ನವದೆಹಲಿ :ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪ ಹೊತ್ತಿರುವ ಉದ್ಯಮಿ ನವನೀತ್ ಕಲ್ರಾಗೆ ಕಾಂಗ್ರೆಸ್ನೊಂದಿಗೆ ನಿಕಟ ಸಂಬಂಧವಿದೆ ಎಂದು ಬಿಜೆಪಿ ಆರೋಪಿಸಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಲೋಕಸಭಾ ಸದಸ್ಯೆ ಮೀನಾಕ್ಷಿ ಲೇಖಿ, ಕಾಳಸಂತೆ ನಡೆಸುವವರು ಹಾಗೂ ಉದ್ಯಮಿಗಳ ಜತೆ ಕಾಂಗ್ರೆಸ್ ಸಂಬಂಧವಿದೆ. ದೆಹಲಿಯಲ್ಲಿ ಕೃತಕ ಆಮ್ಲಜನಕರ ಕೊರತೆ ಸೃಷ್ಟಿಸಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಸ್ನೇಹಿತರು ಭಾರಿ ಶ್ರಮ ಪಟ್ಟಿದ್ದಾರೆ. ಇಂಥ ಸಂದಿಗ್ಧ ಪರಿಸ್ಥಿತಿಯನ್ನು ಅವರು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ಕಲ್ರಾ ಫೇಸ್ಬುಕ್ ಟೈಮ್ಲೈನ್ ನೋಡಿದ್ರೆ ನಿಮಗೆ ತಿಳಿಯುತ್ತೆ, ಅವರು ಕೋವಿಡ್ ನಿಯಂತ್ರಣ ಸಲುವಾಗಿ ಪ್ರಧಾನಿಯವರನ್ನು ದೂಷಿಸಿದ್ದರು. ರಾಹುಲ್ ಗಾಂಧಿ ಮತ್ತು ಸೋನಿಯಾಗಾಂಧಿ ಅವರೊಂದಿಗೆ ರೆಸ್ಟೋರೆಂಟ್ನ ಬಾಣಸಿಗರು ಫೋಟೋ ತೆಗೆಸಿಕೊಂಡಿದ್ದಾರೆ.
ಅಜಯ್ ಮಾಕೆನ್ ನಗರಾಭಿವೃದ್ಧಿ ಸಚಿವರಾಗಿದ್ದಾಗ ಕಲ್ರಾ ಅವರಿಗೆ ದೆಹಲಿ ಗಾಲ್ಫ್ ಕ್ಲಬ್ ಸದಸ್ಯತ್ವ ನೀಡಲಾಯಿತು ಎಂದು ಲೇಖಿ ಆರೋಪಿಸಿದ್ದಾರೆ. ದೆಹಲಿ ಗಾಲ್ಫ್ ಕ್ಲಬ್‌ಗೆ ಇಬ್ಬರನ್ನು ನಾಮನಿರ್ದೇಶನ ಮಾಡುವ ಅಧಿಕಾರವನ್ನು ಮಾಕೆನ್ ಹೊಂದಿದ್ದರು.
ಅವರು ಮೊದಲು 2004-05ರಲ್ಲಿ ರಾಬರ್ಟ್ ವಾದ್ರಾ ಅವರನ್ನು ನಾಮನಿರ್ದೇಶನ ಮಾಡಿದರು ಮತ್ತು ಅದರ ಮುಂದಿನ ವರ್ಷ ನವೀನ್ ಕಲ್ರಾ ಅವರನ್ನು ನಾಮನಿರ್ದೇಶನ ಮಾಡಿದ್ದರು. ಇದರಿಂದಲೇ ತಿಳಿಯುತ್ತೆ ಅವರ ಬೆನ್ನ ಹಿಂದೆ ಯಾರಿದ್ದಾರೆಂದು ಕಾಂಗ್ರೆಸ್ ವಿರುದ್ಧ ಲೇಖಿ ನೇರವಾಗಿ ಆಪಾದಿಸಿದ್ದಾರೆ.