ಪಾಲಕ್ಕಾಡ್ (ಕೇರಳ):ಕೇರಳದ ಬುಡಕಟ್ಟು ಗಾಯಕಿ ನಾಂಚಿಯಮ್ಮ ಅವರು ಇತ್ತೀಚೆಗೆ ಪ್ರಕಟಿಸಲಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಹಿಳಾ ಗಾಯಕಿ ಪ್ರಶಸ್ತಿಯನ್ನು ಗೆದ್ದು ಅಪರೂಪದ ಸಾಧನೆ ಮಾಡಿದ್ದಾರೆ. 'ಅಯ್ಯಪ್ಪನುಂ ಕೊಶಿಯುಂ' ಚಿತ್ರದಲ್ಲಿ ಇವರು ಹಾಡು ಹಾಡಿದ್ದು, ಇದಕ್ಕೆ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಗೆದ್ದ ಮೊದಲ ಬುಡಕಟ್ಟು ಮಹಿಳೆಯಾಗಿದ್ದಾರೆ.
ಈಟಿವಿ ಭಾರತದ ಜೊತೆ ಮಾತನಾಡಿದ ನಂಚಿಯಮ್ಮ, ನಾನು ಈ ಪ್ರಶಸ್ತಿಯನ್ನು ಸಚಿ ಸರ್‌ಗೆ ಅರ್ಪಿಸುತ್ತೇನೆ. ಗುಡ್ಡದ ಮೇಲೆ ಆಡು ಮತ್ತು ಹಸುಗಳನ್ನು ಮೇಯುತ್ತಿದ್ದೆ. ನನ್ನ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಸಚಿ ಸರ್ ನನಗೆ ಅವಕಾಶ ನೀಡಿ ಈ ಮಟ್ಟಕ್ಕೆ ತಂದಿದ್ದಾರೆ ಎಂದು ಕೆ ಆರ್ ಸಚ್ಚಿದಾನಂದ್ ಅವರನ್ನು ಸ್ಮರಿಸಿಕೊಂಡರು.