ಚಂಡೀಗಢ(ಪಂಜಾಬ್):ದೆಹಲಿ ಗಡಿಯಲ್ಲಿ ರೈತರು ಒಂದು ವರ್ಷದಿಂದ ಪ್ರತಿಭಟನೆಗೆ ಕುಳಿತಿದ್ದರು. ಆದರೆ, ನಿನ್ನೆ ಕೇವಲ 15 ನಿಮಿಷಗಳ ಕಾಲ ಕಾಯಲು ಪ್ರಧಾನಿಗೆ ಆಗಲಿಲ್ಲ, ಇದರಿಂದ ಅವರಿಗೆ ತೊಂದರೆ ಆಗಿದೆ. ಈ ರೀತಿಯ ಎರಡು ಮಾನದಂಡ ಏಕೆ? ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದೀರಿ. ಆದರೆ, ಇದೀಗ ಅವರ ಬಳಿ ಇರುವುದನ್ನೂ ಸಹ ಕಿತ್ತುಕೊಂಡಿದ್ದೀರಿ ಎಂಡು ಟೀಕಿಸಿರುವ ಅವರು, ನಿನ್ನ ಪ್ರಧಾನಿ ಮೋದಿ ಮಾಡಿರುವುದು ಒಂದು ನಾಟಕ. ರ್‍ಯಾಲಿ ಆಯೋಜನೆಗೊಂಡಿದ್ದ ಸ್ಥಳದಲ್ಲೇ ಜನರು ಇರಲಿಲ್ಲ. ಇದೇ ಕಾರಣಕ್ಕಾಗಿ ಪ್ರಧಾನಿ ಈ ರೀತಿ ನಡೆದುಕೊಂಡಿದ್ದಾರೆ ಎಂದರು.