ಅಮೃತಸರ(ಪಂಜಾಬ್):ಪಂಜಾಬ್ನಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್, ಆಮ್ ಆದ್ಮಿ ಹಾಗೂ ಬಿಜೆಪಿ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.
ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ರಾಜಕೀಯ ಪಕ್ಷಗಳು ಭರ್ಜರಿ ಚುನಾವಣಾ ಘೋಷಣೆಗಳನ್ನು ಮಾಡುತ್ತಿವೆ. ಇದೀಗ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಘೋಷಣೆಗಳ ಮಹಾಪೂರವನ್ನೇ ಹರಿಸಿದ್ದಾರೆ.
ಪಂಜಾಬ್ನಲ್ಲಿ ತಮ್ಮ ಕಾಂಗ್ರೆಸ್ ಸರ್ಕಾರ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬಂದರೆ ಗೃಹಿಣಿಯರಿಗೆ ಮಾಸಿಕ ₹2 ಸಾವಿರ ರೂ, ಪ್ರತಿ ವರ್ಷ 8 ಎಲ್ಪಿಜಿ ಸಿಲಿಂಡರ್ ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ, ವಿದ್ಯಾರ್ಥಿನಿಯರ ಉನ್ನತ ವ್ಯಾಸಂಗಕ್ಕಾಗಿ ಕಾಲೇಜು ಪ್ರವೇಶ ಪಡೆದುಕೊಳ್ಳುವವರಿಗೆ ದ್ವಿಚಕ್ರ ವಾಹನದ ಜೊತೆಗೆ ಕಂಪ್ಯೂಟರ್ ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ.
12ನೇ ತರಗತಿ ಪಾಸ್ ಆಗುವ ವಿದ್ಯಾರ್ಥಿನಿಯರಿಗೆ ₹20 ಸಾವಿರ, 10ನೇ ತರಗತಿ ಪಾಸ್ ಆಗುವ ವಿದ್ಯಾರ್ಥಿನಿಯರಿಗೆ ₹15 ಸಾವಿರ ರೂ. ಹಾಗೂ 5ನೇ ತರಗತಿ ಪಾಸ್ ಆಗುವ ಬಾಲಕಿಯರಿಗೆ ₹5 ಸಾವಿರ ರೂ. ನೀಡುವ ಭರವಸೆ ನೀಡಿದ್ದಾರೆ.