ಕರ್ನಾಟಕ

karnataka

ETV Bharat / bharat

ಕಾಶ್ಮೀರದ ವಿವಿಧೆಡೆ ಹಠಾತ್​ ದಾಳಿ ನಡೆಸಿರುವ ಎನ್​ಐಎ.. ಮಹತ್ವದ ದಾಖಲೆ ಕಲೆ ಹಾಕುತ್ತಿರುವ ತನಿಖಾ ದಳ

ರಾಷ್ಟ್ರೀಯ ತನಿಖಾ ದಳ ದೋಡಾ ಮತ್ತು ಜಮ್ಮುವಿನ ವಿವಿಧ ಸ್ಥಳಗಳಲ್ಲಿ ಹಠಾತ್ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ಕಲೆ ಹಾಕುತ್ತಿದೆ.

National Investigation Agency conducted surprise raids  raids at different locations in Doda and Jammu  National Investigation Agency raids in Jammu  National Investigation Agency news  ಜಮ್ಮು ಮತ್ತು ದೋಡಾದ ವಿವಿಧ ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ  ಎನ್‌ಐಎ ದಿಢೀರ್ ದಾಳಿ  ರಾಷ್ಟ್ರೀಯ ತನಿಖಾ ಸಂಸ್ಥೆ  ಮಹತ್ವದ ದಾಖಲೆಗಳನ್ನು ಕಲೆ ಹಾಕುತ್ತಿರುವ ಎನ್​ಐಎ  ರಾಷ್ಟ್ರೀಯ ತನಿಖಾ ದಳ
ಕಣಿವೆ ನಾಡಿನ ವಿವಿಧ ಸ್ಥಳಗಳಲ್ಲಿ ಹಠಾತ್​ ದಾಳಿ ನಡೆಸಿರುವ ಎನ್​ಐಎ

By

Published : Aug 8, 2022, 10:58 AM IST

ಶ್ರೀನಗರ: ರಾಷ್ಟ್ರೀಯ ತನಿಖಾ ದಳ ಜುಲೈ ತಿಂಗಳಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರ ಕಣಿವೆಯ ಒಂಬತ್ತು ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಈಗ ಜಮ್ಮು ಮತ್ತು ದೋಡಾದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಕಲೆ ಹಾಕುತ್ತಿದೆ.

ಜಮ್ಮು ಮತ್ತು ದೋಡಾದ ವಿವಿಧ ಸ್ಥಳಗಳಲ್ಲಿ ಹಠಾತ್​ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಜೆಇಐ ಜತೆ ಸಂಬಂಧ ಹೊಂದಿದ್ದ ಕೃಷಿ ಇಲಾಖೆಯಿಂದ ನಿವೃತ್ತರಾಗಿರುವ ನೂರ್ ದಿನ್ ಬೊಹ್ರು ಎಂಬಾತನ ಮನೆಯಲ್ಲಿ ಬೀಡು ಬಿಟ್ಟಿದೆ.

ಭಯೋತ್ಪಾದನೆ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದೋಡಾ ಮತ್ತು ಜಮ್ಮು ಜಿಲ್ಲೆಯಲ್ಲಿ ಎನ್‌ಐಎ ದಾಳಿ ನಡೆಸಿದೆ. ಪೊಲೀಸರು ಮತ್ತು ಅರೆ ಸೇನಾಪಡೆಯ ಸಿಆರ್‌ಪಿಎಫ್ ಸಿಬ್ಬಂದಿ ಸಹಾಯದಿಂದ ಎನ್‌ಐಎ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಐದು ಸ್ಥಳಗಳು ಮತ್ತು ಶ್ರೀನಗರ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ವೇಳೆ, ಒಬ್ಬ ವ್ಯಕ್ತಿಯನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಭಯೋತ್ಪಾದನೆ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ಬಾರಾಮುಲ್ಲಾ, ಕುಪ್ವಾರ ಮತ್ತು ಪೊಂಚ್ ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ. ಮೂಲಗಳ ಪ್ರಕಾರ, ಬಾರಾಮುಲ್ಲಾ, ಕುಪ್ವಾರ ಮತ್ತು ಪೊಂಚ್‌ನಲ್ಲಿ ಪೊಲೀಸ್ ಮತ್ತು ಸಿಆರ್‌ಪಿಎಫ್ ಜೊತೆಗೆ ಎಸ್‌ಐಎ ಸ್ಲೀವ್ಸ್ ದಾಳಿ ನಡೆಸಿದೆ. ‘ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಧಿ ಪ್ರಕರಣದ ತನಿಖೆಯ ಭಾಗವಾಗಿ ಈ ದಾಳಿಗಳನ್ನು ನಡೆಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಓದಿ: Praveen Murder case: ಎನ್​​ಐಎ ಕಾಟಾಚಾರಕ್ಕೆ ತನಿಖೆ ಮಾಡಬಾರದು.. ಹೆಚ್​ಡಿಕೆ

ABOUT THE AUTHOR

...view details