ಕರ್ನಾಟಕ

karnataka

ETV Bharat / bharat

ನಾರದ ಪ್ರಕರಣದಲ್ಲಿ ಬಂಗಾಳ ಸಿಎಂಗೆ ಬಿಗ್ ರಿಲೀಫ್ : ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ಜೂನ್ 28ರೊಳಗೆ ಅರ್ಜಿಯನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ಆದೇಶಿಸಿದೆ. ಸಿಬಿಐ ಮತ್ತು ಇತರೆ ಪಕ್ಷಗಳಿಗೆ ಪ್ರತಿಗಳನ್ನು ನೀಡಬೇಕು. ಈ ಪ್ರತಿಗಳಿಗೆ ಸಿಬಿಐ ಹಾಗೂ ಇತರೆ ಪಕ್ಷಗಳು ಪ್ರತ್ಯುತ್ತರ ಸಲ್ಲಿಸುವುದಕ್ಕೆ ಕೋರ್ಟ್​ ಅವಕಾಶ ನೀಡಿದೆ..

Supreme Court
Supreme Court

By

Published : Jun 25, 2021, 3:13 PM IST

ನವದೆಹಲಿ: ನಾರದಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಇತರರಿಗೆ ಸಂಬಂಧಿಸಿದಂತೆ ದಾಖಲಾದ ಅಫಿಡವಿಟ್‌ನ ತೆಗೆದುಕೊಳ್ಳಲು ನಿರಾಕರಿಸಿದ ಕೋಲ್ಕತಾ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಅಫಿಡವಿಟ್ ದಾಖಲೆಗಳನ್ನು ಮರು ಪರಿಶೀಲಿಸುವಂತೆ ಕೋರಿ ಹೈಕೋರ್ಟ್​ಗೆ ಹೊಸದಾಗಿ ಮನವಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಮೂಲೊಯ್ ಘಟಕ್ ಅವರಿಗೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಇಂದಿರಾ ಬ್ಯಾನರ್ಜಿ ಈ ಪ್ರಕರಣದ ವಿಚಾರಣೆಯಿಂದ ಸ್ವತಃ ಹಿಂದೆ ಸರಿದ ನಂತರ ಸುಪ್ರೀಂಕೋರ್ಟ್ ಈ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ. ಕೊನೆಗೂ ಈ ಪ್ರಕರಣವನ್ನು ಮಂಗಳವಾರ ನ್ಯಾಯಮೂರ್ತಿ ವಿನೀತ್ ಶರಣ್ ಅವರು ಮರು ನಿಯೋಜನೆಗೆ ಸೂಚಿಸಿ, ಶುಕ್ರವಾರ ವಿಚಾರಣೆ ನಡೆಸುವಂತೆ ದಿನ ನಿಗದಿ ಮಾಡಿರುವುದಾಗಿ ವರದಿ ಹೇಳಿದೆ.

ಇದನ್ನೂ ಓದಿ:BJP ತೊರೆದು TMC ಸೇರಿದ 150 ಜನ.. ಸ್ಯಾನಿಟೈಸ್ ಮಾಡಿ ಪಕ್ಷಕ್ಕೆ ಸೇರ್ಪಡೆ

ಜೂನ್ 9ರಂದು ಮಮತಾ ಬ್ಯಾನರ್ಜಿ ಮತ್ತು ಘಟಕ್ ಸಲ್ಲಿಸಿದ್ದ ಅಫಿಡವಿತ್ ಅನ್ನು ಸಿಜೆ ರಾಜೇಶ್ ಬಿಂದಾಲ್ ನೇತೃತ್ವದ ಕೋಲ್ಕತಾ ಹೈಕೋರ್ಟ್​​ನ ಐವರು ನ್ಯಾಯಾಧೀಶರ ಪೀಠ ಸ್ವೀಕರಿಸಲು ನಿರಾಕರಿಸಿತ್ತು.

ಜೂನ್ 28ರೊಳಗೆ ಅರ್ಜಿಯನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ಆದೇಶಿಸಿದೆ. ಸಿಬಿಐ ಮತ್ತು ಇತರೆ ಪಕ್ಷಗಳಿಗೆ ಪ್ರತಿಗಳನ್ನು ನೀಡಬೇಕು. ಈ ಪ್ರತಿಗಳಿಗೆ ಸಿಬಿಐ ಹಾಗೂ ಇತರೆ ಪಕ್ಷಗಳು ಪ್ರತ್ಯುತ್ತರ ಸಲ್ಲಿಸುವುದಕ್ಕೆ ಕೋರ್ಟ್​ ಅವಕಾಶ ನೀಡಿದೆ.

ABOUT THE AUTHOR

...view details