ಕರ್ನಾಟಕ

karnataka

ETV Bharat / bharat

ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದ್ದ ನಮೀಬಿಯಾದ ಹೆಣ್ಣು ಚೀತಾ ಸಾವು

ಡಿಸೆಂಬರ್ 22ರಂದು ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾದ ಹೆಣ್ಣು ಚೀತಾ 'ಶಾಶಾ' ಸಾವನ್ನಪ್ಪಿದೆ.

ನಮೀಬಿಯಾದ ಹೆಣ್ಣು ಚೀತಾ ಸಾವು Cheetah  Namibian female cheetah dies of kidney infection
ನಮೀಬಿಯಾದ ಹೆಣ್ಣು ಚೀತಾ ಸಾವು

By

Published : Mar 27, 2023, 10:01 PM IST

ಇಂಧೋರ್​(ಮಧ್ಯಪ್ರದೇಶ):ಳೆದ ವರ್ಷದಡಿಸೆಂಬರ್ 22ರಂದು ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾದ ಹೆಣ್ಣು ಚೀತಾ 'ಶಾಶಾ' ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಸಾವನ್ನಪ್ಪಿದೆ. ಚೀತಾ ಶಾಶಾವನ್ನು ಭಾರತಕ್ಕೆ ಕರೆತರುವ ಮುನ್ನ ಕಿಡ್ನಿ ಸೋಂಕಿನಿಂದ ಬಳಲುತ್ತಿರುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚೆಗೆ ಕಾಡಿಗೆ ಬಂದು ಶಾಶಾ ಚೀತಾ ಸೇರಿತ್ತು. ಚಿರತೆ ಸಂರಕ್ಷಣಾ ನಿಧಿಯ ವಕ್ತಾರ ಸುಸಾನ್ ಯನ್ನೆಟ್ಟಿ ಅವರು ಶಾಶಾ ಸಾವನ್ನು ದೃಢಪಡಿಸಿದ್ದಾರೆ. ಸೋಮವಾರ ಬೆಳಗ್ಗೆ 8 ಗಂಟೆಗೆ ಶಾಶಾ ಚೀತಾ ಮೂತ್ರಪಿಂಡದ ವೈಫಲ್ಯದ ಹಿನ್ನೆಲೆ ಮೃತಪಟ್ಟಿದೆ ಎಂದು ಶಂಕಿಸಲಾಗಿದೆ. ಅದಕ್ಕಾಗಿಯೇ ನಾವು ಅವುಗಳನ್ನು ಸೂಕ್ಷ್ಮ ಜೀವಿಗಳು ಎಂದು ಹೇಳುತ್ತೇವೆ. ಶವ ಪರೀಕ್ಷೆ ಬಳಿಕ ಸಾವಿನ ನಿಜವಾದ ಕಾರಣ ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.

ಮಾ.26ರಂದು ನೆಹರು ಝೂಲಾಜಿಕಲ್ ಪಾರ್ಕ್​ನಲ್ಲಿದ್ದ ಚೀತಾ ಸಾವು:ದಶಕದ ಹಿಂದೆ ಸೌದಿ ರಾಜಕುಮಾರ ಉಡುಗೊರೆಯಾಗಿ ನೀಡಿದ್ದ 15 ವರ್ಷದ ಗಂಡು ಚೀತಾ ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಮಾರ್ಚ್ 26ರಂದು ಹೃದಯಾಘಾತದಿಂದ ಮೃತಪಟ್ಟಿತ್ತು. ‘ಅಬ್ದುಲ್ಲಾ’ ಹೆಸರಿನ ಚೀತಾ ಮರಣೋತ್ತರ ಪರೀಕ್ಷೆ ನಡೆಸಿದಾಗ ಅದು ಹೃದಯಾಘಾತದಿಂದ ಪ್ರಾಣ ಮೃತಪಟ್ಟಿದ್ದಾಗಿ ಮೃಗಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದರು.

ಹೈದರಾಬಾದ್‌ನಲ್ಲಿ 2012ರಲ್ಲಿ ನಡೆದ CoP11 ಶೃಂಗಸಭೆಯ ವೇಳೆ ಮೃಗಾಲಯಕ್ಕೆ ಭೇಟಿ ನೀಡಿದ್ದ ಸೌದಿಯ ರಾಜಕುಮಾರ ಬಂದರ್ ಬಿನ್ ಸೌದ್ ಬಿನ್ ಮೊಹಮ್ಮದ್ ಅಲ್ ಸೌದ್ ಅವರು ಎರಡು ಆಫ್ರಿಕನ್ ಸಿಂಹಗಳು ಮತ್ತು 2 ಚೀತಾಗಳನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದರು. ವರ್ಷದ ಬಳಿಕ ಸೌದಿ ಅರೇಬಿಯಾದ ರಾಷ್ಟ್ರೀಯ ವನ್ಯಜೀವಿ ಸಂಶೋಧನಾ ಕೇಂದ್ರದಿಂದ ಪ್ರಾಣಿಗಳನ್ನು ಕರೆತರಲಾಗಿತ್ತು. 7 ವರ್ಷದ ಬಳಿಕ ಅಂದರೆ, 2020ರಲ್ಲಿ ಹೆಣ್ಣು ಚೀತಾ ಹಿಬಾ ತನ್ನ ಎಂಟನೇ ವಯಸ್ಸಿನಲ್ಲಿ ಪ್ಯಾರಾಪ್ಲೆಜಿಯಾ ರೋಗದಿಂದಾಗಿ ಸಾವನ್ನಪ್ಪಿತ್ತು. ಪ್ಯಾರಾಪ್ಲೆಜಿಯಾ ನರ ದೌರ್ಬಲ್ಯದಿಂದ ಕೂಡಿದ ಪಾರ್ಶ್ವವಾಯು ರೋಗದ ವರ್ಗಕ್ಕೆ ಸೇರಿದ್ದಾಗಿದೆ. ದುರ್ಬಲ ಸಂವೇದನೆಯಿಂದ ಹಿಬಾ ಕಣ್ಮರೆಯಾಗಿತ್ತು. ಅಂದಿನಿಂದ 'ಅಬ್ದುಲ್ಲಾ' ಒಂಟಿಯಾಗಿತ್ತು.

ಅಬ್ದುಲ್ಲಾ ಚೀತಾ ಕೂಡ ಸಾವಿಗೀಡಾಗಿದ್ದು, ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಚೀತಾಗಳೇ ಇಲ್ಲದಂತಾಗಿದೆ. ಸುಮಾರು 70 ವರ್ಷಗಳ ಹಿಂದೆಯೇ ಭಾರತದಲ್ಲಿ ಚೀತಾಗಳ ಸಂತತಿ ನಿರ್ನಾಮವಾಗಿವೆ ಎಂದು ಘೋಷಿಸಲಾಗಿತ್ತು. ಕಳೆದ ವರ್ಷವಷ್ಟೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಮೀಬಿಯಾದಿಂದ ಎಂಟು ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತಂದು ಬಿಟ್ಟಿತ್ತು. ಈ ಮೂಲಕ ಭಾರತದಲ್ಲಿ ಚೀತಾಗಳನ್ನು ಮತ್ತೆ ಪರಿಚಯಿಸಲಾಗಿತ್ತು.

ಇದಾದ ಬಳಿಕ ಮತ್ತೆ 12 ಚೀತಾಗಳನ್ನು ಅದೇ ಕುನೊ ಅರಣ್ಯಕ್ಕೆ ತಂದು ಬಿಡಲಾಗಿತ್ತು. ಸದ್ಯ ಹೆಣ್ಣು ಚಿರತೆ 'ಶಾಶಾ' ಸಾವನ್ನಪ್ಪಿದ್ದು, ಇದೀಗ ಒಟ್ಟು 19 ಚೀತಾಗಳು ಕಾಡಿನಲ್ಲಿ ಓಡಾಡುತ್ತಿವೆ. ಚೀತಾಗಳನ್ನು ಕ್ರೇಟ್‌ಗಳಲ್ಲಿ ಇಟ್ಟುಕೊಂಡು ಜೋಹಾನ್ಸ್‌ಬರ್ಗ್‌ನ ಟ್ಯಾಂಬೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತರಲಾಗಿದೆ. ಭಾರತೀಯ ವಾಯುಪಡೆಯ C-17 ಗ್ಲೋಬ್ ಮಾಸ್ಟರ್ ಕಾರ್ಗೋ ವಿಮಾನ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಹೊತ್ತು ತಂದಿತ್ತು.

ಇದರಲ್ಲಿ 7 ಗಂಡು ಮತ್ತು 5 ಹೆಣ್ಣು ಚೀತಾಗಳು ಇದ್ದವು. ಆಫ್ರಿಕನ್ ಚೀತಾವನ್ನು ಹೋಲುವ ಇತರ ಉಪಜಾತಿ ಚೀತಾಗಳು ಅತ್ಯಂತ ವೇಗವಾಗಿ ಓಡುವ ಪ್ರಾಣಿಯಾಗಿವೆ. ಆದರೆ, 1952ರಲ್ಲಿ ಭಾರತದಲ್ಲಿ ಈ ಜಾತಿಯ ಚೀತಾಗಳ ಸಂತತಿ ನಾಶವಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಭಾರತ ಸರ್ಕಾರ ಭಾರತಕ್ಕೆ ಚೀತಾಗಳ ಮರು ಪರಿಚಯಕ್ಕೆ ಸಹಕಾರದ ಕುರಿತು ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಿದ್ದವು. ಮುಂದಿನ 8 ರಿಂದ 10 ವರ್ಷಗಳವರೆಗೆ ವಾರ್ಷಿಕವಾಗಿ ಇನ್ನೂ 12 ಚಿರತೆಗಳನ್ನು ಸ್ಥಳಾಂತರಿಸುವ ಯೋಜನೆ ಇದೆ. ವಿಶ್ವದಾದ್ಯಂತ ಚೀತಾಗಳ ಸಂಖ್ಯೆ 1975ರಲ್ಲಿ ಅಂದಾಜು 15,000 ಇತ್ತು. ಕಾಲಕ್ರಮೇಣ ಅದು 7,000 ಕ್ಕಿಂತ ಕಡಿಮೆ ಪ್ರಮಾಣಕ್ಕೆ ಇಳಿದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ವಿದೇಶಿ ಪ್ರಜೆಯಿಂದ ಭಾರತದ ಸಂಸ್ಕೃತಿ ಅಧ್ಯಯನಕ್ಕೆ ಸೈಕಲ್ ಪರ್ಯಟನೆ

ABOUT THE AUTHOR

...view details