ಕರ್ನಾಟಕ

karnataka

ETV Bharat / bharat

ತಮಿಳುನಾಡಿನ 36 ಮೀನುಗಾರರನ್ನು ರಕ್ಷಿಸಿ, ಸುರಕ್ಷಿತವಾಗಿ ವಾಪಸ್ ಕರೆತಂದ INS ಖಂಜಾರ್ ಹಡಗು - ಭಾರತೀಯ ನೌಕಾಪಡೆಯ ಹಡಗು ಖಂಜರ್

ಬಂಗಾಳಕೊಲ್ಲಿಯಲ್ಲಿ ಮೀನುಗಾರಿಕೆಗೆ ತೆರಳಿ ಸಮುದ್ರ ಮಧ್ಯೆ ಸಿಲುಕಿಕೊಂಡಿದ್ದ 36 ತಮಿಳುನಾಡಿನ ಮೀನುಗಾರರನ್ನು ಭಾರತೀಯ ನೌಕಾಪಡೆಯ ಖಂಜಾರ್ ಹಡಗು ಸುರಕ್ಷಿತವಾಗಿ ವಾಪಸ್ ಕರೆತಂದಿದೆ.

Naval Ship Khanjar
INS ಖಂಜಾರ್ ಹಡಗು

By

Published : Jul 29, 2023, 12:33 PM IST

ಚೆನ್ನೈ (ತಮಿಳುನಾಡು) : ತಮಿಳುನಾಡು ಕರಾವಳಿಯಿಂದ ಸುಮಾರು 130 ನಾಟಿಕಲ್ ಮೈಲಿ ದೂರದ ಬಂಗಾಳಕೊಲ್ಲಿಯಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರನ್ನು ಭಾರತೀಯ ನೌಕಾಪಡೆಯ ಹಡಗು ಖಂಜರ್ ಸುರಕ್ಷಿತವಾಗಿ ವಾಪಸ್ ಕರೆತಂದಿದೆ. 30 ಗಂಟೆಗಳಿಗೂ ಹೆಚ್ಚು ಕಾಲ INS ಖಂಜಾರ್ ಕಾರ್ಯಾಚರಣೆ ನಡೆಸಿ ಮೀನುಗಾರರು ಹಾಗೂ ಮೂರು ಮೀನುಗಾರಿಕಾ ಹಡಗುಗಳನ್ನು ರಕ್ಷಿಸಿದೆ.

ಮೂರು ಹಡಗುಗಳಲ್ಲಿ ಸಮುದ್ರಕ್ಕೆ ಇಳಿದ ಮೀನುಗಾರರ ತಂಡವು ಸಮುದ್ರದಲ್ಲಿ ಉಂಟಾದ ಪ್ರಕ್ಷುಬ್ಧತೆಯಿಂದಾಗಿ ಅಲ್ಲಿಯೇ ಸಿಲುಕಿಕೊಂಡಿತ್ತು. ಬಳಿಕ, ಬಂಗಾಳಕೊಲ್ಲಿಯಲ್ಲಿ ಕಾರ್ಯಾಚರಣೆಗೆಂದೇ ನಿಯೋಜಿಸಲಾದ INS ಖಂಜಾರ್ ಹಡಗು ರಕ್ಷಣಾ ಕಾರ್ಯಚರಣೆಗಿಳಿದಿದ್ದು, ತಮಿಳುನಾಡು ಕರಾವಳಿಯಿಂದ ಸರಿಸುಮಾರು 130 ಕಿ.ಮೀ ದೂರ ಸಾಗಿ ಶಬರಿನಾಥನ್, ಕಲೈವಾಣಿ ಮತ್ತು ವಿ ಸಾಮಿ ಎಂಬ 3 ಮೀನುಗಾರಿಕಾ ಹಡಗುಗಳನ್ನು ಪತ್ತೆಹಚ್ಚಿದೆ. ಬಳಿಕ 36 ಮೀನುಗಾರರಿದ್ದ ಹಡಗುಗಳನ್ನು ತಮಿಳುನಾಡಿನ ನಾಗಪಟ್ಟಣಂ ಬಳಿ ದಡ ಸೇರಿಸಿದೆ.

ಹವಾಮಾನ ವೈಪರೀತ್ಯದಿಂದಾಗಿ ಎರಡು ದಿನಗಳಿಂದ ಮೀನುಗಾರರು ಊಟ, ಉಪಹಾರವಿಲ್ಲದೆ ಸಮುದ್ರದಲ್ಲಿ ಸಿಲುಕಿದ್ದರು. ಜೊತೆಗೆ, ಇಂಜಿನ್ ಸ್ಥಗಿತದಂತಹ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಸುಮಾರು 48 ಗಂಟೆಗಳ ಕಾಲ ಮೀನುಗಾರರು ಸಮುದ್ರದಲ್ಲಿ ಸಿಲುಕಿಕೊಂಡಿದ್ದರಿಂದ ಅವರ ಕುಟುಂಬಸ್ಥರು ಮತ್ತು ಸಹ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ :ಪಾರಾದೀಪ್ ಕರಾವಳಿಯಲ್ಲಿ 13 ಮೀನುಗಾರರು ನಾಪತ್ತೆ.. ಬಿರುಸಿನ ಕಾರ್ಯಾಚರಣೆ

15 ಮೀನುಗಾರರ ಬಿಡುಗಡೆ: ಇನ್ನೊಂದೆಡೆ, ಶ್ರೀಲಂಕಾ ನೌಕಾಪಡೆಯಿಂದ ಬಂಧನಕ್ಕೊಳಗಾಗಿದ್ದ ರಾಮೇಶ್ವರಂನ ಮೀನುಗಾರರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಕಳೆದ 2 ದಿನಗಳ ಹಿಂದೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ತಮಿಳುನಾಡು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮೀನುಗಾರರನ್ನು ಸ್ವಾಗತಿಸಿ, ವಾಹನದ ಮೂಲಕ ರಾಮೇಶ್ವರಂಗೆ ಕಳುಹಿಸಿದರು. ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ 15 ಮಂದಿ ಮೀನುಗಾರರು ಈ ತಿಂಗಳು ಜುಲೈ 9 ರಂದು ಮುಂಜಾನೆ ಕಚ್ಚತೀವು ಬಳಿ ಹಿಂದೂ ಮಹಾಸಾಗರದಲ್ಲಿ ಎರಡು ದೋಣಿಗಳಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಆ ಸಮಯದಲ್ಲಿ ಅಲ್ಲಿಗೆ ಆಗಮಿಸಿದ ಶ್ರೀಲಂಕಾ ನೌಕಾಪಡೆ, ಗಡಿ ದಾಟಿ ಶ್ರೀಲಂಕಾದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮೀನುಗಾರರನ್ನು ಬಂಧಿಸಿತ್ತು. ಜೊತೆಗೆ, ದೋಣಿ, ಬಲೆ ಮತ್ತು ಮೀನುಗಳನ್ನು ವಶಪಡಿಸಿಕೊಂಡು ಶ್ರೀಲಂಕಾಕ್ಕೆ ಕರೆದೊಯ್ದಿದ್ದರು. ನಂತರ ಅವರನ್ನು ಶ್ರೀಲಂಕಾ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿನಲ್ಲಿಡಲಾಗಿತ್ತು.

ಈ ಸಂದರ್ಭದಲ್ಲಿ ಬಂಧಿತ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಮೀನುಗಾರರ ಕುಟುಂಬಗಳು ತಮಿಳುನಾಡು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ತುರ್ತು ಪತ್ರ ಬರೆದಿದ್ದರು. ನಂತರ ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಮೀನುಗಾರರ ಬಿಡುಗಡೆಗೆ ಸಂಬಂಧಿಸಿದಂತೆ ಶ್ರೀಲಂಕಾ ಸರ್ಕಾರದೊಂದಿಗೆ ಮಾತನಾಡಿ, ಜೈಲಿನಿಂದ ಬಿಡುಗಡೆಗೊಳಿಸಿದ್ದಾರೆ.

ABOUT THE AUTHOR

...view details