ಕರ್ನಾಟಕ

karnataka

ETV Bharat / bharat

Uniform Civil Code: ಯುಸಿಸಿ ವಿರೋಧಿಸಿ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಿದ ಸಿಪಿಎಂ

ಸಿಪಿಎಂ ಇಂದು ಕೇರಳದಲ್ಲಿ ಏಕರೂಪ ನಾಗರಿಕ ಸಂಹಿತೆ ವಿರೋಧಿಸಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆಸುತ್ತಿದೆ.

national-seminar-organized-by-cpm-on-the-issue-of-the-uniform-civil-code
Uniform Civil Code: ಯುಸಿಸಿ ವಿರೋಧಿಸಿ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಿದ ಸಿಪಿಎಂ

By

Published : Jul 15, 2023, 4:22 PM IST

ಕೋಯಿಕ್ಕೋಡ್(ಕೇರಳ): ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿರೋಧಿಸಿ ಸಿಪಿಎಂ ಆಯೋಜಿಸಿರುವ ರಾಷ್ಟ್ರೀಯ ವಿಚಾರ ಸಂಕಿರಣ ಇಂದು ಕೋಯಿಕ್ಕೋಡ್‌ನಲ್ಲಿ ನಡೆಯಲಿದೆ. ಸಂಜೆ 4 ಗಂಟೆಗೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಈ ವಿಚಾರ ಸಂಕಿರಣದಲ್ಲಿ ವಿವಿಧ ಸಾಮಾಜಿಕ, ಧಾರ್ಮಿಕ, ರಾಜಕೀಯ ಸಂಘಟನೆಗಳ ಮುಖಂಡರು ಹಾಗೂ ಹಿಂದೂ - ಈಳವ ಸಮುದಾಯದ ಸಂಘಟನೆಯಾದ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ (ಎಸ್​ಎನ್​ಡಿಪಿ) ಮುಖಂಡರು ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಆದರೆ, ಎಲ್‌ಡಿಎಫ್ ಸಂಚಾಲಕ ಮತ್ತು ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಇ.ಪಿ ಜಯರಾಜನ್ ಏಕರೂಪ ನಾಗರಿಕ ಸಂಹಿತೆಗೆ ವಿರುದ್ಧದವಾಗಿ ನಡೆಸುತ್ತಿರುವ ಈ ವಿಚಾರ ಸಂಕಿರಣದಲ್ಲಿ ಭಾಗವಹಿಸುತ್ತಿಲ್ಲ. ಜಯರಾಜನ್ ಅವರು ಇಂದು ತಿರುವನಂತಪುರದಲ್ಲಿ ಡಿವೈಎಫ್ಐ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾರ್ಯಕ್ರಮಕ್ಕೆ ಗೈರು ಹಾಜರಾಗುತ್ತಿರುವುದಾಗಿ ಹೇಳಿದ್ದಾರೆ. ಇ.ಪಿ ಜಯರಾಜನ್ ಅವರ ಅನುಪಸ್ಥಿತಿಯು ಎಲ್‌ಡಿಎಫ್ ಮತ್ತು ಕೇರಳ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಏಕರೂಪ ನಾಗರಿಕ ಸಂಹಿತೆಯ (UCC) ವಿಚಾರ ಸಂಕಿರಣಕ್ಕೆ ಪ್ರಮುಖ ಸಾಮಾಜಿಕ, ಧಾರ್ಮಿಕ, ರಾಜಕೀಯ ಸಂಘಟನೆಗಳನ್ನು ಭಾಗವಹಿಸುವಂತೆ ಮಾಡಲು ಸಿಪಿಎಂ ಹೊರತಾಗಿ, ಅದರ ನಿಕಟ ಮಿತ್ರ ಪಕ್ಷವಾದ ಸಿಪಿಐ ಯಾವುದೇ ಪ್ರಯತ್ನ ನಡೆಸುತ್ತಿಲ್ಲ. ಸಿಪಿಐನ ಹಿರಿಯ ನಾಯಕರು ಸೆಮಿನಾರ್‌ಗೆ ಹಾಜರಾಗುವ ಸಾಧ್ಯತೆಯಿಲ್ಲ, ಸಿಪಿಎಂ ಇದನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲು ಯೋಜಿಸಲು ತೀರ್ಮಾನಿಸಿದೆ.

ಶಾಸಕ ಇ.ಕೆ.ವಿಜಯನ್ (ಸಿಪಿಐ ರಾಜ್ಯ ನಾಯಕ) ಮಾತ್ರ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ. "ಇದು ಸಿಪಿಎಂ ಕಾರ್ಯಕ್ರಮ, ಈ ನಿಟ್ಟಿನಲ್ಲಿ ಯಾವುದೇ ಜಂಟಿ ಕಾರ್ಯಕ್ರಮವನ್ನು ನಡೆಸಲು ಎಲ್‌ಡಿಎಫ್​ನಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ" ಎಂದು ಹಿರಿಯ ಸಿಪಿಐ ನಾಯಕರೊಬ್ಬರು ತಿಳಿಸಿದ್ದಾರೆ. ಸಿಪಿಐ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ದೆಹಲಿಯಲ್ಲಿ ನಡೆಯುತ್ತಿರುವುದು ಭಾಗವಹಿಸದಿರಲು ಪ್ರಮುಖ ಕಾರಣ ಎಂದು ಸಿಪಿಐ ನಾಯಕರು ಹೇಳಿದ್ದಾರೆ.

ಇದರ ಮಧ್ಯೆ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ವಿರೋಧ ಪಕ್ಷವು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿಷಯದ ಬಗ್ಗೆ ಆಡಳಿತಾರೂಢ ಸಿಪಿಎಂ ವಿರುದ್ಧ ಟೀಕಾ ಪ್ರಹಾರ ಮುಂದುವರಿಸಿದ್ದು, ಈ ವಿಷಯದಲ್ಲಿ ಸಿಪಿಎಂ ದ್ವಂದ್ವ ನಿಲುವುಗಳನ್ನು ಹೊಂದಿದೆ ಎಂದು ಆರೋಪಿಸಿದೆ ಮತ್ತು ಎಲ್ಲ ನಾಗರಿಕರಿಗೆ ಸಾಮಾನ್ಯ ವೈಯಕ್ತಿಕ ಕಾನೂನಿನ ಪರವಾಗಿದ್ದ ತನ್ನ ಮಾಜಿ ನಾಯಕ ಇಎಂಎಸ್ ನಂಬೂದರಿಪಾಡ್ ಅವರ ನಿಲುವನ್ನು ತ್ಯಜಿಸುವಂತೆ ಎಡ ಪಕ್ಷಕ್ಕೆ ಸವಾಲು ಹಾಕಿದೆ.

ಇಎಂಎಸ್ ನಂಬೂದರಿಪಾಡ್ ಹೇಳಿದ್ದನ್ನು ತ್ಯಜಿಸಲು ಸಿದ್ಧರಿಲ್ಲ, ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳದಿರುವ ಎಡಪಕ್ಷಗಳ ದ್ವಂದ್ವ ನಿಲುವು ಇದರಿಂದ ಸ್ಪಷ್ಟವಾಗಿದೆ ಎಂದು ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಆರೋಪಿಸಿದ್ದಾರೆ. ಯುಸಿಸಿ ವಿಚಾರದಲ್ಲಿ ಕೆಲವು ಪ್ರಮುಖ ಮುಸ್ಲಿಂ ಸಂಘಟನೆಗಳನ್ನು ಆಯ್ಕೆ ಮಾಡಿ. ಸಿಪಿಎಂ ಕಾಂಗ್ರೆಸ್‌ನ ಮಿತ್ರಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಅನ್ನು ಸೆಮಿನಾರ್‌ಗೆ ಆಹ್ವಾನಿಸಿದ್ದರೂ, ಐಯುಎಂಎಲ್ ಮತ್ತು ಸಿಪಿಎಂ ಈ ವಿಚಾರ ಸಂಕಿರಣದಿಂದ ದೂರವಿರಲು ನಿರ್ಧರಿಸಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಂಧನ, ಬಿಡುಗಡೆ

ABOUT THE AUTHOR

...view details