ನವದೆಹಲಿ :ಭಾರತ ಲಸಿಕಾ ಅಭಿಯಾನದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಒಟ್ಟಾರೆ ದೇಶದಲ್ಲಿ ಮೂರನೇ ಹಂತದ ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದಡಿ ಇಂದು 19 ಕೋಟಿ (19,18,79,503) ಡೋಸ್ ಲಸಿಕೆ ಹಾಕಲಾಗಿದೆ.
ಇಂದು ಬೆಳಗ್ಗೆ 7 ಗಂಟೆವರೆಗೆ ಲಭ್ಯವಾಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ, 27,53,883 ಸೆಷನ್ಗಳ ಮೂಲಕ ಒಟ್ಟು 19,18,79,503 ಡೋಸ್ ಲಸಿಕೆ ಹಾಕಲಾಗಿದೆ. ಇದರಲ್ಲಿ 97,24,339 ಹೆಚ್‌ಸಿಡ್ಲ್ಯೂಗಳಿಗೆ ಮೊದಲನೇ ಡೋಸ್ ಮತ್ತು 66,80,968 ಹೆಚ್‌ಸಿಡ್ಲ್ಯೂಗಳಿಗೆ ಎರಡನೇ ಡೋಸ್ ನೀಡಲಾಗಿದೆ.
1,47,91,600 ಎಫ್ಎಲ್ ಡಬ್ಲ್ಯೂಗಳಿಗೆ (1ನೇ ಡೋಸ್), 82,85,253 ಎಫ್ಎಲ್ಡಬ್ಲ್ಯೂಗಳಿಗೆ (2ನೇ ಡೋಸ್), 18 ರಿಂದ 44 ವಯೋಮಾನದ 86,04,498 ಫಲಾನುಭವಿಗಳಿಗೆ (ಮೊದಲ ಡೋಸ್), 45 ರಿಂದ 60 ವರ್ಷದ 5,98,35,256 (1ನೇ ಡೋಸ್) ಮತ್ತು 95,80,860 (2ನೇ ಡೋಸ್), 60 ವರ್ಷ ಮೇಲ್ಪಟ್ಟ 5,62,45,627 ಫಲಾನುಭವಿಗಳಿಗೆ ಮೊದಲ ಡೋಸ್ ಮತ್ತು 1,81,31,102 ಫಲಾನುಭವಿಗಳಿಗೆ 2ನೇ ಡೋಸ್ ನೀಡಲಾಗಿದೆ.