ಮುಂಬೈ: ವಾಟರ್ ಟ್ಯಾಕ್ಸಿಗಳು ಮುಂಬೈನ ಪ್ರಯಾಣವನ್ನು ವೇಗಗೊಳಿಸಿವೆ. ಈ ಹಿಂದೆ ಬೇಲಾಪುರದಿಂದ ಮುಂಬೈಗೆ ತೆರಳಲು ಸಾಕಷ್ಟು ಸಮಯ ವ್ಯಯಿಸಬೇಕಾಗಿತ್ತು. ಮುಂಬೈನಿಂದ ನೆರೂಲ್, ಬೇಲಾಪುರ ಸೇರಿದಂತೆ ಕೆಲವು ಕಡೆಗೆ ಈ ವಾಟರ್ ಟ್ಯಾಕ್ಸಿ ಕಲ್ಪಿಸಲಾಗಿದೆ.
ಇಂದು ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್, ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಉಪಸ್ಥಿತರಿದ್ದರು. ಸ್ಪೀಡ್ ಬೋಟ್ನ ಈ ಪ್ರಯಾಣದ ಬೆಲೆ 700 ರಿಂದ 1200 ರೂಪಾಯಿಗಳು. ಮುಂಬೈನ ಬೆಲಾಪುರ್ ಜೆಟ್ಟಿಯಿಂದ ವಾಟರ್ ಟ್ಯಾಕ್ಸಿ ಪ್ರಯಾಣಕ್ಕಾಗಿ ಪ್ರಯಾಣಿಕರು 700 ರಿಂದ 1,200 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ವಾಟರ್ ಟ್ಯಾಕ್ಸಿ ಮೂಲಕ ಕೇವಲ 30 ನಿಮಿಷಗಳಲ್ಲಿ ಮುಂಬೈಗೆ! ಬೇಲಾಪುರದಿಂದ ಒಟ್ಟು 8 ದೋಣಿಗಳು, ತಲಾ 10 ರಿಂದ 30 ಪ್ರಯಾಣಿಕರ ಸಾಮರ್ಥ್ಯದ 7 ಸ್ಪೀಡ್‌ಬೋಟ್‌ಗಳು ಮತ್ತು 56 ಪ್ರಯಾಣಿಕರ ಸಾಮರ್ಥ್ಯದ ಕ್ಯಾಟಮರನ್ ಬೋಟ್‌ನೊಂದಿಗೆ ವಾಟರ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಲಾಗಿದೆ.
ವಾಟರ್ ಟ್ಯಾಕ್ಸಿ ಮೂಲಕ ಕೇವಲ 30 ನಿಮಿಷಗಳಲ್ಲಿ ಮುಂಬೈಗೆ! ಇದನ್ನೂ ಓದಿ: ಧರಣಿ ನಿರತ ಪ್ರತಿಪಕ್ಷ ಕಾಂಗ್ರೆಸ್ ನಾಯಕರ ಜೊತೆ ಸಿಎಂ ಚರ್ಚೆ; ಬಿಎಸ್ವೈ ಜೊತೆಗೂಡಿ ಮನವೊಲಿಕೆಗೆ ಯತ್ನ
ಬೇಲಾಪುರದಿಂದ ಮುಂಬೈನ ಭೌಚಾ ಢಕ್ಕಕ್ಕೆ ಸ್ಪೀಡ್ ಬೋಟ್‌ನಲ್ಲಿ ಕೇವಲ 30 ನಿಮಿಷಗಳಲ್ಲಿ ತಲುಪಬಹುದು. ಕ್ಯಾಟಮರನ್ ಬೋಟ್‌ನಲ್ಲಿ 45 ರಿಂದ 50 ನಿಮಿಷ ತೆಗೆದುಕೊಳ್ಳುತ್ತದೆ. ಕ್ಯಾಟಮರನ್‌ನ ಪ್ರತಿ ಪ್ರಯಾಣಿಕರಿಗೆ 290 ರೂ. ಇದೆ.