ಮುಂಬೈ(ಮಹಾರಾಷ್ಟ್ರ):ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತ್ತೆ ಜೀವ ಬೆದರಿಕೆ ಬಂದಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ ಪ್ರಧಾನಿ ಹತ್ಯೆಗೆ ಸಂಚು ರೂಪಿಸುತ್ತಿರುವ ಬಗ್ಗೆ ಮುಂಬೈ ಪೊಲೀಸರಿಗೆ ಮಾಹಿತಿ ಬಂದಿದೆ. ಠಾಣೆಯ ಸಂಚಾರಿ ದೂರವಾಣಿಗೆ ಆಡಿಯೋ ಸಂದೇಶವೊಂದು ಬಂದಿದ್ದು, ಮುಂಬೈ ಪೊಲೀಸರು ಅಲರ್ಟ್ ಆಗಿದ್ದಾರೆ.
ಏಪ್ರಿಲ್ ತಿಂಗಳಲ್ಲೂ ಪ್ರಧಾನಿ ನರೇಂದ್ರ ಮೋದಿಗೆ ಜೀವ ಬೆದರಿಕೆ ಹಾಕಿದ ಇ-ಮೇಲ್ ಮುಂಬೈನ ಎನ್ಐಎ ಶಾಖೆಗೆ ಬಂದಿತ್ತು. ಅದರಲ್ಲಿ ನಮೂದಿಸಿದಂತೆ 20 ಕೆಜಿ ಆರ್ಡಿಎಕ್ಸ್ ಇದ್ದು, ಪ್ರಧಾನಿ ಜೊತೆಗೆ 2 ಮಿಲಿಯನ್ ಜನರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿತ್ತು.