ಕರ್ನಾಟಕ

karnataka

ETV Bharat / bharat

ವಿವಾಹವಾಗಬೇಕಿದ್ದ ರಾಷ್ಟ್ರೀಯ ಶೂಟರ್ ಕೊನಿಕಾ ಲಯಕೀಸ್ ಶವವಾಗಿ ಪತ್ತೆ - ಕೊನಿಕಾ ಲಯಕೀಸ್ ಸಾವು

ಕೊನಿಕಾ ಲಾಯಕ್ ಅವರ ವಿವಾಹವನ್ನು ಫೆಬ್ರವರಿ ವೇಳೆಗೆ ನೆರವೇರಿಸಲು ಯೋಜಿಸಲಾಗಿತ್ತು. ಆದರೆ ಅವರು ಇಂದು ಶವವಾಗಿ ಪತ್ತೆಯಾಗಿದ್ದಾರೆ.

national-shooter-konika-died-in-kolkata-in-suspicious-condition
ರಾಷ್ಟ್ರೀಯ ಶೂಟರ್ ಕೊನಿಕಾ ಲಯಕೀಸ್ ಶವವಾಗಿ ಪತ್ತೆ

By

Published : Dec 16, 2021, 6:06 PM IST

ಧನ್ಬಾದ್ (ಜಾರ್ಖಂಡ್):ರಾಷ್ಟ್ರೀಯ ಶೂಟರ್ ಕೊನಿಕಾ ಲಾಯಕ್ ಕೋಲ್ಕತ್ತಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ರೈಫಲ್ ಶೂಟಿಂಗ್‌ನಲ್ಲಿನ ಅತ್ಯುತ್ತಮ ಸಾಧನೆಗಳಿಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಹಾಗೆ ಜಾರ್ಖಂಡ್ ರಾಜ್ಯಕ್ಕೆ ಹೆಚ್ಚು ಖ್ಯಾತಿಯನ್ನೂ ಸಹ ತಂದುಕೊಟ್ಟಿದ್ದರು.

ಇತ್ತೀಚೆಗೆ ಅವರು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗಾಗಿ ಕೋಲ್ಕತ್ತಾದ ಜೈದೀಪ್ ಕರ್ಮಾಕರ್ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಇದಕ್ಕೆ ನಟ ಸೋನು ಸೂದ್ ಅವರು ಸಹ ಬೆಂಬಲ ನೀಡಿದ್ದರು.

ಕೊನಿಕಾ ಲಯಕ್ ಅವರ ವಿವಾಹವನ್ನು ಫೆಬ್ರವರಿ ವೇಳೆಗೆ ನೆರವೇರಿಸಲು ಪೋಷಕರು ಮುಂದಾಗಿದ್ದರು ಎಂದು ತಿಳಿದುಬಂದಿದೆ. ಈ ಎಲ್ಲಾ ಸಂತೋಷದ ಸಂದರ್ಭದ ನಡುವೆ ಭಯಾನಕ ಘಟನೆ ನಡೆದು ಹೋಗಿದೆ. ಆಕೆ ಹಠಾತ್ ಸಾವು ಹಲವಾರು ಅನುಮಾನಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ :ಹೆಣ್ಣು ಮಕ್ಕಳ ಮದುವೆಯನ್ನು ಇನ್ನು ಈ ವಯಸ್ಸಿನಲ್ಲಿ ಪೋಷಕರು ಮಾಡಬೇಕು..!

ಶೂಟರ್​ ಸಾವಿಗೆ ಕಾರಣ ತಿಳಿಯಲು ತನಿಖೆ ನಡೆಸಲಾಗುವುದು ಮತ್ತು ಮರಣೋತ್ತರ ಪರೀಕ್ಷೆಯ ನಂತರವೇ ಸಂಬಂಧಿತ ಮಾಹಿತಿ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊನಿಕಾ 2014 ರಲ್ಲಿ ಶೂಟಿಂಗ್ ಅಭ್ಯಾಸ ಪ್ರಾರಂಭಿಸಿದ್ದರು. ನಂತರ ಅವರು ಸ್ವಲ್ಪ ಸಮಯದವರೆಗೆ ಎರವಲು ಪಡೆದ ರೈಫಲ್‌ನೊಂದಿಗೆ ಅದೇ ಅಭ್ಯಾಸವನ್ನು ಮಾಡುತ್ತಿದ್ದರು. ಇದಾದ ನಂತರ ಈ ಬಗ್ಗೆ ಸೋನು ಸೂದ್ ಅವರಿಗೆ ಟ್ವೀಟ್ ಮಾಡುವ ಮೂಲಕ ಈವಿಟಿ ಭಾರತ್ ಆಕೆಯ ಸಹಾಯ ಮಾಡಬೇಕು ಎಂದು ಮನವಿ ಮಾಡಿತ್ತು. ಇವೆಲ್ಲವನ್ನೂ ವೀಕ್ಷಿಸಿದ ಗಣ್ಯರು ಆಕೆಗೆ ಸಹಾಯ ನೀಡಿದ್ದರು.

ಸೋನು ಸೂದ್​ ಅವರಿಂದ ಜರ್ಮನ್ ರೈಫಲ್ ಪಡೆದುಕೊಂಡು ಅಭ್ಯಾಸ ನಿರತರಾಗಿದ್ದರು ಹಾಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಬಯಸಿದ್ದರು.

ABOUT THE AUTHOR

...view details