ಅಹಮದಾಬಾದ್ (ಗುಜರಾತ್): 2002ರ ನರೋಡಾ ಹತ್ಯಾಕಾಂಡ ಪ್ರಕರಣದಲ್ಲಿ ಬಿಜೆಪಿ ನಾಯಕಿ ಮಾಯಾ ಕೊಡ್ನಾನಿ ಮತ್ತು ಮಾಜಿ ಬಜರಂಗದಳ ನಾಯಕ ಬಾಬು ಬಜರಂಗಿ ಸೇರಿದಂತೆ ಎಲ್ಲ 67 ಆರೋಪಿಗಳನ್ನು ಗುಜರಾತ್‌ನ ವಿಶೇಷ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿ ಆದೇಶಿಸಿದೆ.
ಗೋಧ್ರಾ ಗಲಭೆ ನಂತರದ ನಡೆದ ಪ್ರಮುಖ ದಂಗೆ ಪ್ರಕರಣಗಳಲ್ಲಿ ನರೋಡಾ ಹತ್ಯಾಕಾಂಡ ಒಂದಾಗಿದ್ದು, 11 ಜನರು ಕೊಲೆಯಾಗಿತ್ತು. ಇಂದು ಈ ಪ್ರಕರಣದ ತೀರ್ಪು ಪ್ರಕಟಿಸಿರುವ ಎಸ್‌ಐಟಿ ಪ್ರಕರಣಗಳ ವಿಶೇಷ ನ್ಯಾಯಾಧೀಶರಾದ ಎಸ್.ಕೆ.ಬಾಕ್ಸಿ ಅವರು, ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ. ಪ್ರಕರಣದಲ್ಲಿ ಮಾಯಾ ಕೊಡ್ನಾನಿ, ಮಾಜಿ ವಿಎಚ್‌ಪಿ ನಾಯಕ ಜಯದೀಪ್ ಪಟೇಲ್ ಮತ್ತು ಮಾಜಿ ಬಜರಂಗದಳ ನಾಯಕ ಬಾಬು ಬಜರಂಗಿ ಸೇರಿ ಒಟ್ಟು 86 ಆರೋಪಿಗಳ ವಿರುದ್ಧ ಪ್ರಕರಣ ನಡೆಯುತ್ತಿತ್ತು. ಇದರಲ್ಲಿ 18 ಮಂದಿ ವಿಚಾರಣೆಯ ಬಾಕಿ ಇರುವಾಗಲೇ ಸಾವನ್ನಪ್ಪಿದ್ದರೆ, ಒಬ್ಬರನ್ನು ನ್ಯಾಯಾಲಯವು ಮೊದಲೇ ಖುಲಾಸೆಗೊಳಿಸಿತ್ತು.
ಇದನ್ನೂ ಓದಿ:SCO: ಮುಂದಿನ ತಿಂಗಳು ಭಾರತಕ್ಕೆ ಬಿಲಾವಲ್ ಭುಟ್ಟೋ; ನವಾಜ್ ಷರೀಫ್ ಬಳಿಕ ಮಹತ್ವದ ಭೇಟಿ
ಪ್ರಕರಣದ ಹಿನ್ನೆಲೆ:2002ರ ಫೆಬ್ರವರಿ 28ರಂದು ನರೋಡಾ ಗ್ರಾಮದಲ್ಲಿ ನಡೆದ ಹತ್ಯಾಕಾಂಡದಲ್ಲಿ 11 ಜನರನ್ನು ಸಜೀವವಾಗಿ ಸುಟ್ಟು ಹಾಕಲಾಗಿತ್ತು. ಅವರ ಆಸ್ತಿಗಳನ್ನು ಲೂಟಿ ಮಾಡಲಾಗಿತ್ತು. ಆಗ ಘಟನಾ ಸ್ಥಳದಲ್ಲಿದ್ದ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ತನಿಖೆ ವೇಳೆ ಹಂತ ಹಂತವಾಗಿ ಆರೋಪಿಗಳ ಸಂಖ್ಯೆ 86ಕ್ಕೆ ಏರಿಕೆಯಾಗಿತ್ತು.