ಕರ್ನಾಟಕ

karnataka

ETV Bharat / bharat

ಕೊನೆಗೂ 'ನೇಗಿಲು' ಚಿಹ್ನೆ ಪಡೆದ NC; ಲಡಾಖ್ ಆಡಳಿತದಿಂದ ಪಕ್ಷಪಾತ ಎಂದ ಒಮರ್ ಅಬ್ದುಲ್ಲಾ - ಚಿಹ್ನೆಗಳ ಹಂಚಿಕೆಯ ಬಗ್ಗೆ ಚುನಾವಣಾ ಮಾರ್ಗಸೂಚಿ

ಈ ಮುಂಚೆ ತಮ್ಮ ಪಕ್ಷಕ್ಕೆ ನೇಗಿಲು ಚಿಹ್ನೆಯನ್ನು ನಿರಾಕರಿಸುವ ಮೂಲಕ ಲಡಾಖ್ ಆಡಳಿತವು ಪಕ್ಷಪಾತ ಧೋರಣೆ ಅನುಸರಿಸಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್​ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

omar abdullah accuses ladakh administration
omar abdullah accuses ladakh administration

By ETV Bharat Karnataka Team

Published : Sep 8, 2023, 2:17 PM IST

ಶ್ರೀನಗರ : ಲಡಾಖ್ ಸ್ಥಳೀಯಾಡಳಿತ ಸಂಸ್ಥೆಯು ತಮ್ಮ ಪಕ್ಷದ ವಿರುದ್ಧ ಪಕ್ಷಪಾತದ ಧೋರಣೆ ಅನುಸರಿಸುತ್ತಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್​ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ಬಳಿಕ ಲಡಾಖ್ ಆಡಳಿತವು ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಪಕ್ಷಕ್ಕೆ 'ನೇಗಿಲು' ಚಿಹ್ನೆಯನ್ನು ನೀಡಿದ ನಂತರ ಪ್ರತಿಕ್ರಿಯಿಸಿದ ಒಮರ್ ಅಬ್ದುಲ್ಲಾ, ಲಡಾಖ್ ಆಡಳಿತವು ಪಕ್ಷಪಾತದಿಂದ ಕೂಡಿದೆ ಎಂದು ಹೇಳಿದರು.

ನ್ಯಾಷನಲ್ ಕಾನ್ಫರೆನ್ಸ್​ ಪಕ್ಷಕ್ಕೆ ನೇಗಿಲು ಚಿಹ್ನೆಯನ್ನು ನಿಗದಿಪಡಿಸಿ ಲಡಾಖ್ ಅಟಾನಾಮಸ್ ಹಿಲ್ ಡೆವಲಪ್​ಮೆಂಟ್​ ಕೌನ್ಸಿಲ್ (ಎಲ್ಎಎಚ್​ಡಿಸಿ) ಚುನಾವಣೆಯ ಹೊಸ ಅಧಿಸೂಚನೆಯನ್ನು ಹೊರಡಿಸಿದ ನಂತರ ಒಮರ್ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಈ ಚುನಾವಣೆಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್​ಗೆ ಅದರ ಸಾಂಪ್ರದಾಯಿಕ ಚಿಹ್ನೆಯಾಗಿದ್ದ ನೇಗಿಲು ಚಿಹ್ನೆಯನ್ನು ನೀಡಲು ಎಲ್ಎಎಚ್​ಡಿಸಿ ನಿರಾಕರಿಸಿತ್ತು. ಆದರೆ ಸುಪ್ರೀಂ ಕೋರ್ಟ್​ ಎಲ್ಎಎಚ್​ಡಿಸಿ ಯ ಈ ಚುನಾವಣಾ ಅಧಿಸೂಚನೆಯನ್ನು ರದ್ದುಗೊಳಿಸಿದ್ದು, ಈಗ ಹೊಸ ಅಧಿಸೂಚನೆ ಹೊರಡಿಸಲಾಗಿದೆ.

"ರಾಜಕೀಯ ಪಕ್ಷವಾಗಿ ನಮ್ಮ ಹಕ್ಕು ಪಡೆಯಲು ನಾವು ಇಷ್ಟೊಂದು ಸಮಯ ಕಾಯಬೇಕಾಗಿ ಬಂದಿದ್ದು ದುರದೃಷ್ಟಕರ. ಚಿಹ್ನೆಗಳ ಹಂಚಿಕೆಯ ಬಗ್ಗೆ ಚುನಾವಣಾ ಮಾರ್ಗಸೂಚಿಗಳು ಬಹಳ ಸ್ಪಷ್ಟವಾಗಿವೆ. ಆದರೆ ಲಡಾಕ್​ ಆಡಳಿತವು ಬಹಳ ಪಕ್ಷಪಾತದ ಧೋರಣೆಯನ್ನು ಹೊಂದಿತ್ತು ಎಂಬುದು ಇದರಿಂದ ತಿಳಿಯುತ್ತದೆ" ಎಂದು ಒಮರ್ ಹೇಳಿದರು. ಲಡಾಖ್ ಆಡಳಿತದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಎನ್​ಸಿ ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲಾ, "ನಮ್ಮ ಕಾನೂನುಬದ್ಧ ಹಕ್ಕನ್ನು ನಾವು ಪಡೆದಿದ್ದೇವೆ" ಎಂದು ಹೇಳಿದರು.

ಎನ್​ಸಿಗೆ ನೇಗಿಲು ಚಿಹ್ನೆ ಹಂಚಿಕೆ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕರೊಬ್ಬರು, ಇದು ದೇಶದ ಸುಪ್ರೀಂ ಕೋರ್ಟ್​ನ ನಿರ್ಧಾರ ಮತ್ತು ದೇಶದ ಸುಪ್ರೀಂ ಕೋರ್ಟ್​ನ ತೀರ್ಪಿನ ಮುಂದೆ ನಾವೆಲ್ಲರೂ ತಲೆ ಬಾಗಬೇಕು ಎಂದರು. ಅದೇ ಸಮಯದಲ್ಲಿ, ನಮ್ಮ ಎಲ್ಲಾ ರಾಜಕೀಯ ಪಕ್ಷಗಳು ನ್ಯಾಯಾಂಗದ ಇತರ ಪ್ರತಿಯೊಂದು ನಿರ್ಧಾರಕ್ಕೂ ಸಮಾನವಾಗಿ ಗೌರವ ಮತ್ತು ಅಧೀನರಾಗಿರಬೇಕು ಎಂದು ನಾವು ವಿನಂತಿಸುತ್ತೇವೆ ಎಂದು ಹೆಸರು ಹೇಳಲು ಬಯಸದ ಆ ಬಿಜೆಪಿ ನಾಯಕ ತಿಳಿಸಿದರು.

ಚುನಾವಣೆಗಳು ಪ್ರಜಾಪ್ರಭುತ್ವದ ಪ್ರಕ್ರಿಯೆಯಾಗಿವೆ ಮತ್ತು ಈ ಪ್ರಕ್ರಿಯೆಯು ಎಲ್ಲಾ ಪಕ್ಷಗಳಿಗೆ ಸಮಾನ ಅವಕಾಶಗಳನ್ನು ಹೊಂದಿರಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರು ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿದ್ದಾರೆ. ಇತರ ಪ್ರಾದೇಶಿಕ ರಾಜಕೀಯ ಪಕ್ಷಗಳು ಈ ಬೆಳವಣಿಗೆಯ ಬಗ್ಗೆ ಇಲ್ಲಿಯವರೆಗೆ ಪ್ರತಿಕ್ರಿಯಿಸಿಲ್ಲ.

ಇದನ್ನೂ ಓದಿ : X​ನಲ್ಲಿ ಬರೆಯುವುದು 'Tweet​' ಅಲ್ಲ, ಅದು 'Post'; ನಿಯಮ ಬದಲು

For All Latest Updates

ABOUT THE AUTHOR

...view details