸಮುದ್ರ ಸೇತು ಕಳೆದ ವರ್ಷ ಆರಂಭಗೊಂಡಿದ್ದು, ಈ ಅಭಿಯಾನದ ಮೂಲಕ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬೇರೆ ಬೇರೆ ದೇಶಗಳಲ್ಲಿ ಸಿಲುಕೊಂಡಿದ್ದವರನ್ನ ಭಾರತಕ್ಕೆ ಕರೆ ತರಲಾಗಿತ್ತು.