ಕರ್ನಾಟಕ

karnataka

ETV Bharat / bharat

ನವಜೋತ್ ಸಿಂಗ್​ ಸಿಧು ಜನವರಿ 26 ರಂದು ಜೈಲಿನಿಂದ ಬಿಡುಗಡೆ ಆಗ್ತಾರಾ? - Congress leader Navjot Sidhu

ಗಣರಾಜ್ಯೋತ್ಸವದಂದು ಕಾಂಗ್ರೆಸ್​ ಪ್ರದೇಶ ಕಾಂಗ್ರೆಸ್​ ಮಾಜಿ ಅಧ್ಯಕ್ಷ ನವಜೋತ್​ ಸಿಧು ಬಿಡುಗಡೆ ಸಾಧ್ಯತೆ? - 50 ಕೈದಿಗಳನ್ನು ಬಿಡುಗಡೆ ಮಾಡುವ ರಾಜ್ಯ ಕಾರಾಗೃಹ ಮಾಡಿರುವ ಪಟ್ಟಿಯಲ್ಲಿ ಸಿಧು ಹೆಸರಿದೆ ಎನ್ನುವ ಸುದ್ದಿ

ಕಾಂಗ್ರೆಸ್ ನಾಯಕ ನವಜೋತ್ ಸಿಂಗ್​ ಸಿಧು
ಕಾಂಗ್ರೆಸ್ ನಾಯಕ ನವಜೋತ್ ಸಿಂಗ್​ ಸಿಧು

By

Published : Dec 26, 2022, 4:01 PM IST

ಪಟಿಯಾಲ(ಪಂಜಾಬ್​):ರೋಡ್ ರೇಜ್ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್​ ಸಿಧು ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾಗಬಹುದು ಎನ್ನಲಾಗ್ತಿದೆ. ರಾಜ್ಯ ಕಾರಾಗೃಹ ಇಲಾಖೆ ವತಿಯಿಂದ ಗಣರಾಜ್ಯೋತ್ಸವ ದಿನದಂದು 50ಕ್ಕೂ ಹೆಚ್ಚು ಕೈದಿಗಳು ಬಿಡುಗಡೆಯಾಗಲಿದ್ದಾರೆ. ಇದರಲ್ಲಿ ಸಿಧು ಹೆಸರು ಸೇರಿದೆ ಎಂದು ತಿಳಿದು ಬಂದಿದೆ.

ಜ.26ಕ್ಕೆ ಬಿಡುಗಡೆಯಾಗ್ತರಾ ಸಿಧು?: ಸಿಧು ಬಿಡುಗಡೆಗಾಗಿ ಅಂತಿಮವಾಗಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಅನುಮೋದನೆ ಪಡೆಯಬೇಕಾಗಿದೆ. ಅಲ್ಲಿನ ಮಾಧ್ಯಮ ವರದಿಗಳ ಪ್ರಕಾರ, ಭಾರತ ಸರ್ಕಾರದ ನೀತಿಯಂತೆ, ಗಣರಾಜ್ಯೋತ್ಸವದಂದು ಬಿಡುಗಡೆಗೊಳ್ಳುವ ಉದ್ದೇಶಿತ ಕೈದಿಗಳ ಪಟ್ಟಿಯಲ್ಲಿ ಸಿಧು ಅವರ ಹೆಸರನ್ನು ಸೇರಿಸಲಾಗಿದೆ. ಸಿಧು ಅವರ ಉತ್ತಮ ನಡತೆ ವರದಿ ಆಧಾರದ ಮೇಲೆ ಜೈಲು ಇಲಾಖೆ ನೀಡಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿ ಆಧಾರದಲ್ಲಿ ಬಿಡುಗಡೆ: ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ನವಜೋತ್​ ಸಿಂಗ್​ ಸಿಧು ಅವರನ್ನು ಕೇಂದ್ರ ಸರ್ಕಾರದ ವಿಶೇಷ ಮಾರ್ಗಸೂಚಿ ‘ಆಜಾದಿ ದ ಫಯಾದ’ ಪ್ರಕಾರ ಬಿಡುಗಡೆ ಮಾಡಬಹುದು. ಸಿಧು ಪ್ರಕರಣವನ್ನು ನಿರ್ದಿಷ್ಟವಾಗಿ ಪರಿಗಣಿಸಲಾಗಿಲ್ಲ. ಆದರೆ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮಾಡಿದ ಪಟ್ಟಿಯಲ್ಲಿ ನವಜೋತ್ ಸಿಧು ಹೆಸರು ಸೇರಿದಂತೆ 50 ಕ್ಕೂ ಹೆಚ್ಚು ಹೆಸರುಗಳಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಪಟಿಯಾಲ ಜೈಲಿನಲ್ಲಿ ಮೌನವ್ರತ ಆರಂಭಿಸಿದ ನವಜೋತ್ ಸಿಧು

ಸಿದ್ದು ಮೇ ತಿಂಗಳಿನಿಂದ ಜೈಲಿನಲ್ಲಿದ್ದು ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ. ರಜೆ ತೆಗೆದುಕೊಂಡಿಲ್ಲ, ಜೈಲಿನಲ್ಲಿ ಅವರ ನಡತೆ ಚೆನ್ನಾಗಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೂ ಸಿಧು ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಸಿಧು ಸ್ವಾಗತಕ್ಕೆ ಸಿದ್ಧತೆ: ಜ.26ಕ್ಕೆ ನವಜೋತ್ ಸಿಂಗ್ ಸಿಧು ಅವರ ಶಿಕ್ಷೆಯ ಅವಧಿ ಮುಗಿಯಲಿದೆ. ಅವರು ಹೊರಬರಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಪಟಿಯಾಲ ಮಾಜಿ ಜಿಲ್ಲಾಧ್ಯಕ್ಷ ನರಿಂದರ್ ಪಾಲ್ ಲಲ್ಲಿ ಹೇಳಿದ್ದಾರೆ. ಅವರು 12 ಗಂಟೆಗೆ ಬಿಡುಗಡೆಯಾಗಲಿದ್ದು, ನಂತರ ಕಾಂಗ್ರೆಸ್ ಪಕ್ಷದ ನಗರ ಹಾಗೂ ಗ್ರಾಮಾಂತರ ಅಧ್ಯಕ್ಷರಿಂದ ಕಾರ್ಯಕ್ರಮ ನಡೆಯಲಿದೆ. ಸಿಧು ಅವರನ್ನು ಡೊಳ್ಳು ಬಾರಿಸಿ, ಲಡ್ಡು ವಿತರಿಸುವ ಮೂಲಕ ಸ್ವಾಗತಿಸಲಾಗುವುದು ಎಂದರು.

ಇದನ್ನೂ ಓದಿ:ಜೈಲಿನಲ್ಲಿರುವ ನವಜೋತ್ ಸಿಧು ಭದ್ರತೆಯಲ್ಲಿ ಯಾವುದೇ ಲೋಪವಾಗಿಲ್ಲ: ಪಂಜಾಬ್ ಜೈಲು ಇಲಾಖೆ

ಬಿಡುಗಡೆಯಾದ ನಂತರ ಸಿದ್ದು ದುರ್ಗಿಯಾನ ದೇವಸ್ಥಾನ, ಹರ್ಮಂದಿರ್ ಸಾಹಿಬ್ ಧಾರ್ಮಿಕ ಸ್ಥಳಗಳಿಗೆ ತೆರಳಿ, ಪೂಜೆ ಸಲ್ಲಿಸಲಿದ್ದಾರೆ ಎಂದು ಅಧ್ಯಕ್ಷ ನರೇಂದ್ರ ಪಾಲ್ ಲಾಲಿ ತಿಳಿಸಿದ್ದಾರೆ.

ಏನಿದು ಪ್ರಕರಣ?: ನವಜೋತ್ ಸಿಧು ಅವರು ಪಟಿಯಾಲಾದಲ್ಲಿ ಪಾರ್ಕಿಂಗ್ ಜಾಗದ ವಿಷಯವಾಗಿ ವ್ಯಕ್ತಿಯೊಂದಿಗೆ ಜಗಳವಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಸಿಧು ಅವರ ಜೊತೆ ಮತ್ತೊಬ್ಬ ಸ್ನೇಹಿತ ಇದ್ದರು. ಈ ವೇಳೆ, ಅವರು ಇಬ್ಬರಿಗೂ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಳಿಕ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2006ರಲ್ಲಿ ಸಿಧು ದೋಷಿ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.

ಜೈಲಿನಲ್ಲಿದ್ದಾಗ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಮೌನ ಉಪವಾಸ ವ್ರತ ಮಾಡಿದ್ದರು. ಲಭ್ಯವಾಗಿರುವ ಮಾಹಿತಿ ಪ್ರಕಾರ, ನವರಾತ್ರಿ ಹಬ್ಬದ ನಿಮಿತ್ತ ಅವರು ಮೌನ ವ್ರತ ಕೈಗೊಂಡಿದ್ದರು. ಅದನ್ನು ಅವರು ದಸರಾ ದಿನದಂದು ಮುರಿದಿದ್ದರು. ಪ್ರಸ್ತುತ ನವಜೋತ್ ಸಿಂಗ್ ಸಿಧು ಪಟಿಯಾಲಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು 34 ವರ್ಷಗಳ ಹಿಂದಿನ ಹಲ್ಲೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿದ್ದಾರೆ.

ಇದನ್ನೂ ಓದಿ:'ಹೆತ್ತ ತಾಯಿಯನ್ನೇ ಬೀದಿಪಾಲು ಮಾಡಿದ ಕ್ರೂರಿ' ನವಜೋತ್ ಸಿಂಗ್​ ಮೇಲೆ ಸಹೋದರಿ ಆರೋಪ

ABOUT THE AUTHOR

...view details