ಕೊಲ್ಹಾಪುರ (ಮಹಾರಾಷ್ಟ್ರ):ಸಹ್ಯಾದ್ರಿ ಹುಲಿ ಯೋಜನೆಯ ನೂತನ ನಿರ್ದೇಶಕರಾಗಿ ನಾನಾಸಾಹೇಬ್ ಲಡ್ಕಟ್ ಅವರನ್ನು ನೇಮಿಸಲಾಗಿದೆ. ಅವರು ತಮ್ಮ ಅಧಿಕೃತ ಕಾರಿನಲ್ಲಿ ಹೊಸ ಪೋಸ್ಟಿಂಗ್ ಸ್ಥಳಕ್ಕೆ ತೆರಳುವ ಬದಲು 300 ಕಿಲೋಮೀಟರ್ ಸೈಕ್ಲಿಂಗ್ ಮಾಡಿಕೊಂಡು ತೆರಳಿರುವುದು ವಿಶೇಷವಾಗಿದೆ. ನಾನಾಸಾಹೇಬ್ ಅವರು ಜನರಲ್ಲಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುತ್ತ 300ಕಿ.ಮೀ ಸೈಕ್ಲಿಂಗ್ ಮಾಡಿದ್ದಾರೆ.
ಅಧಿಕೃತ ಕಾರು ಇದ್ದರೂ 300 ಕಿ.ಮೀ. ಸೈಕ್ಲಿಂಗ್ ಮಾಡಿದ ಅಧಿಕಾರಿ.. ಕಾರಣ ಏನು ಎಂದರೆ? - ಅಧಿಕೃ ಕಾರು ಇದ್ದರೂ 300 ಕಿ.ಮೀ. ಸೈಕ್ಲಿಂಗ್ ಮಾಡಿದ ಅಧಿಕಾರಿ
ಸಹ್ಯಾದ್ರಿ ಹುಲಿ ಯೋಜನೆಯ ನೂತನ ನಿರ್ದೇಶಕರಾಗಿ ನೇಮಕರಾಗಿರುವ ನಾನಾಸಾಹೇಬ್ ಲಡ್ಕಟ್ ಅವರು ಹೊಸ ಪೋಸ್ಟಿಂಗ್ ಸ್ಥಳಕ್ಕೆ 300ಕಿ.ಮೀ ಸೈಕ್ಲಿಂಗ್ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಹ್ಯಾದ್ರಿ ಹುಲಿ ಯೋಜನೆಯ ಮಾಜಿ ಕ್ಷೇತ್ರ ನಿರ್ದೇಶಕ ಸಮಾಧಾನ್ ಚೌಹಾಣ್ ಅವರನ್ನು ವಜಾಗೊಳಿಸಿ ನಾನಾಸಾಹೇಬ್ ಅವರನ್ನು ನೇಮಿಸಲಾಗಿದೆ. ನಾನಾಸಾಹೇಬ್ ಅವರು ಹೊಸ ಪೋಸ್ಟಿಂಗ್ ಸ್ಥಳವಾದ ಕೊಲ್ಹಾಪುರಕ್ಕೆ ಪುಣೆಯಿಂದ ಸೈಕಲ್‌ನಲ್ಲಿ ಹೊಗಿದ್ದಾರೆ. ಅವರು ಮಹಾರಾಷ್ಟ್ರ ಅರಣ್ಯ ಸೇವೆಯ 1986 - 87 ಬ್ಯಾಚ್ ಅಧಿಕಾರಿಯಾಗಿದ್ದರು. ಅವರು ಈ ಮೊದಲು ಮೆಲ್ಘಾಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮತ್ತು ಮುಂಬೈನ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನದಲ್ಲಿ ಸೇವೆ ಸಲ್ಲಿಸಿದ್ದಾರೆ.
ಪ್ರಕೃತಿ ಸಂರಕ್ಷಣೆ ಕುರಿತು ಸಂದೇಶ ಸಾರಲು ಪುಣೆಯಿಂದ ಕೊಲ್ಹಾಪುರಕ್ಕೆ ಸೈಕಲ್ ತುಳಿದಿದ್ದರು. ಅಧಿಕೃತ ಕಾರನ್ನು ಹೊಂದಿದ್ದರೂ, ಅವರು ಸೈಕಲ್‌ನಲ್ಲಿ ಸವಾರಿ ಮಾಡುವುದನ್ನು ಇಷ್ಟಪಡುತ್ತಾರೆ. ಅವರ ಈ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
TAGGED:
Sahyadri Tiger Project