ಕರ್ನಾಟಕ

karnataka

ETV Bharat / bharat

ಬಾಲಿವುಡ್​​ ಹಿರಿಯ ನಟ ನಾಸಿರುದ್ದೀನ್ ಷಾ ಆಸ್ಪತ್ರೆಗೆ ದಾಖಲು - ಹಿರಿಯ ನಟ ದಿಲೀಪ್​ ಕುಮಾರ್

ಬಾಲಿವುಡ್​​ನಲ್ಲಿ ಎಂತಹ ಪಾತ್ರಕ್ಕಾದರೂ ಜೀವ ತುಂಬುತ್ತಿದ್ದ ಹಿರಿಯ ನಟ ನಾಸಿರುದ್ದೀನ್ ಷಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ವಾಸಕೋಶ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

naseeruddin-shah
ನಟ ನಾಸಿರುದ್ದೀನ್ ಷಾ

By

Published : Jun 30, 2021, 5:44 PM IST

ಹೈದರಾಬಾದ್: ಬಾಲಿವುಡ್​ ಹಿರಿಯ ನಟ ನಾಸಿರುದ್ದೀನ್ ಷಾ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 70 ವರ್ಷದ ನಾಸಿರುದ್ದೀನ್ ಷಾ ಅವರಿಗೆ ನ್ಯುಮೋನಿಯಾ ಇರುವುದರಿಂದ ಅವರು ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪತ್ನಿ ರತ್ನ ಪಾಠಕ್ ಷಾ ಹೇಳಿದ್ದಾರೆ.

ನಿನ್ನೆಯಿಂದ ಉಸಿರಾಟ ಸಮಸ್ಯೆ ಕಂಡುಬಂದಿತ್ತು. ಅಲ್ಲದೆ ಶ್ವಾಸಕೋಶದಲ್ಲಿ ಸಣ್ಣ ಪ್ತಾಚ್ ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ, ಸದ್ಯದಲ್ಲೆ ಡಿಸ್ಚಾರ್ಜ್​ ಆಗಲಿದ್ದಾರೆ ಎಂದು ಪತ್ನಿ ಮಾಹಿತಿ ನೀಡಿದ್ದಾರೆ.

ಬಾಲಿವುಡ್​​​ನ ಪ್ರತಿಭಾವಂತ ನಟ ಅಂತಲೇ ಕರೆಸಿಕೊಳ್ಳುವ ಷಾ, ಕೊನೆಯದಾಗಿ 2020ರ ‘ಮೀ ರಕ್ಸಮ್’ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಅಲ್ಲದೆ ಅಮೇಜಾನ್ ಪ್ರೈಮ್​ನ ವೆಬ್​ ಸರಣಿ ‘ಬ್ಯಾಂಡಿಶ್​ ಬ್ಯಾಂಡಿಟ್ಸ್​​’ನಲ್ಲೂ ಅತ್ಯುತ್ತಮ ನಟನೆ ಮಾಡಿದ್ದರು. ಅಲ್ಲದೆ ಮುಂಬರುವ ‘ಮಾರ್ರಿಚ್’​​​ ಸಿನಿಮಾದಲ್ಲೂ ಬಣ್ಣ ಹಚ್ಚಲಿದ್ದಾರೆ. ಅಲ್ಲದೆ ರಸಿಕಾ ದುಗಲ್ ನಟನೆಯ ‘ಮಿನಿಯೇಚರಿಸ್ಟ್​ ಆಫ್​​ ಜುನಾಗಢ’ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಇನ್ನೊಂದೆಡೆ ಬಾಲಿವುಡ್​ ಇನ್ನೋರ್ವ ಹಿರಿಯ ನಟ ದಿಲೀಪ್​ ಕುಮಾರ್ ಸಹ ಉಸಿರಾಟ ಸಮಸ್ಯೆಯಿಂದಾಗಿ ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಜೂನ್ 6ರಂದು ಸಹ ದಿಲೀಪ್ ಉಸಿರಾಟದ ಸಮಸ್ಯೆಯಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಓದಿ:ಉಸಿರಾಟ ತೊಂದರೆ: ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾದ ನಟ ದಿಲೀಪ್​ ಕುಮಾರ್​

ABOUT THE AUTHOR

...view details