ನಾಶಿಕ್(ಮಹಾರಾಷ್ಟ್ರ):ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಳ್ಳುತ್ತಿಲ್ಲ ಎಂಬ ಆರೋಪದ ಮೇಲೆ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಹಾರಾಷ್ಟ್ರದ ನಾಶಿಕ್ನಲ್ಲಿ ನಡೆದಿದೆ. ಯುವ ಸ್ವಾಭಿಮಾನ ಪಕ್ಷದ ಜಿಲ್ಲಾಧ್ಯಕ್ಷೆ ಆಗಿರುವ ರಾಜಲಕ್ಷ್ಮಿ ಈ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದು, ಆಕೆಯ ರಕ್ಷಣೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸರು ಪ್ರಕರಣ ದಾಖಲು ಮಾಡಿಕೊಳ್ಳುತ್ತಿಲ್ಲ ಎಂದು ಕಮಿಷನರ್ ಕಚೇರಿ ಎದುರೇ ಈ ದುಷ್ಕೃತ್ಯಕ್ಕೆ ಮುಂದಾಗಿದ್ದಾಳೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಗೃಹ ಸಚಿವರು ಇಂದು ನಾಶಿಕ್ ಪ್ರವಾಸದಲ್ಲಿದ್ದು, ಇದರ ಬೆನ್ನಲ್ಲೇ ಮಹಿಳೆ ಈ ರೀತಿಯಾಗಿ ನಡೆದುಕೊಂಡಿದ್ದಾಳೆ. ಶ್ರಮಿಕ್ ಸೇನೆಯ ಅಜಯ್ ಬಾಗುಲ್ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಆತನ ವಿರುದ್ಧ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪ ಮಾಡಿರುವ ಯುವತಿ ಈ ರೀತಿಯಾಗಿ ನಡೆದುಕೊಂಡಿದ್ದಾಗಿ ತಿಳಿದು ಬಂದಿದೆ.
ಕಮೀಷನರ್ ಕಚೇರಿ ಎದುರೇ ಮಹಿಳೆ ಆತ್ಮಹತ್ಯೆಗೆ ಯತ್ನ ವಿವಿಧ ಅಪರಾಧ ಕೃತ್ಯಗಳಲ್ಲಿ ಅಜಯ್ ಬಾಗುಲ್ ಭಾಗಿಯಾಗಿದ್ದರೂ ಕೂಡ ಆತನ ವಿರುದ್ಧ ನಾಶಿಕ್ ಪೊಲೀಸ್ ಕಮೀಷನರ್ ಯಾವುದೇ ಕ್ರಮ ಕೈಗೊಂಡಿಲ್ಲ. ಜೊತೆಗೆ ಅವರ ಹೆಸರನ್ನ ಕ್ರಿಮಿನಲ್ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ. ಮಹಿಳೆಯನ್ನ ರಕ್ಷಣೆ ಮಾಡಿರುವ ಪೊಲೀಸರು ತದನಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾಗಿ ತಿಳಿದು ಬಂದಿದೆ. ಈ ವೇಳೆ, ಆಕೆಯ ಗಂಡ ಸಹ ಉಪಸ್ಥಿತ ಇದ್ದ ಎನ್ನಲಾಗಿದೆ.
14 ವರ್ಷದ ಬಾಲಕಿಯ ಜೀವ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಬಿಲ್ಡಿಂಗ್ವೊಂದರ ಕಿಟಕಿಯಲ್ಲಿ ಸಿಲುಕಿ ಹಾಕಿಕೊಂಡಿದ್ದ 14 ವರ್ಷದ ಬಾಲಕಿ ಜೀವ ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಗಣೇಶ್ ಅಪಾರ್ಟ್ಮೆಂಟ್ನಲ್ಲಿ ಇಂದು ಬೆಳಗ್ಗೆ ಬಾಲಕಿಯೊಬ್ಬಳ ಕಿಟಕಿಗೆ ಜೋತು ಬಿದ್ದ ಸೀರೆ ಹಿಡಿದುಕೊಂಡಿದ್ದಳು. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಆಕೆಯ ರಕ್ಷಣೆ ಮಾಡಿದ್ದಾರೆ.