ಚೆನ್ನೈ(ತಮಿಳುನಾಡು): 44ನೇ ಫಿಡೆ ಚೆಸ್ ಒಲಿಂಪಿಯಾಡ್ ಜುಲೈ 28ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ನೇಪಿಯರ್ ಸೇತುವೆಗೆ ಚೆಸ್ ಬೋರ್ಡಿನಂತೆ ಬಣ್ಣ ಬಳಿಯಲಾಗಿದೆ. ಸೇತುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಚೆಸ್ ಬೋರ್ಡ್‌ನಂತೆ ಕಂಗೊಳಿಸುತ್ತಿದೆ ಚೆನ್ನೈನ ನೇಪಿಯರ್ ಸೇತುವೆ: ವಿಡಿಯೋ ನೋಡಿ
ಚೆಸ್ ರಾಜಧಾನಿ ಎಂದೇ ಕರೆಯಲ್ಪಡುವ ಚೆನ್ನೈನಲ್ಲಿ ಚೆಸ್ ಮಾದರಿಯಲ್ಲೇ ಸೇತುವೆಯನ್ನು ಚಿತ್ರಿಸಲಾಗಿದ್ದು ಗಮನ ಸೆಳೆಯುತ್ತಿದೆ.
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆಗೆ ಸಾಹು ಅವರು, "ಭಾರತದ ಚೆಸ್ ರಾಜಧಾನಿ ಚೆನ್ನೈ ನಗರಿ ಗ್ರ್ಯಾಂಡ್ ಚೆಸ್ ಒಲಿಂಪಿಯಾಡ್ 2022 ಆಯೋಜಿಸಲು ಸಿದ್ಧವಾಗಿದೆ. ಐಕಾನಿಕ್ ನೇಪಿಯರ್ ಸೇತುವೆಯನ್ನು ಚೆಸ್ ಬೋರ್ಡ್‌ನಂತೆ ಅಲಂಕರಿಸಲಾಗಿದೆ" ಎಂದು ತಿಳಿಸಿದ್ದಾರೆ.
2,000ಕ್ಕೂ ಹೆಚ್ಚು ಆಟಗಾರರು ಒಲಿಂಪಿಯಾಡ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸ್ಪರ್ಧೆ ಆಗಸ್ಟ್ 10 ರಂದು ಮುಕ್ತಾಯಗೊಳ್ಳಲಿದೆ. ಸುಮಾರು 100 ವರ್ಷಗಳ ಚೆಸ್ ಒಲಿಂಪಿಯಾಡ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಆತಿಥ್ಯ ವಹಿಸುತ್ತಿದೆ. ಒಟ್ಟು 188 ದೇಶಗಳು ಈ ಸ್ಪರ್ಧೆಗಾಗಿ ನೋಂದಾಯಿಸಿಕೊಂಡಿವೆ.