ಕರ್ನಾಟಕ

karnataka

ETV Bharat / bharat

ಇತ್ತೀಚಿನ ತಂತ್ರಜ್ಞಾನಗಳು..ಕೊರೊನಾ ವೈರಸ್ ಇರುವಾಗ ಹಾಗು ನಂತರ - ರಾಷ್ಟ್ರೀಯ ತಂತ್ರಜ್ಞಾನ ದಿನ

ದೇಶದಲ್ಲಿ ವ್ಯಾಪಕವಾಗಿರುವ ಕೋವಿಡ್ ವೈರಸ್ ನಿಯಂತ್ರಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಮಾಸ್ಕ್‌ಗಳನ್ನು ಧರಿಸುವುದು, ಮನೆಯಿಂದ ಕೆಲಸ ಮಾಡುವುದು ಮತ್ತು ಮನೆಗಳಲ್ಲಿ ಉಳಿಯುವುದಕ್ಕೆ ಸಂಬಂಧಿಸಿದಂತೆ ಅತ್ಯುಚ್ಚ ಪಾತ್ರವನ್ನು ನಿರ್ವಹಿಸುತ್ತಿದೆ.

National technology day
ಇತ್ತೀಚಿನ ತಂತ್ರಜ್ಞಾನಗಳು..ಕೊರೊನಾ ವೈರಸ್ ಇರುವಾಗ ಹಾಗು ನಂತರ

By

Published : May 12, 2021, 9:24 AM IST

ಅವಲೋಕನ

1998ರ ಮೇ 11ರಂದು ನಡೆದ ’ಪೋಖ್ರಾನ್ ಪರಮಾಣು ಪರೀಕ್ಷೆಯ’ ವಾರ್ಷಿಕೋತ್ಸವದ ನೆನಪಿಗಾಗಿ ಪ್ರತಿ ವರ್ಷ ಮೇ 11ರಂದು ಭಾರತದಲ್ಲಿ 'ರಾಷ್ಟ್ರೀಯ ತಂತ್ರಜ್ಞಾನ ದಿನ' ಎಂದು ಆಚರಿಸಲಾಗುತ್ತದೆ.ಸಾಮಾನ್ಯವಾಗಿನಮ್ಮ ದೈನಂದಿನ ಜೀವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರವನ್ನು ಇದು ಎತ್ತಿ ತೋರಿಸುತ್ತದೆ.ಕೊರೊನಾ ವೈರಸ್‌ನ ಪ್ರಸ್ತುತ ಸನ್ನಿವೇಶದಲ್ಲಿ ಮತ್ತು ಕೊರೊನಾದ ವಿಭಿನ್ನ ರೂಪಾಂತರಗಳ ಬಗ್ಗೆ ಇರುವ ಭಯಮತ್ತು ಮುಂಬರುವ ಮೂರನೇ, ನಾಲ್ಕನೆಯ ಅಲೆಗಳ ಬಗ್ಗೆ ಬರುತ್ತಿರುವ ತಲ್ಲಣಕಾರಿ ಸುದ್ದಿಗಳು ಹಾಗು ಕೊರೊನಾ ವಿರುದ್ಧ ಹೋರಾಟ ನಡೆಯುತ್ತಿರುವ ಇಂದಿನ ದಿನಗಳಲ್ಲಿಮಾನವ ಜೀವನದ ಸಂಪೂರ್ಣ ಇತಿಹಾಸವನ್ನು ಅವಲೋಕಿಸಲಾಗಿದ್ದು, ಹಿಂದೆಂದಿಗಿಂತಲೂ ಪ್ರಸಕ್ತ ಸಂದರ್ಭದಲ್ಲಿ ತಂತ್ರಜ್ಞಾನದ ಬಳಕೆಯು ಹೆಚ್ಚು ಮಹತ್ವದ್ದಾಗಿದೆ.ಈ ರೀತಿಯ ಹಾನಿಕಾರಕ ಕಾಲದಲ್ಲಿ ತಂತ್ರಜ್ಞಾನದ ಪಾತ್ರದ ಔಚಿತ್ಯವನ್ನು ಪರಿಶೀಲಿಸಲು ರಾಷ್ಟ್ರೀಯ ತಂತ್ರಜ್ಞಾನ ದಿನ ಸರಿಯಾದ ಸಂದರ್ಭವಾಗಿದೆ.ವಾಸ್ತವದ ವಿಷಯ ಏನೆಂದರೆ,ಸಾಂಕ್ರಾಮಿಕ ರೋಗದಿಂದ ನಮ್ಮನ್ನು ಪಾರು ಮಾಡಿದ್ದೇ ತಂತ್ರಜ್ಞಾನವು.ಅಷ್ಟೇ ಅಲ್ಲ,ನಾವು ಹೇಗೆ ಕೆಲಸ ಮಾಡುತ್ತೇವೆ ಮತ್ತು ಬದುಕುತ್ತೇವೆ ಎಂಬುದರ ಮರು ವ್ಯಾಖ್ಯಾನಿಸುವಿಕೆ ಇದರಿಂದಾಗಿ ಮುಂದುವರಿದುಕೊಂಡು ಬಂದಿದೆ.

ಪ್ರತಿ ವರ್ಷ ತಂತ್ರಜ್ಞಾನದಿಂದ ಉದ್ಭವಿಸಿರುವ ಆವಿಷ್ಕಾರಗಳು ವೇಗವಾಗಿ ಮತ್ತು ಇನ್ನಷ್ಟು ವೇಗವಾಗಿ ಬರುತ್ತಿರುವಂತೆ ಭಾಸವಾಗುತ್ತದೆ.ಆದರೆ,ನಾವು ಹಿಂದೆಂದೂ ನೋಡಿರದ ರೀತಿಯಲ್ಲಿ ತಂತ್ರಜ್ಞಾನದ ಆವಿಷ್ಕಾರ ಮತ್ತು ಏಕೀಕರಣವನ್ನು ಕೋವಿಡ್-19 ಸಾಂಕ್ರಾಮಿಕ ವೇಗಗೊಳಿಸಿದೆ.ಲಾಕ್‌ಡೌನ್‌ಗಳ ಸಮಯದಲ್ಲಿ ನಮ್ಮ ಸಮಾಜವನ್ನು ಕ್ರಿಯಾತ್ಮಕವಾಗಿಡಲು ಮತ್ತು ಕೊರೊನಾ ವೈರಸ್‌ನ ವ್ಯಾಪಕ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಹೊಸ ತಂತ್ರಜ್ಞಾನಗಳು ಈಗ ನಿರ್ಣಾಯಕ ಪಾತ್ರ ವಹಿಸುತ್ತಿವೆ.ನಾವು ಕೆಲಸ ಮಾಡುವ ಮತ್ತು ಬದುಕುವ ವಿಧಾನವನ್ನು ಹೊಸದಾಗಿಸಲು ಹಾಗೂ ಬದಲಾಯಿಸಲು ಕೊರೊನಾ ಮನುಕುಲವನ್ನು ಒತ್ತಾಯಿಸುತ್ತಿದೆ.ಮುಟ್ಟದೆಯೇ ಬಾಗಿಲು ತೆರೆಯುವುದರಿಂದ ಹಿಡಿದು ನವೀನ ಆಮ್ಲಜನಕ ವೆಂಟಿಲೇಟರ್‌ಗಳವರೆಗೆಕೊರೊನಾ ಸಾಂಕ್ರಾಮಿಕವು ತುರ್ತು ತಂತ್ರಜ್ಞಾನ ಆವಿಷ್ಕಾರದ ಅವಶ್ಯಕತೆಯನ್ನು ತಂದಿತು.ಡಿಜಿಟಲ್ ಪಾವತಿಗಳು,ಟೆಲಿ ಮೆಡಿಸಿನ್,ಆನ್‌ಲೈನ್ ಶಿಕ್ಷಣ,ವರ್ಚುವಲ್ ಸಭೆಗಳು,ಸಂಪರ್ಕರಹಿತ ಬಟವಾಡೆ,ರೊಬೊಟ್‌ಗಳು ಮತ್ತು ಡ್ರೋನ್‌ಗಳ ಬಳಕೆ ಇತ್ಯಾದಿ ಸೇರಿದಂತೆ ಕೊರೊನಾದಿಂದ ರಕ್ಷಿಸಿಕೊಳ್ಳಲು ಹಲವಾರು ತಂತ್ರಜ್ಞಾನಗಳಿಗೆ ಇದು ವೇಗ ತಂದಿದೆ.

ಕೊರೊನಾ ವಿರುದ್ಧ ಹೋರಾಡಲು ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸುವ ಅವಕಾಶ ಮತ್ತು ಅವಶ್ಯಕತೆಯನ್ನು ಕೊರೊನಾ ಸಾಂಕ್ರಾಮಿಕ ಉಂಟು ಮಾಡಿದೆ.ಕೃತಕ ಬುದ್ಧಿಮತ್ತೆ (ಎಐ -ಆರ್ಟಿಫಿಶಿಯಲ್ ಇಂಟೆಲಿಜೆನ್ಸ್),ಅಂತರ್ಜಾಲ ಸಂಬಂಧಿ ಸೇವೆಗಳು,ಬೃಹತ್ ದತ್ತಾಂಶ,ಬ್ಲಾಕ್ ಚೇನ್,೫ಜಿ,ರೊಬೊಟಿಕ್ಸ್,ಡ್ರೋನ್‌ಗಳು,ಜೀನ್ ಎಡಿಟಿಂಗ್ ಮುಂತಾದ ತಂತ್ರಜ್ಞಾನಗಳು ಕೊರೊನಾ ವೈರಸ್ ಪತ್ತೆ,ಮೇಲ್ವಿಚಾರಣೆ,ರೋಗನಿರ್ಣಯ,ಶೋಧಕ,ಕಣ್ಗಾವಲು,ಮ್ಯಾಪಿಂಗ್ ಮಾಡಲು ಹಾಗೂ ಜಾಗೃತಿ ಮೂಡಿಸಲು ಸಹಾಯ ಮಾಡುತ್ತವೆ.ಜಗತ್ತಿನಲ್ಲಿರುವ ದೋಷಗಳ ಮೇಲ್ವಿಚಾರಣೆ,ವೈರಸ್ ಜಾಡು ಪತ್ತೆ,ತಡೆಗಟ್ಟುವಿಕೆ,ನಿಯಂತ್ರಣ,ಚಿಕಿತ್ಸೆ,ಸಂಪನ್ಮೂಲ ಹಂಚಿಕೆ,ಲಸಿಕೆ ಅಭಿವೃದ್ಧಿ,ದಿಢೀರ್ ಮುನ್ಸೂಚನೆಗೆಂದು ಉದಯೋನ್ಮುಖ ತಂತ್ರಜ್ಞಾನಗಳು ತುರ್ತಾಗಿ ಬೇಕಿವೆ.

ಚಾಲ್ತಿಯಲ್ಲಿರುವ ತಂತ್ರಜ್ಞಾನಗಳು

ಟೆಲಿಮೆಡಿಸಿನ್ -ರೋಗಿಗಳು,ಆರೋಗ್ಯ ಕಾರ್ಯಕರ್ತರು ಮತ್ತು ಇತರ ರೋಗಿಗಳ ನಡುವಿನ ದೈಹಿಕ ಸಂಪರ್ಕವನ್ನು ಇದು ಕಡಿಮೆ ಮಾಡುತ್ತದೆ.ಮನೆಯಲ್ಲಿರುವ ರೋಗಿಗಳ ಮಾಹಿತಿಗೆ ಸಂಬಂಧಿಸಿದಂತೆ ನೈಜ-ಸಮಯದಲ್ಲಿ ಮಾಹಿತಿಯನ್ನು ನೀಡುವುದನ್ನು ಧರಿಸಬಹುದಾದ ಸಾಧನಗಳು ಸಾಧ್ಯವಾಗಿಸಿವೆ.

ಥರ್ಮಲ್ ಸ್ಕ್ರೀನಿಂಗ್

ಥರ್ಮಲ್ ಸ್ಕ್ರೀನಿಂಗ್ ತಂತ್ರಜ್ಞಾನವು ವಿಕಿರಣವನ್ನು ಕಂಡುಹಿಡಿಯುವ ಪ್ರಕ್ರಿಯೆಯಾಗಿದೆ.ವಸ್ತುವಿನಿಂದ ಹೊರಸೂಸುವ ವಿಕಿರಣದ ಪ್ರಮಾಣವು ಉಷ್ಣತೆಯೊಂದಿಗೆ ಹೆಚ್ಚಾಗುತ್ತದೆ. ಆದ್ದರಿಂದತಾಪಮಾನದಲ್ಲಿನ ವ್ಯತ್ಯಾಸವನ್ನು ಗುರುತಿಸಲು ಥರ್ಮೋಗ್ರಫಿ ನೆರವಾಗುತ್ತದೆ.ಒಂದು ವೇಳೆ ಯಾರಿಗಾದರೂ ಜ್ವರ ಇದ್ದರೆಅದನ್ನು ಪತ್ತೆ ಮಾಡಲು ಥರ್ಮಲ್ ಸ್ಕ್ರೀನಿಂಗ್ ನೆರವಾಗುತ್ತದೆ.ಆ ಮೂಲಕ ಅವರಲ್ಲಿ ಕೊರೊನಾ ವೈರಸ್ ಸೋಂಕು ಇದೆಯೇ ಎಂಬುದರ ಪರೀಕ್ಷೆ ನಡೆಸಲು ಇದು ಅವಕಾಶ ಮಾಡಿಕೊಡುತ್ತದೆ.

ಮಾಸ್ಕ್ ಧರಿಸಿದ್ದರೂ ಮುಖ ಚಹರೆ ಗುರುತಿಸುವಿಕೆ

ಮುಖ ಗುರುತಿಸುವಿಕೆ ತಂತ್ರಜ್ಞಾನದಲ್ಲಿನ ಆಳವಾದ ಕಲಿಕೆ ಈಗ ಸಾಕಷ್ಟು ಸುಧಾರಿಸಿದ್ದು,ಮುಖಗವಸು ಹಾಕಿಕೊಂಡಿದ್ದರೂ ಅಂತಹ ವ್ಯಕ್ತಿಗಳ ಚಹರೆಯನ್ನು ಶೇಕಡಾ 65 ರವರೆಗಿನ ನಿಖರತೆಯೊಂದಿಗೆ ಗುರುತಿಸಲು ಸಾಧ್ಯವಾಗಿದೆ.ಸಾಮಾಜಿಕ ಜಗತ್ತು ಹಾಗೂ ದೇಶಗಳ ಭದ್ರತಾ ದೃಷ್ಟಿಯಿಂದ ಇದು ಬಹಳ ಮುಖ್ಯ ಮತ್ತು ಹೆಚ್ಚು ಅವಶ್ಯಕವಾದ ತಂತ್ರಜ್ಞಾನ ಎನಿಸಿದೆ.

ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ)

ಮಾಹಿತಿ ಸಂಸ್ಕರಣೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಿಂದಾಗಿ ವೈರಸ್ ರೋಗ ನಿರ್ಣಯದ ನಿಖರತೆ,ವೇಗ ಮತ್ತು ದಕ್ಷತೆಯನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಸುಧಾರಿಸುತ್ತದೆ.ನಿರ್ದಿಷ್ಟ ರೋಗಿಗೆ ಸರಿಯಾದ ಚಿಕಿತ್ಸಾ ಕ್ರಮವನ್ನು ಪತ್ತೆ ಮಾಡಲು ವೈದ್ಯರಿಗೆ ಹಾಗು ವೈದ್ಯ ತಂತ್ರಜ್ಞರಿಗೆ ಎಐ-ಚಾಲಿತ ವಿಶ್ಲೇಷಣೆ ನೆರವಾಗುವುದರಿಂದ ಆರಂಭಿಕ ಚಿಕಿತ್ಸೆಯನ್ನು ಇದರ ಮೂಲಕವೇ ಸಾಧಿಸಲು ಸಾಧ್ಯವಿದೆ.ಯಂತ್ರ ಕಲಿಕೆ ಕ್ರಮಾವಳಿಗಳೊಂದಿಗೆ (ಆಲ್ಗೋರಿದಮ್),ರಾಸಾಯನಿಕ ಮತ್ತು ಜೈವಿಕ ಸಂವಹನಗಳ ಹುಡುಕಾಟವನ್ನು ಮುಂದುವರಿಸುವ ಮೂಲಕ ಔಷಧ ಅಭಿವೃದ್ಧಿಯನ್ನು ಸುಧಾರಿಸಬಹುದು.ಹೊಸ ಲಸಿಕೆಗಳನ್ನು ತ್ವರಿತವಾಗಿ ಮಾರುಕಟ್ಟೆಗೆ ತರಲು ಇದು ಸಹಾಯ ಮಾಡುತ್ತದೆ.

ಸಾಂಕ್ರಾಮಿಕ ಸಮಯದಲ್ಲಿ ಭೌಗೋಳಿಕ ಸೇವೆಗಳು

ಸಾಂಕ್ರಾಮಿಕ ಸಮಯದಲ್ಲಿ ಬಳಕೆಯಲ್ಲಿರುವ ಪ್ರಮುಖ ಭೌಗೋಳಿಕ ನಿರ್ದಿಷ್ಟ ಸೇವೆಗಳು ಸ್ಥಳ ಆಧಾರಿತ ಸೇವೆಯಾಗಿದೆ.ಇದು ಜಾಗತಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯನ್ನು (ಜಿಎನ್‌ಎಸ್‌ಎಸ್ -ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್)ಅವಲಂಬಿಸಿರುತ್ತದೆ.ಲಾಕ್‌ಡೌನ್‌ಗಳಿಂದಾಗಿ ಸರಕು ಮತ್ತು ವೈದ್ಯಕೀಯ ಸೇವೆಗಳನ್ನು ಮನೆಗಳಿಗೆ ವಿತರಿಸುವುದು ಹಾಗೂ ಕೋವಿಡ್ ಜಾಡುಪತ್ತೆಯಂತಹ ಸ್ಥಳ ಗುರುತಿಸುವಿಕೆ ಕೆಲಸಗಳಿಗೆ ಇದು ಅತ್ಯಗತ್ಯ ಸೇವೆಯಾಗಿದೆ.

ಕ್ವಾಂಟಮ್ ಕಂಪ್ಯೂಟಿಂಗ್

ಈ ಹೊಸ ರೀತಿಯ ಕಂಪ್ಯೂಟರ್‌ನ ಒಂದು ಪ್ರಮುಖ ಬಳಕೆ ಯಾವುದೆಂದರೆ ಸಂಕೀರ್ಣ ರಾಸಾಯನಿಕ ಕ್ರಿಯೆಗಳನ್ನು ಅನುಕರಿಸುವುದು.ಔಷಧ ಅಭಿವೃದ್ಧಿಪಡಿಸುವಲ್ಲಿ ಹೊಸ ಮಾರ್ಗಗಳನ್ನು ತೆರೆಯುವ ಒಂದು ಪ್ರಬಲ ಸಾಧನ ಇದಾಗಿದೆ.ಶೀಘ್ರದಲ್ಲೇ ಇದನ್ನು ಬದಲಾಯಿಸಲು ಕ್ವಾಂಟಮ್ ಕಂಪ್ಯೂಟರ್‌ಗಳಿಗೆ ಸಾಧ್ಯವಾಗುತ್ತದೆ.ಉತ್ಪನ್ನ ಅಭಿವೃದ್ಧಿ ಪುನರಾವರ್ತನೆಗಳನ್ನು ಇವು ಗಮನಾರ್ಹವಾಗಿ ಕಡಿಮೆ ಮಾಡುವುದಲ್ಲದೇ ಸಂಶೋಧನೆ ಹಾಗೂ ಅಭಿವೃದ್ಧಿ ವೆಚ್ಚವನ್ನೂ ತಗ್ಗಿಸಬಲ್ಲವು.

ಕೋವಿಡ್ ಸಾಂಕ್ರಾಮಿಕ ರೋಗದೊಂದಿಗೆ ಹೋರಾಡಲು ಹೊಸ ತಾಂತ್ರಿಕ ಆವಿಷ್ಕಾರಗಳು

‘ಪ್ಲಾಟ್’ ಹೆಸರಿನ ಕಂಪನಿಯೊಂದು ‘ಎಟ್ಟಿ’ ಹೆಸರಿನ ಕರೆಗಂಟೆಯೊಂದನ್ನು ಅಭಿವೃದ್ಧಿಪಡಿಸಿದೆ.ಬಾಗಿಲು ತೆರೆಯುವ ಮುನ್ನ ಇದು ಜನರ ಉಷ್ಣತೆಯನ್ನು ಅಳೆಯಬಲ್ಲುದು.ಅದರ ಆಧಾರದ ಮೇಲೆ ಬಾಗಿಲನ್ನು ತೆರೆಯಬೇಕೇ ಬೇಡವೇ ಎಂಬುದನ್ನು ನಿರ್ಧರಿಸಬಲ್ಲುದು.ಇಂತಹ ಇನ್ನೊಂದು ಕಂಪನಿ ‘ಅಲಾರ್ಮ್.ಕಾಮ್’.ಇದು ಸಂಪರ್ಕರಹಿತ ಕರೆಗಂಟೆಯನ್ನು ಅಭಿವೃದ್ಧಿಪಡಿಸಿದ್ದು,ನಾವು ಸ್ಪರ್ಶಿಸುವ ಸ್ಥಳಗಳಲ್ಲಿ ಹೆಚ್ಚಾಗಿ ಬಿಡುವ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಹರಡುವಿಕೆಯನ್ನು ಕಡಿತಗೊಳಿಸುವ ಉದ್ದೇಶವನ್ನು ಹೊಂದಿದೆ.ಅಲಾರ್ಮ್.ಕಾಮ್ ಕರೆಗಂಟೆಯನ್ನು ನೀವು ಒತ್ತಬೇಕಿಲ್ಲ.ಸ್ವಾಗತ ಕೋರುವ ಚಾಪೆಯ ಮೇಲೆ ನಿಂತರೆ ಸಾಕು.

ಕಾರ್ಪೊರೇಟ್ ಕಚೇರಿ,ಚಿಲ್ಲರೆ ಅಂಗಡಿ ಅಥವಾ ರೆಸ್ಟೋರೆಂಟ್‌ನಲ್ಲಿ ಹೆಚ್ಚಿನ ಸ್ಪರ್ಶ ಹಾಗೂ ಜಾಸ್ತಿ ದಟ್ಟಣೆ ಹೊಂದಿರುವ ಪ್ರದೇಶಗಳನ್ನು ಸೋಂಕುರಹಿತಗೊಳಿಸಲು ‘ನೇರಳಾತೀತ ಬೆಳಕು’ (ಅಲ್ಟ್ರಾ ವಯಲೆಟ್ ಕಿರಣ)ಹೊರಸೂಸುವ ‘ರೋಬೋಟ್‌ಗಳು’ ಈಗಾಗಲೇ ಇವೆ.ಆಸ್ಪತ್ರೆ ದರ್ಜೆಯ ನಿಖರತೆಯೊಂದಿಗೆ ನೆಗಡಿ ಸ್ವರೂಪದ ರೋಗಲಕ್ಷಣಗಳನ್ನು ಕಂಡುಹಿಡಿಯಲು ನಿಮ್ಮ ದೇಹಕ್ಕೆ ಅಂಟಿಕೊಳ್ಳುವ ‘ಸಂವೇದಕಗಳು’ ಇವೆ.ಅಂತರ್ನಿರ್ಮಿತ ಮೈಕ್ರೊಫೋನ್ ಹೊಂದಿರುವ ‘ಮುಖವಾಡ’ವೂ ಇದೆ.ಮುಖಗವಸು ಹಾಕಿಕೊಂಡಿದ್ದರೂ ಇದರ ಮೂಲಕ ನೀವು ಸುಲಭವಾಗಿ ದೂರವಾಣಿ ಕರೆ ಮಾಡಬಹುದು ಹಾಗೂ ಆಲಿಸಬಹುದು.ಇದರ ಹೆಸರು ಮಾಸ್ಕ್‌ಫೋನ್. ‘ಮಾಸ್ಕ್‌ಫೋನ್’ ದೈನಂದಿನ ಅವಶ್ಯಕವಾಗಿದ್ದು ನಿಮ್ಮನ್ನು ದಾಟಿ ಹೋಗುವ ಯಾರಾದರೂ ಹಾನಿಕಾರಕ ಬ್ಯಾಕ್ಟೀರಿಯಾ,ವೈರಸ್‌ಗಳು ಮತ್ತು ಮಾಲಿನ್ಯ ಹೊಂದಿದ್ದರೆ,ಅವುಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಇದು ನೆರವಾಗುತ್ತದೆ.

ಅಂತಹ ಇನ್ನೊಂದು ಮುಖವಾಡವೆಂದರೆ “ಏರ್‌ಪಾಪ್ ಆಕ್ಟಿವ್+”.ನಿಮ್ಮ ಮಾಸ್ಕ್‌ನ ಫಿಲ್ಟರ್ ಅನ್ನು ನೀವು ಬದಲಾಯಿಸುವುದು ಯಾವಾಗ ಎಂಬುದನ್ನು ಇದು ಸೂಚಿಸುತ್ತದೆ.ನಿಮ್ಮ ಉಸಿರಾಟವನ್ನು ಪತ್ತೆಹಚ್ಚಿ,ಸ್ಥಳೀಯ ಗಾಳಿಯ ಗುಣಮಟ್ಟದ ದತ್ತಾಂಶದೊಂದಿಗೆ ಅದನ್ನು ತುಲನೆ ಮಾಡುವ ಮೂಲಕ ನಿಮಗೆ ಫಿಲ್ಟರ್ ಬದಲಾವಣೆಗೆ ಸೂಚನೆ ನೀಡುತ್ತದೆ.ಇಂತಹ ಮತ್ತೊಂದು ಸ್ಮಾರ್ಟ್ ಮಾಸ್ಕ್ ಅಂದರೆ ‘ಅಮಾಜ್‌ಫಿಟ್’ ಪಾರದರ್ಶಕ-ಸೋಂಕುನಿವಾರಕ ಮಾಸ್ಕ್ ಇದಾಗಿದ್ದು, 10 ನಿಮಿಷಗಳಲ್ಲಿ ಅತಿನೇರಳೆ ಕಿರಣಗಳ ಮೂಲಕ ಫಿಲ್ಟರ್‌ಗಳನ್ನು ಸ್ವಚ್ಛಗೊಳಿಸುವುದಾಗಿ ಹೇಳಲಾಗುತ್ತದೆ.

ಫ್ಲೂ ಲ್ಯಾಬ್ಸ್ ’ಫ್ಲೊ’ ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದೆ.ಪರಾಗ,ಧೂಳು ಮತ್ತು ಇತರ ಅಲರ್ಜಿಗಳು ನಿಮ್ಮ ದೇಹವನ್ನು ಪ್ರವೇಶಿಸಿದಾಗ ನಿಮ್ಮ ದೇಹವು ಹಿಸ್ಟಮೈನ್‌ಗಳನ್ನು ಬಿಡುಗಡೆ ಮಾಡುವುದನ್ನು ಇದು ತಡೆಯುತ್ತದೆ.ನಿಮ್ಮ ಮೂಗಿನ ಹೊಳ್ಳೆಗೆ ಫ್ಲೊ ಅನ್ನು ಸೇರಿಸಿ ಮತ್ತು ಅದನ್ನು 10 ಸೆಕೆಂಡುಗಳ ಕಾಲ ಕೆಲಸ ಮಾಡಲು ಬಿಡಿ.ಇದೇ ರೀತಿ ಮೂಗಿನ ಇನ್ನೊಂದು ಹೊಳ್ಳೆಯಲ್ಲಿ ಪುನರಾವರ್ತಿಸಿ.ಹಿಸ್ಟಮೈನ್ಗಳ ಬಿಡುಗಡೆಯನ್ನು ನಿಲ್ಲಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಇದು ತರಂಗಾಂತರ,ಡೋಸೇಜ್,ಶಕ್ತಿ ಮತ್ತು ನಾಡಿ ರಚನೆಯ ನಿಖರವಾದ ಸಮತೋಲನದಲ್ಲಿ ಕೆಂಪು ಮತ್ತು ಎನ್‌ಐಆರ್ (ಅತಿನೇರಳೆ ಕಿರಣಕ್ಕೆ ಹತ್ತಿರ)ಬೆಳಕನ್ನು ಬಳಸುತ್ತದೆ.

“ಹೆಲ್ತಿ ಯು” ಮೂಲಕ ಮನೆಯಲ್ಲಿ ಸಂಪೂರ್ಣ ಹೃದಯ ಮೇಲ್ವಿಚಾರಣೆ : ಎಚ್‌ಡಿ ಮೆಡಿಕಲ್ ಸಂಸ್ಥೆಯು ಏಳು-ಎಲೆಕ್ಟ್ರೋಡ್‌ಗಳ ಇಸಿಜಿ,ತಾಪಮಾನ ಸಂವೇದಕ,ಪಲ್ಸ್ ಆಕ್ಸಿಮೀಟರ್,ಹೃದಯ ಮತ್ತು ಶ್ವಾಸಕೋಶದ ಶಬ್ದಗಳನ್ನು ದಾಖಲಿಸಲು ಮೈಕ್ರೊಫೋನ್,ಹೃದಯ ಬಡಿತ ಮಾನಿಟರ್ ಮತ್ತು ರಕ್ತದೊತ್ತಡ ಸಂವೇದಕವನ್ನು ಕಂಡುಹಿಡಿದಿದ್ದು,ಇದು ಗೋಪ್ರೊ ಕ್ಯಾಮೆರಾಕ್ಕಿಂತ ಚಿಕ್ಕದಾಗಿದ್ದು,ತಂತ್ರಜ್ಞಾನ ಬಳಕೆ ತಿಳಿದಿರಲಿ ಅಥವಾ ತಿಳಿಯದಿರಲಿ,ಯಾರು ಬೇಕಾದರೂ ಇದನ್ನು ಸುಲಭವಾಗಿ ಬಳಸಬಹುದಾಗಿದೆ.

ನಿಮ್ಮ ವೈದ್ಯರಿಗೆ ದತ್ತಾಂಶವನ್ನು ಕಳುಹಿಸುವ ಸಂಪರ್ಕಿತ ರಕ್ತದೊತ್ತಡದ ಪಟ್ಟಿ:ಓಮ್ರಾನ್’ ನಿಮ್ಮ ರಕ್ತದೊತ್ತಡವನ್ನು ಮನೆಯಲ್ಲಿ ತೆಗೆದುಕೊಂಡು ಆ ದತ್ತಾಂಶಗಳನ್ನು ನಿಮ್ಮ ವೈದ್ಯರಿಗೆ ಕಳಿಸುವುದನ್ನು ಹಿಂದೆಂದಿಗಿಂತಲೂ ಸುಲಭವಾಗಿಸುತ್ತಿದೆ.ಕಂಪನಿಯ ಹೊಸ ಓಮ್ರಾನ್ ‘ವೈಟಲ್‌ಸೈಟ್ ಕಿಟ್’ ರಕ್ತದೊತ್ತಡದ ಕಫ್,ಮಾಪಕ ಹಾಗೂ ಸುರಕ್ಷಿತ ಮೋಡೆಮ್-ಸುಸಜ್ಜಿತ ಡೇಟಾ ಜಾಲದೊಂದಿಗೆ ಬರುತ್ತದೆ ಹಾಗೂ ನಿಮ್ಮ ರಕ್ತದೊತ್ತಡ ವಿವರಗಳನ್ನು ಸ್ವಯಂಚಾಲಿತವಾಗಿ ನಿಮ್ಮ ವೈದ್ಯರಿಗೆ ಕಳಿಸಿಕೊಡುತ್ತದೆ.

ಭಾರತದ ಇತ್ತೀಚಿನ ತಂತ್ರಜ್ಞಾನಗಳು:

ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕ ಉಲ್ಬಣಗೊಳ್ಳುತ್ತಿದ್ದಂತೆ,ದೇಶದ ಉದ್ಯಮಿಗಳು ಬಿಕ್ಕಟ್ಟನ್ನು ಎದುರಿಸಲು ಹೆಚ್ಚಿನ ತಂತ್ರಜ್ಞಾನದ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ.ಅವುಗಳಲ್ಲಿ ಕೆಲವು ಹೀಗಿವೆ...

ವೆರ್‌ಲೂಪ್.ಐಒ

‘ವೆರ್‌ಲೂಪ್.ಐಒ’ ಎನ್ನುವುದು ಸಂವಾದಾತ್ಮಕ ವಾಟ್ಸಾಪ್ ಸ್ವಯಂಚಾಲಿತ ಚಾಟ್ ಪ್ರೋಗ್ರಾಮ್ ಆಗಿದೆ.ಇದು ಆಮ್ಲಜನಕ ಸಿಲಿಂಡರ್‌ಗಳ ಸಂಗ್ರಹಣೆ ಮತ್ತು ವಿತರಣೆಗೆ ಸಹಾಯ ಮಾಡುತ್ತದೆ ಹಾಗೂ ಲಸಿಕೆ ಪಡೆಯಲೆಂದೇ ಮೀಸಲಾದ ವೆಬ್‌ಸೈಟ್‌ನಲ್ಲಿ ಸೂಕ್ತ ಅವಧಿ ಪತ್ತೆ ಮಾಡಲು ನೆರವಾಗುವಂತೆ ಕಾರ್ಯನಿರ್ವಹಿಸುತ್ತಿದೆ.ಅವರವರ ರಾಜ್ಯ ಮತ್ತು ಜಿಲ್ಲೆಯನ್ನು ಆಯ್ದುಕೊಂಡು,ಕೇವಲ ಮೊಬೈಲ್ ಸಂಖ್ಯೆ ನಮೂದಿಸಿದರೆ ಒಟಿಪಿ ಬರುತ್ತದೆ.ಅದನ್ನು ನಮೂದಿಸಿದರೆ,ಸೂಕ್ತವಾದ ಮಾಹಿತಿಯನ್ನು ನೋಂದಾಯಿಸಿದವರಿಗೆ ತಿಳಿಸುತ್ತದೆ.ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬೆಂಗಳೂರು ಮೂಲದ ಆಟೊಮೇಷನ್ ಪ್ಲಾಟ್‌ಫಾರ್ಮ್ ವರ್ಲೂಪ್.ಐಓ ಕೈ ಜೋಡಿಸಿದೆ.ನಗರದಲ್ಲಿ ಆಮ್ಲಜನಕ ಸಿಲಿಂಡರ್‌ಗಳ ಲಭ್ಯತೆ ಕಂಡುಹಿಡಿಯಲು ಸಂವಾದಾತ್ಮಕ ವಾಟ್ಸಾಪ್ ಸ್ವಯಂಚಾಲಿತ ಪ್ರೋಗ್ರಾಮನ್ನು ನಿಯೋಜಿಸಿದೆ.ವೆರ್‌ಲೂಪ್.ಐಒ ಮೂಲತಃ ಆಮ್ಲಜನಕ ಅಗತ್ಯವಿರುವವರು ಹಾಗೂ ಅದನ್ನು ಹೊಂದಿರುವ ವ್ಯಕ್ತಿಗಳು ಮತ್ತು ಆಸ್ಪತ್ರೆಗಳ ನಡುವೆ ಇದು ಸಂವಹನವನ್ನು ರೂಪಿಸುತ್ತಿದೆ.

ಕೊರೊನಾ ಓವನ್

ಬೆಂಗಳೂರಿನ ಪ್ರಧಾನ ಕಚೇರಿಯ ನ್ಯಾನೊತಂತ್ರಜ್ಞಾನದ ನವೋದ್ಯಮವಾದ ಲಾಗ್ 9 ಮೆಟೀರಿಯಲ್ಸ್,ಯುವಿ-ಸಿ (ಅತಿನೇರಳೆ-ಸಿ)ಬೆಳಕನ್ನು (253.7 ನ್ಯಾನೊ ಮೀಟರ್ ತರಂಗಾಂತರವನ್ನು ಹೊಂದಿರುವ)ಬಳಕೆಯನ್ನು ಮಾಡುವ ಕರೋನಾ ಆವನ್ ಹೆಸರಿನ ಮೊದಲ ಉತ್ಪನ್ನದೊಂದಿಗೆ ಬಂದಿದೆ.ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಸೇರಿದಂತೆ ಸೂಕ್ಷ್ಮಜೀವಿಗಳಿಂದ ಯಾವುದೇ ಮೇಲ್ಮೈಯನ್ನು (ವಿವಿಧ ವಸ್ತುಗಳು,ವೈಯಕ್ತಿಕ ರಕ್ಷಣಾ ಸಾಧನಗಳು,ಇತ್ಯಾದಿ) 4 ನಿಮಿಷಗಳಲ್ಲಿ ಈ ಸಾಧನವು ಸೋಂಕುರಹಿತಗೊಳಿಸುತ್ತದೆ.

ವಿಸ್ಟಾರ್ ಏರ್ ಪ್ಯೂರಿಫೈಯರ್ಸ್ -ದೆಹಲಿ ಮೂಲದ ಏರ್‌ಓಕ್ ಸಂಸ್ಥೆಯು,ಪ್ರಮುಖ ಮಾಲಿನ್ಯಕಾರಕಗಳು ಮತ್ತು ಅನಿಲ ಪದಾರ್ಥಗಳನ್ನು ಫಿಲ್ಟರ್ ಮಾಡಲು ಇಜಿಎಪಿಎ (ಎಫೀಸಿಯಂಟ್ ಗ್ರ್ಯಾನ್ಯುಲರ್ ಅಬ್ಸಾರ್ಬೆಂಟ್ ಪಾರ್ಟಿಕುಲೇಟ್ ಅರೆಸ್ಟರ್)ಎಂಬ ಪೇಟೆಂಟ್ ಫಿಲ್ಟರ್ ತಂತ್ರಜ್ಞಾನವನ್ನು ಬಳಸುವ ಗಾಳಿ ಶೋಧಕಗಳನ್ನು ತಯಾರಿಸುತ್ತದೆ.

ಮಿಲಾಗ್ರೊ ಸೀಗಲ್

ಇದು ಭಾರತೀಯ ಗ್ರಾಹಕ ಬ್ರ್ಯಾಂಡ್ ಆಗಿರುವ ಮಿಲಾಗ್ರೊರಿಂದ ಆವಿಷ್ಕರಿಸಲ್ಪಟ್ಟ ಸ್ವಚ್ಛಗೊಳಿಸುವ ರೊಬೊಟ್ ಆಗಿದೆ.ಬಳಕೆದಾರರ ಸಾಧನವನ್ನು ಸ್ವಚ್ಛಗೊಳಿಸುವಾಗ ಕೆಲಸದ ಪ್ರಗತಿ ಮತ್ತು ನಕ್ಷೆಯನ್ನು ನೈಜ ಸಮಯದಲ್ಲಿ ಪ್ರದರ್ಶಿಸುತ್ತದೆ.ತೆಗೆದುಕೊಂಡ ಸಮಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ರೋಬೋಟ್ ಪ್ರತಿ ಪ್ರದೇಶದಲ್ಲಿ ನೈಜ ಸಮಯದಲ್ಲಿ ಮಾರ್ಗವನ್ನು ಯೋಜಿಸುತ್ತದೆ.ಈ ರೋಬೋಟ್ ನಿರ್ವಾತವು ಬ್ಯಾಕ್ಟೀರಿಯಾ ವಿರೋಧಿ,ಸೂಕ್ಷ್ಮಜೀವಿ ವಿರೋಧಿಯಾಗಿದ್ದಲ್ಲದೇ ವೈರಸ್ ಪ್ರತಿರೋಧ ಗುಣಲಕ್ಷಣಗಳನ್ನು ಸಹ ಹೊಂದಿದೆ.ಆಸ್ಪತ್ರೆಗಳು ಮತ್ತು ಅಂತಹ ಪರಿಸರದಲ್ಲಿ ಸೋಂಕುಗಳ ಹರಡುವಿಕೆಯನ್ನು ಕಡಿಮೆ ಮಾಡಲು ನೈಜ-ಸಮಯದ ಸಹಾಯ ಮಾಡುತ್ತದೆ ಎನ್ನಲಾಗಿದೆ.

ಡುಝೀ-ಡುಝೀ

ಡುಝೀ-ಡುಝೀ ಎಂಬುದು ಟರ್ಟಲ್ ಶೆಲ್ ಟೆಕ್ನಾಲಜೀಸ್ ಸಂಸ್ಥೆ ಸೃಷ್ಟಿಸಿರುವ ಸಾಧನವಾಗಿದ್ದು,ಪರಿಸ್ಥಿತಿಗಳ ನಿಖರವಾದ ರೋಗನಿರ್ಣಯದೊಂದಿಗೆ ಉತ್ತಮ ಆರೋಗ್ಯ ಸೇವೆಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ.ಈ ಸಾಧನವು ವಿವಿಧ ಕಾಯಿಲೆಗಳ ಪ್ರಾಥಮಿಕ ರೋಗನಿರ್ಣಯಕ್ಕೆ ಸಹಾಯ ಮಾಡುತ್ತದೆ ಹಾಗೂ ಆಸ್ಪತ್ರೆಗಳಿಗೆ ಭೇಟಿ ನೀಡಲು ಮತ್ತು ಬಹು ಪರೀಕ್ಷೆಗಳ ಮೂಲಕ ಹೋಗಲು ಬಳಕೆಯಾಗುವ ಸಮಯವನ್ನು ಕಡಿಮೆ ಮಾಡುತ್ತದೆ.ಸ್ಮಾರ್ಟ್ ಸಂಪರ್ಕ-ಮುಕ್ತ ಆರೋಗ್ಯ ಮಾನಿಟರ್ ಇದಾಗಿದ್ದು,ಇದನ್ನು ಸುಲಭವಾಗಿ ಹಾಸಿಗೆ ಕೆಳಗೆ ತೂರಿಸಿಡಬಹುದು.ಹೃದಯದ ಆರೋಗ್ಯ,ಒತ್ತಡ,ನಿದ್ರೆಯ ಗುಣಮಟ್ಟ ಮುಂತಾದ ಮಾಪಕಗಳ ಮೂಲಕ ವ್ಯಕ್ತಿಯ ಆರೋಗ್ಯ ಸ್ಥಿತಿಯ ಜಾಡಿನ ಮೇಲೆ ನಿಗಾ ಇಡುತ್ತದೆ.ಸ್ಮಾರ್ಟ್‌ಫೋನ್‌ಗಳಲ್ಲಿ ಸುಲಭವಾಗಿ ಸ್ಥಾಪಿಸಬಹುದಾದ ಡುಝೀ ಅಪ್ಲಿಕೇಶನ್‌ಗಳ ಮೂಲಕ ವಿವರವಾದ ವಿಶ್ಲೇಷಣೆ ವರದಿಯನ್ನು ಇದು ನೀಡುತ್ತದೆ.

ಉಪಸಂಹಾರ

ದೇಶದಲ್ಲಿ ವ್ಯಾಪಕವಾಗಿರುವ ಕೋವಿಡ್ ವೈರಸ್ ಅನ್ನು ನಿಯಂತ್ರಿಸುವಲ್ಲಿ ಮತ್ತು ನಿರ್ವಹಿಸುವಲ್ಲಿತಂತ್ರಜ್ಞಾನವು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತಿದೆ.ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು,ಮಾಸ್ಕ್‌ಗಳನ್ನು ಧರಿಸುವುದು,ಮನೆಯಿಂದ ಕೆಲಸ ಮಾಡುವುದು ಮತ್ತು ಮನೆಗಳಲ್ಲಿ ಉಳಿಯುವುದಕ್ಕೆ ಸಂಬಂಧಿಸಿದಂತೆ ಅತ್ಯುಚ್ಚ ಪಾತ್ರವನ್ನು ನಿರ್ವಹಿಸುತ್ತಿದೆ.

ತಂತ್ರಜ್ಞಾನದ ಜೊತೆಗೆ ‘ಜಾಗತಿಕ ಆರೋಗ್ಯ ರಕ್ಷಣೆ’ಯ ದೃಷ್ಟಿಕೋನವು ಪ್ರತಿಯೊಬ್ಬರಿಗೂ,ಎಲ್ಲೆಡೆ ಸೂಕ್ತವಾದ,ಕೈಗೆಟುಕುವ,ಅಳತೆಗೆ ಸಿಗುವಂತಹ ಹಾಗೂ ಸುಸ್ಥಿರ ಡಿಜಿಟಲ್ ತಂತ್ರಜ್ಞಾನ ಆರೋಗ್ಯ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಸುಧಾರಿಸುವುದು.ನಮ್ಮ ಪ್ರಸ್ತುತ ಅವಶ್ಯಕತೆಗಳಿಗೆ ಅನುಗುಣವಾಗಿ ನಾವು ಎಷ್ಟು ಬೇಗನೆ ಹೊಸ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸಬಹುದು,ಹೊಂದಿಕೊಳ್ಳಬಹುದು,ನವೀನಗೊಳಿಸಬಹುದು ಮತ್ತು ರಚಿಸಬಹುದು ಎಂಬುದು ಮುಖ್ಯವಾಗುತ್ತದೆ.ಹೊಸ ಸ್ಥಿರ ತಂತ್ರಜ್ಞಾನಗಳು,ಉಷ್ಣ ಸ್ಥಿರ ಲಸಿಕೆಗಳು,ಮೆದುಳಿನಲ್ಲಿರುವ ಹೊಲೊಗ್ರಾಮ್‌ಗಳು,ಆಪ್ಟೊಜೆನೆಟಿಕ್ಸ್,ಮೆದುಳಿನ ಕೋಶಗಳ ಚಟುವಟಿಕೆಯನ್ನು ನಿಯಂತ್ರಿಸುವ ತಂತ್ರಗಳು,ಆಣ್ವಿಕ ಜೀವಶಾಸ್ತ್ರದ ಇತ್ತೀಚಿನ ಪ್ರಗತಿಯೊಂದಿಗೆ ಉತ್ತಮ ಪ್ರತಿಕಾಯಗಳನ್ನು ನಿರ್ಮಿಸುವ ಮೂಲಕ ಜಗತ್ತಿನಾದ್ಯಂತ ಕೊರೊನಾ ವೈರಸ್ ವಿರುದ್ಧ ಹೋರಾಡುವಲ್ಲಿ ಬಲವಾದ ಸಂಶೋಧನಾ ಕೇಂದ್ರೀಕೃತ ಪ್ರಯತ್ನಗಳಾಗಿವೆ.

ವೈದ್ಯಕೀಯ ಮತ್ತು ವೈಜ್ಞಾನಿಕ ಸಮುದಾಯವು ಜಾಗತಿಕ ವೇದಿಕೆಯಲ್ಲಿ ಪರಸ್ಪರ ಸಹಯೋಗದ ಮೂಲಕ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದೆ.ಅಂತಿಮವಾಗಿ,ಕೊರೊನಾವಿರುದ್ಧದ ಹೋರಾಟವು ಕೇವಲ ಓಟವಾಗಿರದೇ ಮ್ಯಾರಥಾನ್ ಆಗಿದೆ.ಅದು ಮುಂದುವರೆದಂತೆಜನರು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಹಾ ಲಭ್ಯವಿರುವ ಪ್ರತಿಯೊಂದು ತಾಂತ್ರಿಕ ಸಾಧನವನ್ನು ಬಳಸಿಕೊಂಡು ಜನರನ್ನು ಸುರಕ್ಷಿತವಾಗಿ ಮತ್ತು ಜೀವಂತವಾಗಿರಿಸಿಕೊಳ್ಳಬೇಕಾಗುತ್ತದೆ.

ABOUT THE AUTHOR

...view details