ಕರ್ನಾಟಕ

karnataka

By

Published : Dec 6, 2022, 9:35 AM IST

ETV Bharat / bharat

ಸಾವರ್ಕರ್ ನಿಂದಿಸಿದ್ದ ರಾಹುಲ್​ ಗಾಂಧಿ ವಿರುದ್ಧ ಎಫ್​ಐಆರ್​ ದಾಖಲಿಸಲು ಆಗ್ರಹ

ವೀರ ಸಾವರ್ಕರ್​ ಅವರನ್ನು ಬ್ರಿಟಿಷರ ಸೇವಕ ಎಂದು ಜರಿದಿದ್ದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ವಿರುದ್ಧ ವಕೀಲರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ದೂರು ದಾಖಲಿಸಿದ್ದಾರೆ.

fir-against-rahul-gandhi
ಸಾವರ್ಕರ್ ನಿಂದಿಸಿದ್ದ ರಾಹುಲ್​ ಗಾಂಧಿ

ಲಖನೌ(ಉತ್ತರ ಪ್ರದೇಶ):ಭಾರತ್​ ಜೋಡೋ ಯಾತ್ರೆಯ ವೇಳೆ ಸ್ವಾತಂತ್ರ್ಯವೀರ ದಾಮೋದರ್ ಸಾವರ್ಕರ್​ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ಎಫ್​ಐಆರ್​ ದಾಖಲಿಸಲು ಕೇಂದ್ರ ವಕೀಲರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾಂಡೆ ಒತ್ತಾಯಿಸಿದ್ದಾರೆ.

ನವೆಂಬರ್ 17ರಂದು ಮಹಾರಾಷ್ಟ್ರದ ಅಕೋಲಾದಲ್ಲಿ ಭಾರತ್​ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಮಾತನಾಡಿ, ಸಾವರ್ಕರ್​ ಬ್ರಿಟಿಷರಲ್ಲಿ ಕ್ಷಮೆ ಕೋರಿ ಅವರ ಸೇವಕನಂತೆ ನಡೆದುಕೊಂಡರು. ಆಂಗ್ಲರ ಪಿಂಚಣಿ ಪಡೆದರು. ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನವಾಗಿದೆ ಎಂದೆಲ್ಲಾ ಕಟುವಾಗಿ ಆರೋಪ ಮಾಡಿದ್ದರು.

ಇದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ, ಸಾವರ್ಕರ್​ ಕ್ಷಮಾದಾನ ಕೋರಿದ ಪತ್ರವನ್ನೂ ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದರು. ಇದರ ವಿರುದ್ಧ ಅಂದೇ ಸಾವರ್ಕರ್​ ಅವರ ಮೊಮ್ಮಗ, ರಾಹುಲ್​ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು. ಇದೀಗ ವಕೀಲರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಕೇಸ್​ ದಾಖಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಸಾವರ್ಕರ್ ಅವರನ್ನು ಅವಮಾನಿಸುವುದು ರಾಷ್ಟ್ರಕ್ಕೆ ಮಾಡಿದ ಅವಮಾನ. ದೇಶಭಕ್ತರಿಗೂ ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಇದರಿಂದಾಗಿ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಲಾಗಿದೆ.

ಓದಿ:ಅಪರಿಚಿತ ವ್ಯಕ್ತಿಯಿಂದ ದಾಳಿ: ಅಪ್ರಾಪ್ತ ಬಾಲಕಿ ಸಾವು

ABOUT THE AUTHOR

...view details