ಮುಂಬೈ( ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯಲ್ಲಿ ಆರಂಬಿಸಿರುವ ‘ಆಕ್ಸಿಜನ್ ಸಿಸ್ಟರ್’ ಎಂಬ ನವೀನ ಪರಿಕಲ್ಪನೆ ಇಡೀ ದೇಶದಲ್ಲಿ ಜನಪ್ರಿಯತೆ ಗಳಿಸುತ್ತಿದೆ.
ಕೊರೊನಾ ಸೋಂಕಿತರನ್ನು ಉಳಿಸಲು ಮಹಾರಾಷ್ಟ್ರದಲ್ಲಿ ‘ಆಕ್ಸಿಜನ್ ಸಿಸ್ಟರ್ ’ ಪರಿಕಲ್ಪನೆ - ಆರೋಗ್ಯ ಸಚಿವ ರಾಜೇಶ್ ತೋಪೆ
ಮಹಾರಾಷ್ಟ್ರದಲ್ಲಿ ಕೊರೊನಾ ರೋಗಿಗಳನ್ನು ಉಳಿಸಲು ನಂದೂರ್‌ಬಾರ್ ಜಿಲ್ಲೆಯಲ್ಲಿ ‘ಆಕ್ಸಿಜನ್ ಸಿಸ್ಟರ್’ ಎಂಬ ಪರಿಕಲ್ಪನೆ ಯಶಸ್ವಿಯಾಗುತ್ತಿದೆ.

ಸರಿಯಾಗಿ ಯೋಜಿತ ಆಮ್ಲಜನಕದ ಬಳಕೆಗೆ ‘ಆಕ್ಸಿಜನ್ ಸಿಸ್ಟರ್ ಎಂಬ ಹೆಸರು ಇಡಲಾಗಿದೆ. ಬುಡಕಟ್ಟು ಜಿಲ್ಲೆಯಾದ ನಂದೂರ್ಬಾರ್, ಕೊರೊನಾವನ್ನು ಎದುರಿಸುವ ನವೀನ ಉಪಕ್ರಮಗಳಿಂದಾಗಿ ಪ್ರಸ್ತುತ ಭಾರಿ ಜನಪ್ರಿಯತೆ ಗಳಿಸಿಕೊಂಡಿದೆ. ತನ್ನದೇ ಆದ ಆಮ್ಲಜನಕ ಉತ್ಪಾದನಾ ಯೋಜನೆಯನ್ನು ಸ್ಥಾಪಿಸಿದ ನಂತರ ನಂದೂರ್‌ಬಾರ್‌ನಲ್ಲಿ ಪ್ರಾರಂಭಿಸಲಾದ ‘ಆಕ್ಸಿಜನ್ ಸಿಸ್ಟರ್’ ಪರಿಕಲ್ಪನೆಯು ರಾಜ್ಯದಲ್ಲಿ ಪಾಮುಖ್ಯತೆ ಪಡೆದುಕೊಳ್ಳುತ್ತಿದೆ.
ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ರಾಜೇಶ್ ತೋಪೆ, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ರಘುನಾಥ್ ಭೋಯ್ ಮಾರ್ಗದರ್ಶನದಲ್ಲಿ ಇಪ್ಪತ್ತು ರೋಗಿಗಳಿಗೆ ಒಬ್ಬ ಆಕ್ಸಿಜನ್ ಸಿಸ್ಟರ್ ಅವರನ್ನು ನೇಮಕ ಮಾಡಿದ್ದು, ಅವರು ಅವಶ್ಯಕತೆ ಇದ್ದವರಿಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಈ ಪ್ರಯೋಗ ಈಗ ಯಶಸ್ವಿ ಆಗಿದೆ. ಹಲವಾರು ಸ್ಥಳಗಳಲ್ಲಿ ಹಾಸಿಗೆಗಳಿದ್ದರೆ, ಯಾವುದೇ ಆಮ್ಲಜನಕ ಸಿಲಿಂಡರ್ ಲಭ್ಯವಿಲ್ಲ. ಆದ್ದರಿಂದ, ನಂದೂರ್ಬಾರ್ ಜಿಲ್ಲಾ ಆಸ್ಪತ್ರೆಯು ಆಮ್ಲಜನಕವನ್ನು ಬುದ್ಧಿವಂತಿಕೆಯಿಂದ ಹೇಗೆ ಬಳಸುವುದು ಎಂಬ ನವೀನ ಕಲ್ಪನೆಯನ್ನ ಯಶಸ್ವಿಯಾಗಿ ಬಳಸಿಕೊಂಡು ಅವಶ್ಯಕತೆ ಇದ್ದವರಿಗೆ ಸಕಾಲಕ್ಕೆ ಒದಗಿಸುವ ಯೋಜನೆ ಇದಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ‘ಆಕ್ಸಿಜನ್ ಸಿಸ್ಟರ್ ’ ಎಂಬ ಪರಿಕಲ್ಪನೆಯನ್ನು ಜಾರಿಗೆ ತರಲಾಗುತ್ತಿದೆ. ಪ್ರತಿ 20 ರೋಗಿಗಳಿಗೆ ಒಬ್ಬ ‘ಆಕ್ಸಿಜನ್ ಸಿಸ್ಟರ್ ನೇಮಕ ಮಾಡಲಾಗಿದೆ. ಇದರಿಂದ ಕೊರೊನಾ ಸೋಂಕಿತರ ಜೀವ ಉಳಿಸಲು ಇದು ಸಹಾಯಕಾರಿಯಾಗುತ್ತದೆ ಮಹಾ ಆರೋಗ್ಯ ಸಚಿವರು.