ಕರ್ನಾಟಕ

karnataka

ETV Bharat / bharat

ಗಂಗಾ ನದಿಯ ದಡದಲ್ಲಿ ಪುತ್ರನ ನಿಶ್ಚಿತಾರ್ಥ.. ಭಾವಿ ಸೊಸೆ ಪರಿಚಯಿಸಿದ ನವಜೋತ್ ಸಿಂಗ್ ಸಿಧು - ಮಗ ಕರಣ್ ಸಿಧು ಪಟಿಯಾಲದ ಇನಾಯತ್ ರಾಂಧವಾ

ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪುತ್ರನ ನಿಶ್ಚಿತಾರ್ಥ ಗಂಗಾನದಿ ದಡದಲ್ಲಿ ನಡೆದಿದೆ. ಈ ಫೋಟೋಗಳನ್ನು ಹಂಚಿಕೊಂಡ ಸಿಧು ತಮ್ಮ ಭಾವಿ ಸೊಸೆಯನ್ನು ಪರಿಚಯಿಸಿದರು.

Sidhu Introduces His Would Be Daughter In Law  Shares Her Pics in Social media  Congress leader Navjot Sidhu  ಗಂಗಾ ನದಿಯ ದಡದಲ್ಲಿ ಪುತ್ರನ ನಿಶ್ಚಿತಾರ್ಥ  ಭಾವಿ ಸೊಸೆಯನ್ನು ಪರಿಚಯಿಸಿದ ನವಜೋತ್ ಸಿಂಗ್ ಸಿಧು  ನವಜೋತ್ ಸಿಂಗ್ ಸಿಧು ಪುತ್ರನ ನಿಶ್ಚಿತಾರ್ಥ  ಸಿಧು ಪುತ್ರನ ನಿಶ್ಚಿತಾರ್ಥ ಗಂಗಾನದಿ ದಡದಲ್ಲಿ  ಸಿಧು ತಮ್ಮ ಭಾವಿ ಸೊಸೆಯನ್ನು ಪರಿಚಯ  ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು  ಪಂಜಾಬ್ ಪಿಸಿಸಿ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು  ಸಿಧು ಅವರ ಮನೆಯಲ್ಲಿ ಶೀಘ್ರವೇ ಮದುವೆ  ಮಗ ಕರಣ್ ಸಿಧು ಪಟಿಯಾಲದ ಇನಾಯತ್ ರಾಂಧವಾ  ತಮ್ಮ ಕುಟುಂಬದೊಂದಿಗೆ ಕೈಗೊಂಡ ಪ್ರವಾಸ
ಗಂಗಾ ನದಿಯ ದಡದಲ್ಲಿ ಪುತ್ರನ ನಿಶ್ಚಿತಾರ್ಥ

By

Published : Jun 27, 2023, 1:38 PM IST

ಹೈದರಾಬಾದ್​:ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಸೋಮವಾರ ತಮ್ಮ ಭಾವಿ ಸೊಸೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಪಂಜಾಬ್ ಪಿಸಿಸಿ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಮನೆಯಲ್ಲಿ ಶೀಘ್ರವೇ ಮದುವೆಯ ಗಂಟೆಗಳು ಮೊಳಗಲಿವೆ. ಅವರ ಮಗ ಕರಣ್ ಸಿಧು ಪಟಿಯಾಲದ ಇನಾಯತ್ ರಾಂಧವಾ ಅವರನ್ನು ಮದುವೆಯಾಗಲಿದ್ದಾರೆ. ಇತ್ತೀಚೆಗಷ್ಟೇ ಅವರ ನಿಶ್ಚಿತಾರ್ಥ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಗಂಗಾನದಿ ತೀರದಲ್ಲಿ ಸಾಧಾರಣವಾಗಿ ನೆರವೇರಿಸಲಾಯಿತು. ಸಿದ್ದು ತಮ್ಮ ಟ್ವಿಟರ್​ ಖಾತೆಯಲ್ಲಿ ಸಂಬಂಧಿತ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ದುರ್ಗಾ-ಅಷ್ಟಮಿ ಸಂದರ್ಭದಲ್ಲಿ ಸಿಧು ಅವರು ತಮ್ಮ ಕುಟುಂಬದೊಂದಿಗೆ ಕೈಗೊಂಡ ಪ್ರವಾಸದ ಕೆಲವು ಚಿತ್ರಗಳನ್ನು ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಿತ್ರವೊಂದರಲ್ಲಿ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು, ಮಗಳು ರಬಿಯಾ ಸಿಧು, ಮಗ ಕರಣ್ ಸಿಧು ಅವರೊಂದಿಗೆ ಕಾಣಬಹುದು. ಈ ಫೋಟೋದಲ್ಲಿ ಹೊಸ ಸದಸ್ಯ ಇನಾಯತ್ ರಾಂಧವಾ ಕೂಡ ಕಾಣಿಸಿಕೊಂಡಿದ್ದಾರೆ. ಫೋಟೋದಲ್ಲಿ ಸಿಧು ತನ್ನ ಕುಟುಂಬದೊಂದಿಗೆ ಗಂಗಾ ನದಿಯ ದಡದಲ್ಲಿ ಪೋಸ್ ನೀಡುತ್ತಿರುವುದು ಕಂಡು ಬಂದಿದೆ. ಮತ್ತೊಂದು ಚಿತ್ರದಲ್ಲಿ ಸಿಧು ಅವರ ಮಗ ಕರಣ್ ಮತ್ತು ಅವರ ಭಾವಿ ಪತ್ನಿ ಚಿತ್ರಗಳಿಗೆ ಪೋಸ್ ನೀಡಿದ್ದಾರೆ.

ನವಜೋತ್ ಸಿಂಗ್ ಸಿಧು ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡಿ ನಮ್ಮ ಮಗ ತನ್ನ ಪ್ರೀತಿಯ ತಾಯಿಯ ಮಹತ್ತರವಾದ ಆಶಯವನ್ನು ಪೂರೈಸುತ್ತಿದ್ದಾರೆ. ಈ ಮಂಗಳಕರ ದುರ್ಗಾ - ಅಷ್ಟಮಿ ದಿನದಂದು ಗಂಗೆಯ ಮಡಿಲಲ್ಲಿ ಹೊಸ ಜೀವನವನ್ನು ನಮ್ಮ ಭಾವಿ ಸೊಸೆ ಇನಾಯತ್ ರಾಂಧವಾ ಜೊತೆ ಆರಂಭಿಸಿದ್ದಾನೆ ಎಂದು ಟ್ವೀಟ್​ ಮಾಡಿದ್ದಾರೆ.

ಇನ್ನು ಸಿಧು ಟ್ವೀಟ್​ ಮಾಡಿರುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿವೆ. ಬಳಕೆದಾರರು ಈ ಚಿತ್ರಗಳನ್ನು ಇಷ್ಟಪಟ್ಟಿದ್ದು, ಹೊಸ ಜೋಡಿಗೆ ಅಭಿನಂದನಾ ಸಂದೇಶಗಳನ್ನು ಬರೆದಿದ್ದಾರೆ. "ವಾವ್, ಎಂತಹ ಅದ್ಭುತ ಕ್ಷಣ, ಹೃತ್ಪೂರ್ವಕ ಅಭಿನಂದನೆಗಳು" ಎಂದು ಅನುಯಾಯಿಯೊಬ್ಬರು ಬರೆದಿದ್ದಾರೆ. ಮತ್ತೊಬ್ಬರು "ಆಧ್ಯಾತ್ಮಿಕರಿಗೆ ಅಭಿನಂದನೆಗಳು , ಧೈರ್ಯಶಾಲಿ, ಪ್ರಾಮಾಣಿಕ, ದೇಶಭಕ್ತಿ, ಪ್ರೀತಿಯ ಮತ್ತು ನಿಜವಾದ ಜಾತ್ಯತೀತ ಕುಟುಂಬ! ದೇವರು ಯುವ ಜೋಡಿಯನ್ನು ಆಶೀರ್ವದಿಸಲಿ ಎಂದು ಕಾಮೆಂಟ್​ ಮಾಡಿದ್ದಾರೆ.

ಕಳೆದ ತಿಂಗಳು ಗಂಗಾ ದಸರಾ ನಿಮಿತ್ತ ಕುಟುಂಬ ಸಮೇತ ರಿಷಿಕೇಶಕ್ಕೆ ತೆರಳಿದ್ದರು. ಟ್ವಿಟರ್​​​​ನಲ್ಲಿ ಹಂಚಿಕೊಂಡಿರುವ ಚಿತ್ರವೊಂದರಲ್ಲಿ ಸಿಧು ತಮ್ಮ ಕುಟುಂಬದೊಂದಿಗೆ ಗಂಗಾನದಿಯಲ್ಲಿ ಸ್ನಾನ ಮಾಡುತ್ತಿರುವುದು ಕಂಡುಬಂದರೆ, ಇನ್ನೊಂದರಲ್ಲಿ ಕುಟುಂಬವು ರೆಸ್ಟೋರೆಂಟ್‌ನಲ್ಲಿ ಫೋಟೋಗಳಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿತ್ತು. 10 ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ ಕಾಂಗ್ರೆಸ್ ನಾಯಕನನ್ನು ಏಪ್ರಿಲ್ 2, 2023 ರಂದು ಪಟಿಯಾಲ ಸೆಂಟ್ರಲ್ ಜೈಲಿನಿಂದ ಬಿಡುಗಡೆ ಮಾಡಲಾಯಿತು. 34 ವರ್ಷಗಳ ಹಿಂದೆ ನಡೆದ ಘರ್ಷಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕಳೆದ ವರ್ಷ ಸಿಧು ದೋಷಿ ಎಂದು ತಿಳಿದು ಜೈಲಿಗೆ ಕಳುಹಿಸಲಾಗಿತ್ತು.

ಸಿಧು ಅವರು ಜೈಲಿನಿಂದ ಬಿಡುಗಡೆಯಾದ ಬಳಿಕ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಬಿಡುಗಡೆಗೂ ಮುನ್ನ ಅವರ ಪತ್ನಿಯ ಭಾವನಾತ್ಮಕ ಟ್ವೀಟ್ ಒಂದನ್ನು ಹಂಚಿಕೊಂಡಿದ್ದರು. ಡಾ.ನವಜೋತ್ ಕೌರ್ ಸಿಧು ಎಡ ಸ್ತನದಲ್ಲಿ 2ನೇ ಹಂತದ ಕಾರ್ಸಿನೋಮ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಕೆಲ ವಾರಗಳ ಹಿಂದೆ ಪತ್ನಿಯ ಮೊದಲ ಕೀಮೋಥೆರಪಿ ಚಿಕಿತ್ಸೆ ಪಡೆದ ನಂತರ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

ಓದಿ:ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿರುವ ಪತ್ನಿಗೆ ಶಸ್ತ್ರಚಿಕಿತ್ಸೆ: ನವಜೋತ್ ಸಿಂಗ್ ಸಿಧು ಟ್ವೀಟ್​

ABOUT THE AUTHOR

...view details