ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಜಾರಿ ನಿರ್ದೇಶನಾಲಯದ ಎದುರು ಹಾಜರಾಗಿ ವಿಚಾರಣೆ ಎದುರಿಸಿದರು. ಲಭ್ಯವಾಗಿರುವ ಮಾಹಿತಿ ಪ್ರಕಾರ ಇಡಿ ಕಚೇರಿಯಲ್ಲಿ ಹೆಚ್ಚುವರಿ ಮಹಿಳಾ ನಿರ್ದೇಶಕಿ ನೇತೃತ್ವದಲ್ಲಿ ಐವರು ಅಧಿಕಾರಿಗಳಿಂದ ಸೋನಿಯಾ ಗಾಂಧಿ ವಿಚಾರಣೆಗೊಳಪಟ್ಟಿದ್ದಾರೆ. ಬರೋಬ್ಬರಿ 2.20 ಗಂಟೆಗಳ ಕಾಲ ಕಾಂಗ್ರೆಸ್ ಅಧಿನಾಯಕಿ ವಿಚಾರಣೆ ಎದುರಿಸಿದ್ದಾರೆ.
ಸೋನಿಯಾ ಗಾಂಧಿ ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯ ಹೆಚ್ಚಿನ ನಿಗಾ ವಹಿಸಿದ್ದಾಗಿ ತಿಳಿದು ಬಂದಿದೆ. ಇಡಿಯ ಇಬ್ಬರು ವೈದ್ಯರ ನಿಗಾ ಹಾಗೂ ಆ್ಯಂಬುಲೆನ್ಸ್ ಸನ್ನದ್ಧವಾಗಿ ಇಟ್ಟುಕೊಂಡಿದ್ದರು ಎಂಬ ವರದಿ ತಿಳಿದು ಬಂದಿದೆ.
ಇಡಿ ಮೂಲಗಳ ಮಾಹಿತಿ ಪ್ರಕಾರ 2.20 ನಿಮಿಷಗಳ ಕಾಲ ಕಾಂಗ್ರೆಸ್ ಮುಖ್ಯಸ್ಥೆ ವಿಚಾರಣೆಗೊಳಪಟ್ಟಿದ್ದರು. ವಿಚಾರಣೆ ಮಧ್ಯೆ ಪ್ರಿಯಾಂಕಾ ಗಾಂಧಿ ಎರಡು ಸಲ ಅವರ ಬಳಿ ಹೋಗಿ ಮಾತನಾಡಲು ಅವಕಾಶ ಸಹ ಕಲ್ಪಿಸಲಾಗಿತ್ತು ಎಂದು ವರದಿಯಾಗಿದೆ. ವಿಚಾರಣೆ ವೇಳೆ, ಎರಡು ಡಜನ್ಗಿಂತಲೂ ಹೆಚ್ಚಿನ ಪ್ರಶ್ನೆ ಕೇಳಲಾಗಿದ್ದು, ಔಷಧ ಪಡೆದುಕೊಳ್ಳಲು ಮನೆಗೆ ತೆರಳುವಂತೆ ಮನವಿ ಮಾಡಿಕೊಂಡಿದ್ದರು. ಅದಕ್ಕೆ ಅನುಮತಿ ನೀಡಿರುವ ಇಡಿ ಸೋಮವಾರ ಮತ್ತೊಮ್ಮೆ ವಿಚಾರಣೆಗೆ ಕರೆಯಲಿದೆ ಎಂದು ಇಡಿ ಮೂಲಗಳು ಮಾಹಿತಿ ನೀಡಿವೆ.