ಕರ್ನಾಟಕ

karnataka

ETV Bharat / bharat

ಮೂರನೇ ದಿನವೂ ಮುಂದುವರಿದ ರೋಗಿಗಳ ಸಾವಿನ ಸರಣಿ; ನಾಂದೇಡ್​ ಆಸ್ಪತ್ರೆಯಲ್ಲಿ ಅಸುನೀಗಿದವರ ಸಂಖ್ಯೆ 35ಕ್ಕೆ ಏರಿಕೆ

ನಾಂದೇಡ್​ ಆಸ್ಪತ್ರೆಯಲ್ಲಿ ರೋಗಿಗಳ ಸಾವಿನ ಸಂಖ್ಯೆ ಏರಿಕೆ ಕಾಣುತ್ತಿದ್ದು, ಈ ಸಂಬಂಧ ವಿಪಕ್ಷಗಳು ಸರ್ಕಾರಕ್ಕೆ ಸೂಕ್ತ ಕ್ರಮ ವಹಿಸುವಂತೆ ಒತ್ತಾಯಿಸಿದೆ.

Nanded Death Toll Rise On 35 Patient
Nanded Death Toll Rise On 35 Patient

By ETV Bharat Karnataka Team

Published : Oct 4, 2023, 11:48 AM IST

ನಾಂದೇಡ್​​: ನಾಂದೇಡ್​ ಆಸ್ಪತ್ರೆಯ ರೋಗಿಗಳ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ನಾಂದೇಡ್​ನ ಡಾ ಶಂಕರ್​ರಾವ್​ ಚವ್ಹಾಣ್​​​​ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೆ ಹೊಸ ನಾಲ್ಕು ಸಾವಿನ ಪ್ರಕರಣ ವರದಿಯಾಗಿದೆ. ನಿನ್ನೆಯವರೆಗೆ 31 ರೋಗಿಗಳು ಸಾವನ್ನಪ್ಪಿದ್ದರು. ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ ವಿಪಕ್ಷ ನಾಯಕ ಅಂಬದಾಸ್​ ದ್ನವೆ, ಇವತ್ತು ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆ ನಿರ್ವಹಣಾ ಮಂಡಳಿ ಜೊತೆ ಸಭೆ ನಡೆಸಲಿದ್ದಾರೆ. ಈ ನಡುವೆ ಕಾಂಗ್ರೆಸ್​​ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್​ ಚವ್ಹಾಣ್​​ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣ ಎಕ್ಸ್( ಈ ಹಿಂದಿನ ಟ್ವಿಟರ್​) ​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಶಂಕರ್​ರಾವ್​ ಚವ್ಹಾಣ್​ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 24 ಗಂಟೆಗಳಲ್ಲೇ 35 ರೋಗಿಗಳು ಮೃತಪಟ್ಟಿದ್ದಾರೆ. ಮೊದಲ ದಿನ 24 ರೋಗಿಗಳು ಸಾವನ್ನಪ್ಪಿದ್ದು, ಇದರಲ್ಲಿ 12 ನವಜಾತ ಶಿಶುಗಳಾಗಿವೆ. ಇದಾದ ಬಳಿಕ ಮರು ದಿನ 7 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ನಾಲ್ಕು ಜನ ಸಾವನ್ನಪ್ಪಿದ್ದು, ಒಟ್ಟಾರೆ ಸಾವಿನ ಪ್ರಕರಣದ ಸಂಖ್ಯೆ 35ಕ್ಕೆ ಏರಿಕೆಯಾಗಿದೆ ಎಂಬ ಮಾಹಿತಿಯನ್ನು ಮಾಜಿ ಮುಖ್ಯಮಂತ್ರಿ ಅಶೋಕ್​ ಚವ್ಹಾಣ್​ ಮೈಕ್ರೋ ಬ್ಲಾಗಿಂಗ್​ ತಾಣದಲ್ಲಿ ಸರ್ಕಾರದ ವಿರುದ್ಧ ಟೀಕಿಸಿದ್ದು, 16 ಹಸುಳೆಗಳ ಸಾವು ಆಘಾತ ತಂದಿದೆ ಎಂದಿದ್ದಾರೆ.

ಡಾ ಶಂಕರ್​ರಾವ್​ ಚವ್ಹಾಣ್​​​ ಸರ್ಕಾರಿ ವೈದ್ಯಕೀಯ ಕಾಲೇಜ್​ ಮತ್ತು ಆಸ್ಪತ್ರೆಯ ದುರ್ಘಟನೆ ಸಂಬಂಧ ವೈದ್ಯಕೀಯ ಸಚಿವ ಹಸನ್​ ಮುಶ್ರಿಫ್​ ಮತ್ತು ರಕ್ಷಣಾ ಮಂತ್ರಿ ಗಿರೀಶ್​ ಮಹಾರಾಜ್​ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿದೆ. ಈ ವೇಳೆ, ಆಸ್ಪತ್ರೆಯ ಪರಿಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಆಸ್ಪತ್ರೆಯ ಆರೋಗ್ಯ ಸೇವೆ ಪರಿಣಾಮಕಾರಿಯಾಗಿ ನೀಡಲು ಅನೇಕ ಅಲ್ಪಕಾಲಿಕ ಮತ್ತು ದೀರ್ಘಕಾಲಿಕ ಕ್ರಮಗಳನ್ನು ನಡೆಸುವಂತೆ ಸಲಹೆ ನೀಡಲಾಗಿದೆ. ಇಬ್ಬರು ಸಚಿವರು ನಮ್ಮ ಭಾವನೆಗಳನ್ನು ಅರ್ಥೈಸಿಕೊಂಡು, ಈ ಸಂಬಂಧ ಸರಿಯಾದ ನಿರ್ಧಾರವನ್ನು ಆದಷ್ಟು ಬೇಗ ನಡೆಸುತ್ತಾರೆ ಎಂಬ ಭರವಸೆ ಇದೆ ಎಂದು ಅಶೋಕ್​ ಚವ್ಹಾಣ್​​​ ತಿಳಿಸಿದ್ದಾರೆ

ಇದೇ ವೇಳೆ, ಸಚಿವರಿಗೆ ಆಸ್ಪತ್ರೆಯ ರೋಗಿಗಳ ಸಾವಿನ ಪ್ರಕರಣ ಮತ್ತು ನವಾಜಾತ ಶಿಶುಗಳ ಸಾವಿನ ಸಂಖ್ಯೆ ಕೂಡ ಸೂಚಿಸಿ ಅವರು ಪೋಸ್ಟ್​ ಮಾಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಏನಿದು ಪ್ರಕರಣ?: ಮಹಾರಾಷ್ಟ್ರದ ನಾಂದೇಡ್​ನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಆಸ್ಪತ್ರೆಯ ಕೊರತೆಯಿಂದಾಗಿ ವಿವಿಧ ಕಾಯಿಲೆ ಮತ್ತು ಹಾವು ಕಡಿತದಿಂದ ರೋಗಿಗಳು ಪ್ರಾಣ ಕಳೆದುಕೊಂಡಿದ್ದರು. ಅಕ್ಟೋಬರ್​ 2ರ ಸೋಮವಾರದೊಳಗೆ 24 ಗಂಟೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಹನ್ನೆರಡು ಹಸುಗೂಸುಗಳು ಸೇರಿದಂತೆ 24 ಮಂದಿ ಸಾವಿಗೀಡಾಗಿದ್ದು, ದೊಡ್ಡ ಮಟ್ಟದಲ್ಲಿ ಸುದ್ದಿಗೆ ಕಾರಣವಾಯಿತು.

ಇದನ್ನೂ ಓದಿ:ನಾಂದೇಡ್​ ಆಸ್ಪತ್ರೆಯಲ್ಲಿ ರೋಗಿಗಳ ಸಾವು: ವೈದ್ಯಾಧಿಕಾರಿಯಿಂದ ಕೊಳಕಾಗಿದ್ದ ಶೌಚಾಲಯ ತೊಳಿಸಿದ ಸಂಸದ- ವಿಡಿಯೋ

ABOUT THE AUTHOR

...view details