ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆಗೆ ಬೆಂಬಲವಾಗಿ ನವಜೋತ್ ಸಿಂಗ್ ಸಿಧು ಅಮೃತಸರ್ ಮತ್ತು ಪಟಿಯಾಲದಲ್ಲಿರುವ ತಮ್ಮ ನಿವಾಸದ ಮೇಲ್ಛಾವಣಿಯ ಮೇಲೆ ಕಪ್ಪು ಬಾವುಟವನ್ನು ಹಾರಿಸಿದ್ದಾರೆ.
ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿಧು ಇಂದು ತಮ್ಮ ಪಟಿಯಾಲ ನಿವಾಸದಲ್ಲಿ ಕಪ್ಪು ಬಾವುಟ ಹಾರಿಸಿದ್ದಾರೆ. ಅವರ ಪತ್ನಿ ಡಾ.ನವಜೋತ್ ಕೌರ್ ಸಿಧು ಸಹ ಇದಕ್ಕೆ ಸಾಥ್ ನೀಡಿದರು.