ರಾಯ್ಪುರ್(ಛತ್ತೀಸ್ಗಢ):ಇತ್ತೀಚಿನ ದಿನಗಳಲ್ಲಿ ಅದ್ಧೂರಿ, ಆಡಂಬರದ ಮದುವೆ ಸಮಾರಂಭ ನಡೆಯುವುದು ಸರ್ವೆ ಸಾಮಾನ್ಯ. ವಿವಾಹ ಸಮಾರಂಭ ಸ್ಮರಣೀಯವಾಗಿಸಲು ಜನರು ವಿಶಿಷ್ಟವಾದ ಪ್ರಯತ್ನಕ್ಕೆ ಕೈ ಹಾಕುತ್ತಾರೆ. ಸದ್ಯ ಛತ್ತೀಸ್ಗಢದ ರಾಯ್ಪುರ್ದಲ್ಲಿ ಇಂತಹ ಸಾಹಸಕ್ಕೆ ಕೈಹಾಕಿ, ಕೈಸುಟ್ಟು ಕೊಂಡಿದ್ದಾರೆ.
ಮದುವೆ ಮಾಡಿಕೊಳ್ಳುತ್ತಿದ್ದ ವಧು-ವರು ವೇದಿಕೆ ಮೇಲೆ ಬರುವ ಸಂದರ್ಭದಲ್ಲಿ ಕ್ರೇನ್ ಮೇಲೆ ನಿಲ್ಲಿಸಲಾಗಿತ್ತು. ಈ ವೇಳೆ ಅದರ ಸುತ್ತಲೂ ಲೈಟ್ಸ್ ಬಿಡಲಾಗಿತ್ತು. ವಧು-ವರ ವೇದಿಕೆ ಪ್ರವೇಶಿಸಿದ ಕೆಲ ಕ್ಷಣಗಳಲ್ಲೇ ಅದು ಆಯಾತಪ್ಪಿದ್ದರಿಂದ ಇಬ್ಬರು ಕೆಳಗೆ ಬಿದ್ದಿದ್ದಾರೆ. ಈ ಆಘಾತಕಾರಿ ಘಟನೆ ಎಲ್ಲರಲ್ಲೂ ಆಘಾತ ಮೂಡಿಸಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಈ ಘಟನೆಯ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿವೆ.