ಕೋಲ್ಕತ್ತಾ: 1990 ರ ದಶಕದಲ್ಲಿ ಪಿ.ವಿ.ನರಸಿಂಹರಾವ್ ಸರ್ಕಾರವು ಸುಭಾಷ್ ಚಂದ್ರ ಬೋಸ್ ಅವರ ಚಿತಾಭಸ್ಮ ತರಲು ಪ್ರಯತ್ನಿಸಿತ್ತು. ಚಿತಾಭಸ್ಮ ತರುವುದರಿಂದ ಕೋಲ್ಕತ್ತಾದಲ್ಲಿ ಗಲಭೆ ಉಂಟಾಗಬಹುದು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನೆಲೆ, ಆ ವಿಚಾರವನ್ನು ಅಲ್ಲಿಯೇ ಕೈ ಬಿಡಲಾಯಿತು ಎಂದು ಅವರ ಸೋದರನ ಮೊಮ್ಮಗ ಹೇಳಿದ್ದಾರೆ.
ಸದ್ಯ ಜಪಾನ್‌ನ ರೆಂಕೋಜಿ ದೇವಸ್ಥಾನದಲ್ಲಿ ಚಿತಾಭಸ್ಮವಿದೆಯೆಂದು ನಂಬಲಾಗಿದೆ. ವಿದೇಶಾಂಗ ಸಚಿವಾಲಯದ ಸಹಯೋಗದೊಂದಿಗೆ ಇಂಡೋ-ಜಪಾನ್ ಸಮುರಾಯ್ ಸೆಂಟರ್, ಗುರುವಾರ ಆಯೋಜಿಸಿದ್ದ ಬೋಸ್ ಅವರು ಆಜಾದ್ ಹಿಂದ್ ಸರ್ಕಾರವನ್ನು ಸ್ಥಾಪಿಸಿದ 78 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ವರ್ಚುಯಲ್ ಸೆಮಿನಾರ್‌ನಲ್ಲಿ ನೇತಾಜಿ ಸೋದರನ ಮೊಮ್ಮಗ, ಸಂಶೋಧಕ ಆಶಿಶ್ ರೇ ಮಾತನಾಡಿದರು.
ಲೇಖಕ, ಸಂಶೋಧಕರಾಗಿರುವ ಆಶಿಶ್ ರೇ, ಸೆಪ್ಪೆಂಬರ್ 1945 ರಿಂದ ಟೋಕಿಯೋದಲ್ಲಿನ ಬೌದ್ಧ ದೇಗುಲದಲ್ಲಿರುವ ಚಿತಾಭಸ್ಮ ಮರಳಿ ತರಲು ಯತ್ನಿಸಲಾಗುತ್ತಿದೆ. ಚಿತಾಭಸ್ಮವುದ ಜರ್ಮನಿಯಲ್ಲಿ ವಾಸಿಸುತ್ತಿರುವ ಸುಭಾಷ್ ಚಂದ್ರ ಬೋಸ್ ಮಗಳಾದ, ಅರ್ಥಶಾಸ್ತ್ರಜ್ಞೆ ಪ್ರೊ. ಅನಿತಾ ಬೋಸ್ ಪಿಫಾಫ್ಗೆ ಸೇರಬೇಕು ಎಂದು ಹೇಳಿದರು.
ಅಲ್ಲದೇ, ಭಾರತ ಸರ್ಕಾರವು ಭಸ್ಮ ಮರಳಿ ಪಡೆಯುವುದರ ಉಸ್ತುವಾರಿ ವಹಿಸಿಕೊಳ್ಳಲು ಅವರಿಗೆ ಅವಕಾಶ ನೀಡಬೇಕು ಎಂದು ಇದೇ ವೇಳೆ ಆಶಿಶ್ ರೇ ಹೇಳಿದ್ರು.
ರೇ ಅವರು, ನೇತಾಜಿ ಸಾವಿನ ವಿವಾದದ ಕುರಿತು ಲೈಡ್ ಟು ರೆಸ್ಟ್ ಎಂಬ ಪುಸ್ತಕವನ್ನು ಬರೆದಿದ್ದಾರೆ. 1990 ರಲ್ಲಿಯೇ ಚಿತಾಭಸ್ಮ ಭಾರತಕ್ಕೆ ತರಲು ಯತ್ನಿಸಲಾಯಿತು. ಆದರೆ, ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ವಯ ಆ ನಿರ್ಧಾರವನ್ನು ಅಲ್ಲಿಗೇ ಕೈ ಬಿಡಲಾಯಿತು.
ನೇತಾಜಿ ಬದುಕುಳಿದಿದ್ದರು ಎಂದೇ ನಂಬಲಾಗಿತ್ತು