ಕರ್ನಾಟಕ

karnataka

ETV Bharat / bharat

ಎಂಪಿಸಿಸಿ ಅಧ್ಯಕ್ಷ ಹುದ್ದೆಗೆ ಸ್ಪರ್ಧೆ; ಮಹಾ ವಿಧಾನಸಭೆ ಸ್ಪೀಕರ್​​ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಾನಾ ಪಟೋಲೆ - ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್​​ ಸ್ಥಾನ

ಕಾಂಗ್ರೆಸ್ ಏಕ್ನಾಥ್ ಗಾಯಕ್ವಾಡ್​​​ ಅವರನ್ನು ಮುಂಬೈ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕಿ, ಆ ಜವಾಬ್ದಾರಿಯನ್ನು ಭಾಯಿ ಜಗ್ತಾಪ್ ಅವರಿಗೆ ವಹಿಸಿದಾಗ, ರಾಜ್ಯ ಘಟಕದಲ್ಲಿ ಎಂಪಿಸಿಸಿ ಅಧ್ಯಕ್ಷ ಹುದ್ದೆಗೆ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ.

Nana Patole
ನಾನಾ ಪಟೋಲೆ

By

Published : Feb 17, 2021, 3:35 PM IST

ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ಅಧ್ಯಕ್ಷ ಹುದ್ದೆಗೆ ನಾನಾ ಪಟೋಲೆ ಸ್ಪರ್ಧಿಸುತ್ತಿರುವ ಹಿನ್ನೆಲೆ ಅವರು ತಮ್ಮ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್​​ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ.

ನಾನಾ ಪಟೋಲೆ ತಮ್ಮ ರಾಜೀನಾಮೆಯನ್ನು ಉಪ ಸ್ಪೀಕರ್ ನರ್ಹಾರಿ ಝಿರ್ವಾಲ್ ಅವರಿಗೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಏಕನಾಥ್​ ಗಾಯಕ್ವಾಡ್​ ಅವರನ್ನು ಮುಂಬೈ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕಿ, ಆ ಜವಾಬ್ದಾರಿಯನ್ನು ಭಾಯಿ ಜಗ್ತಾಪ್ ಅವರಿಗೆ ವಹಿಸಿದಾಗ, ರಾಜ್ಯ ಘಟಕದಲ್ಲಿ ಎಂಪಿಸಿಸಿ ಅಧ್ಯಕ್ಷ ಹುದ್ದೆಗೆ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ.

ಹಾಲಿ ಎಂಪಿಸಿಸಿ ಅಧ್ಯಕ್ಷ ಬಾಲಾಸಾಹೇಬ್ ಥೋರತ್ ತಕ್ಷಣ ದೆಹಲಿಗೆ ತೆರಳಿ ತಮ್ಮ ಹುದ್ದೆಯನ್ನು ಉಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದರೊಂದಿಗೆ ಬಾಲಾಸಾಹೇಬ್ ಥೋರಾಟ್​​ ತಮ್ಮ ಹುದ್ದೆಯನ್ನು ಉಳಿಸಿಕೊಳ್ಳುತ್ತಾರೆ ಎಂಬ ಚರ್ಚೆ ಎಂಪಿಸಿಸಿಯಲ್ಲಿ ನಡೆಯುತ್ತಿದೆ.

ಈ ಸುದ್ದಿಯನ್ನೂ ಓದಿ:ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಗೆ ಗಲ್ಲು.. ಯಾರು ಈ ಶಬ್ನಮ್​!? ಏನು ಆಕೆ ಎಸಗಿದ ಅಪರಾದ!?

ಆದರೆ ಒಬ್ಬ ವ್ಯಕ್ತಿ- ಒಂದು ಹುದ್ದೆ ಎನ್ನುವ ತತ್ವವನ್ನು ಗಮನದಲ್ಲಿಟ್ಟುಕೊಂಡು, ಕಾಂಗ್ರೆಸ್ ಬಾಳಾ ಸಾಹೇಬ್ ಥೋರಾಟ್​ ಅವರ ರಾಜೀನಾಮೆಯನ್ನು ತೆಗೆದುಕೊಳ್ಳಲು ಮನಸ್ಸು ಮಾಡಿದೆ. ಈ ಮಧ್ಯೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್​​ ಸ್ಥಾನಕ್ಕೆ ನಾನಾ ಪಟೋಲೆ ರಾಜೀನಾಮೆ ಸಲ್ಲಿಸಿದ್ದಾರೆ.

ABOUT THE AUTHOR

...view details