ಪ್ರತಿವರ್ಷ ಜನವರಿ 12ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ಅವರು ಶ್ರೀರಾಮಕೃಷ್ಣ ಪರಮಹಂಸರ ಅತೀವ ಶಿಷ್ಯರಾಗಿದ್ದರು ಮತ್ತು ಭಾರತದಲ್ಲಿ ಹಿಂದೂ ಧರ್ಮದ ಪುನರುಜ್ಜೀವನದ ಪ್ರಮುಖ ಶಕ್ತಿಯಾಗಿದ್ದರು. ವಿವೇಕಾನಂದರ ಜನ್ಮ ದಿನದಂದು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು 24ನೇ ರಾಷ್ಟ್ರೀಯ ಯುವ ಉತ್ಸವ (ಎನ್ವೈಎಫ್) -2021 ಅನ್ನು ಆಯೋಜಿಸುತ್ತದೆ.
ವಿವೇಕಾನಂದರು ಭಾರತೀಯ ಚಿಂತನೆ ಮತ್ತು ತತ್ವಗಳನ್ನು ಇಡೀ ಜಗತ್ತಿಗೆ ಪರಿಚಯಿಸಿದರು. ದೇಶಭಕ್ತರಾಗಿದ್ದ ಅವರು, ಯುವ ಸಮುದಾಯದ ಶಕ್ತಿಯಾಗಿ ಗುರುತಿಸಿಕೊಂಡರು. ಭಾರತದಲ್ಲಿ ವ್ಯಾಪಕವಾಗಿ ಹರಡಿರುವ ಬಡತನದ ಬಗ್ಗೆಯೂ ಅವರು ಗಮನ ಸೆಳೆದರು ಮತ್ತು ದೇಶದ ಅಭಿವೃದ್ಧಿಗೆ ಬಡತನದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದರು.
ಅವರು ವೇದಾಂತ ಮತ್ತು ಯೋಗದ ಭಾರತೀಯ ತತ್ತ್ವಚಿಂತನೆಗಳನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿದರು. ಅವರು ಭಾರತದ ಶ್ರೇಷ್ಠ ದೇಶಭಕ್ತರಾಗಿದ್ದರು ಮತ್ತು ಅವರ ದೇಶದ ತತ್ತ್ವಚಿಂತನೆಗಳಿಗೆ ಅವರು ನೀಡಿದ ಕೊಡುಗೆಗಳಿಗಾಗಿ ಅವರನ್ನು ವೀರರೆಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ವ್ಯಾಪಕವಾಗಿ ಹರಡಿರುವ ಬಡತನದ ಬಗ್ಗೆಯೂ ಅವರು ಗಮನ ಸೆಳೆದರು ಮತ್ತು ದೇಶದ ಅಭಿವೃದ್ಧಿಗೆ ಬಡತನದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೆ ಮುಂದಿನ ಯುವ ಭಾರತದ ಕನಸು ಕಂಡಿದ್ದರು.
ಎಲ್ಲಾ ಶಕ್ತಿ ನಿಮ್ಮೊಳಗಿದೆ; ನೀವು ಏನನ್ನಾದರೂ ಮತ್ತು ಎಲ್ಲವನ್ನೂ ಮಾಡಬಹುದು. ಅದನ್ನು ನಂಬಿರಿ, ನೀವು ದುರ್ಬಲರು ಎಂದು ನಂಬಬೇಡಿ, ನಮ್ಮಲ್ಲಿ ಹೆಚ್ಚಿನವರು ಇತ್ತೀಚಿನ ದಿನಗಳಲ್ಲಿ ಮಾಡುವಂತೆ ನೀವು ಬಲಹೀನರು ಎಂದು ನಂಬಬೇಡಿ. ಯಾರೊಬ್ಬರ ಮಾರ್ಗದರ್ಶನವೂ ಇಲ್ಲದೆ ನೀವು ಏನನ್ನಾದರೂ ಮತ್ತು ಎಲ್ಲವನ್ನೂ ಮಾಡಬಹುದು. ಎದ್ದು ನಿಂತು ನಿಮ್ಮೊಳಗಿನ ದೈವತ್ವವನ್ನು ವ್ಯಕ್ತಪಡಿಸಿ-ಸ್ವಾಮಿ ವಿವೇಕಾನಂದ
ಸ್ವಾಮಿ ವಿವೇಕಾನಂದರ ಪರಿಚಯ (1863-1902)
ಜನವರಿ 12, 1863ರಲ್ಲಿ ಜನಿಸಿದರು. ಇವರು ಮೊದಲ ಹೆಸರು ನರೇಂದ್ರನಾಥ್ ದತ್ತಾ ಎಂಬುದಾಗಿತ್ತು. 1893 - ವಿವೇಕಾನಂದರು ಚಿಕಾಗೋದ ವಿಶ್ವ ಧರ್ಮಗಳ ಸಂಸತ್ತಿನಲ್ಲಿ ಮಾತನಾಡಿದರು ಮತ್ತು ವೇದಾಂತ ತತ್ತ್ವಶಾಸ್ತ್ರವನ್ನು ಪಶ್ಚಿಮಕ್ಕೆ ಪರಿಚಯಿಸಿದರು. ಭಾರತದ ಈ ಅಪರಿಚಿತ ಸನ್ಯಾಸಿ 1893ರಲ್ಲಿ ಚಿಕಾಗೋದಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ಇದ್ದಕ್ಕಿದ್ದಂತೆ ಖ್ಯಾತಿಯನ್ನು ಪಡೆದರು, ಅಲ್ಲಿ ಅವರು ಹಿಂದೂ ಧರ್ಮವನ್ನು ಪ್ರತಿನಿಧಿಸಿದ್ದರು.
ವಿವೇಕಾನಂದರು 19ನೇ ಶತಮಾನದ ರಾಮಕೃಷ್ಣ ಪರಮಹಂಸರ ಮುಖ್ಯ ಶಿಷ್ಯರಾಗಿದ್ದರು. ನಮ್ಮ ತಾಯಿನಾಡಿನ ಪುನರುತ್ಪಾದನೆಗಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು. ಅವರು ಮಾನವೀಯ ಗುಣ ಸಾರುವ ಶಿಕ್ಷಣವನ್ನು ಪ್ರತಿಪಾದಿಸಿದರು.
1897ರಲ್ಲಿ ವಿವೇಕಾನಂದರು ರಾಮಕೃಷ್ಣ ಮಿಷನ್ ಆರಂಭಿಸಿದ ಇವರು, ಮೌಲ್ಯಾಧಾರಿತ ಶಿಕ್ಷಣ, ಸಂಸ್ಕೃತಿ, ಆರೋಗ್ಯ, ಮಹಿಳಾ ಸಬಲೀಕರಣ, ಯುವಕರು ಮತ್ತು ಬುಡಕಟ್ಟು ಕಲ್ಯಾಣ ಮತ್ತು ಪರಿಹಾರ, ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿ ಗುರುತಿಸಿಕೊಂಡಿತು.
1902- ವಿವೇಕಾನಂದರು ಪಶ್ಚಿಮ ಬಂಗಾಳದ ಬೇಲೂರು ಮಠದಲ್ಲಿ ಧ್ಯಾನಾವಸ್ಥೆಯಲ್ಲಿಯೆ ಚಿರನಿದ್ರೆಗೆ ಜಾರಿದ್ದರು. ಪಶ್ಚಿಮ ಬಂಗಾಳದ ಬೇಲೂರು ಮಠವು ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ನ ಮುಖ್ಯ ಶಾಖೆಯಾಗಿದೆ. ಅವರ ಈ ಕೊಡುಗೆಯನ್ನು ಮನಗಂಡ ಭಾರತ ಸರ್ಕಾರ 1984ರಲ್ಲಿ ಜನ್ಮ ದಿನವನ್ನು ರಾಷ್ಟ್ರೀಯ ಯುವಕರ ದಿನವನ್ನಾಗಿ ಆಚರಿಸಲು ತೀರ್ಮಾನಿಸಿದೆ.