ಕರ್ನಾಟಕ

karnataka

ETV Bharat / bharat

ರೈಲ್ವೆ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ 84 ಪ್ರಯಾಣಿಕರು - ಜಾರ್ಖಂಡ್ ಇತ್ತೀಚಿನ ಸುದ್ದಿ

ಪ್ರಯಾಣಿಕರ ಹೊತ್ತು ಸಾಗುತ್ತಿದ್ದ ರೈಲು ಅಪಘಾತಕ್ಕೀಡಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Hatia-Rourkela train
Hatia-Rourkela train

By

Published : May 20, 2021, 7:00 PM IST

ರಾಂಚಿ(ಜಾರ್ಖಂಡ್​):ಹಟಿಯಾ-ರೂರ್ಕೆಲಾ ಪ್ಯಾಸೆಂಜರ್ ರೈಲಿನಲ್ಲಿದ್ದ 84 ಪ್ರಯಾಣಿಕರು ಕೊದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಾರ್ಖಂಡ್​ನ ಕನರೋವಾನ್​ ರೈಲ್ವೆ ನಿಲ್ದಾಣದ ಬಳಿ ರೈಲು ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ನಿನ್ನೆ ರಾತ್ರಿ 8:20ಕ್ಕೆ ಈ ಘಟನೆ ನಡೆದಿದೆ.

ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟ ಶಿಕ್ಷಕನ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ

ರಾಂಚಿಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ನೀರಜ್​ ಅಂಬಾಸ್ತಾ, ಘಟನೆ ಬಳಿಕ ರೈಲಿಗೆ ಮತ್ತೊಂದು ಎಂಜಿನ್​ ಜೋಡಿಸಿ, ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ.

ಅಪಘಾತ ಸಂಭವಿಸಿದ್ದ ವೇಳೆ, ಅದರಲ್ಲಿ 84 ಪ್ಯಾಸೆಂಜರ್​ ಹಾಗೂ ಸಿಬ್ಬಂದಿಗಳಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ಅಪಘಾತಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ರೈಲಿನಲ್ಲಿ ಏಳು ಬೋಗಿಗಳಿದ್ದವು. ಅಪಘಾತಕ್ಕೆ ಏನು ಕಾರಣ ಎಂಬುದನ್ನ ತನಿಖೆ ಮೂಲಕ ಹೊರಗೆಳೆಯುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details