ಕರ್ನಾಟಕ

karnataka

ETV Bharat / bharat

ಪತ್ರಕರ್ತ ಕಶ್ಯಪ್ ನಿವಾಸದಲ್ಲಿ ನವಜೋತ್ ಸಿಂಗ್ ಸಿಧು ಉಪವಾಸ ಸತ್ಯಾಗ್ರಹ - ಲಖಿಂಪುರ್​ ಖೇರಿ ಹಿಂಸಾಚಾರ

ನವಜೋತ್ ಸಿಂಗ್ ಸಿಧು ಇಂದು ಲಖಿಂಪುರ್ ಖೇರಿಯಲ್ಲಿರುವ ಮೃತ ಪತ್ರಕರ್ತ ರಾಮನ್ ಕಶ್ಯಪ್ ಅವರ ನಿವಾಸದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

Navjot Singh Sidhu
Navjot Singh Sidhu

By

Published : Oct 8, 2021, 10:01 PM IST

Updated : Oct 8, 2021, 10:10 PM IST

ಲಖಿಂಪುರ್ (ಉತ್ತರಪ್ರದೇಶ):ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಇಂದು ಲಖಿಂಪುರ್ ಖೇರಿಯಲ್ಲಿರುವ ಮೃತ ಪತ್ರಕರ್ತ ರಾಮನ್ ಕಶ್ಯಪ್ ಅವರ ನಿವಾಸದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಲಖಿಂಪುರ್ ಖೇರಿಯಲ್ಲಿ ನಡೆದ ರೈತರ ಪ್ರತಿಭಟನೆಯನ್ನು ವರದಿ ಮಾಡುವಾಗ ಪತ್ರಕರ್ತ ರಾಮನ್​​ ತಮ್ಮ ಜೀವವನ್ನು ಕಳೆದುಕೊಂಡಿದ್ದರು.

ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಸುವುದಾಗಿ ಸಿಧು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ನ್ಯಾಯದಾನ ವಿಳಂಬ- ನ್ಯಾಯ ನಿರಾಕರಿಸಲಾಗಿದೆ. ಕೆಚ್ಚೆದೆಯ ಕುಟುಂಬದ ಲವ್​ ಪ್ರೀತ್ ಸಿಂಗ್​​ (20), ಕೇಂದ್ರ ಸಚಿವರ ಮಗನ ಕ್ರೂರತ್ವಕ್ಕೆ ಬಲಿಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಗುರುವಾರ ಲಖಿಂಪುರ್ ಖೇರಿಗೆ ಮೆರವಣಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ನವಜೋತ್ ಸಿಂಗ್ ಸಿಧು ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಲಖಿಂಪುರ್ ಖೇರಿ ಹಿಂಸಾಚಾರ ಕೇಸ್.. ಉತ್ತರಪ್ರದೇಶ ಸರ್ಕಾರಕ್ಕೆ ತರಾಟೆ ತೆಗೆದುಕೊಂಡ ಸುಪ್ರೀಂ

ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕಾರೊಂದು ಪ್ರತಿಭಟನಾಕಾರರತ್ತ ನುಗ್ಗಿದೆ. ಈ ಸಮಯದಲ್ಲಿ ನಾಲ್ವರು ರೈತರು ಮೃತಪಟ್ಟಿದ್ದರು. ಪ್ರತಿಭಟನಾಕಾರರು ಇಬ್ಬರು ಬಿಜೆಪಿ ಕಾರ್ಯಕರ್ತರು ಹಾಗೂ ಕಾರು ಚಾಲಕನನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಓರ್ವ ಪತ್ರಕರ್ತನು ಸಾವನ್ನಪ್ಪಿದ್ದ.

Last Updated : Oct 8, 2021, 10:10 PM IST

ABOUT THE AUTHOR

...view details