ನವದೆಹಲಿ: ಮುಂಬೈ ಕರಾವಳಿಯ ಬಾರ್ಜ್ನಲ್ಲಿ ಸಿಲುಕಿದ್ದ 177 ಜನರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ.
ಅರೇಬಿಯನ್ ಸಮುದ್ರದ ಮೇಲೆ 'ತೌಕ್ತೆ' ರುದ್ರನರ್ತನ ಮಾಡುತ್ತಿದ್ದು, ಇದರ ತೀವ್ರತೆಗೆ ಮುಂಬೈ ಕರಾವಳಿಯಲ್ಲಿ ಬಾರ್ಜ್ ಸಿಲುಕಿವೆ. ಬಾರ್ಜ್ ಪಿ 305 ನಲ್ಲಿ ಒಟ್ಟು 177 ಜನರನ್ನು ಇಂದು 11:30 ರವರೆಗೆ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ಐಎನ್‌ಎಸ್ ಕೊಚ್ಚಿ ಮತ್ತು ಐಎನ್‌ಎಸ್ ಕೋಲ್ಕತಾ ದ ಬೆಂಬಲದೊಂದಿಗೆ ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲಿ ರಕ್ಷಣಾ ಕಾರ್ಯ ಮಾಡಿರುವುದು ಗಮನಾರ್ಹ.