ಭುವನೇಶ್ವರ (ಒಡಿಶಾ): ಇಲ್ಲಿನ ಮಯೂರ್ಭಂಜ್ ಕೋವಿಡ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಕೋವಿಡ್ ಸೋಂಕಿತರನ್ನು ಬೆತ್ತಲಾಗಿಸಿ ನೆಲದ ಮೇಲೆ ಮಲಗಿಸಿರುವ ವಿಡಿಯೋ ವೈರಲ್ ಆಗಿದ್ದು, ಕೋಲಾಹಲ ಸೃಷ್ಟಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೊಗಳು ಹಾಗೂ ವಿಡಿಯೋ ತುಣುಕುಗಳಲ್ಲಿ ಸೋಂಕಿತರು ಹಾಸಿಗೆ ಇಲ್ಲದೆ ನೆಲದ ಮೇಲೆ ಮಲಗಿರುವುದು ಕಂಡು ಬರುತ್ತದೆ. ಕೆಲ ಸೋಂಕಿತರು ಬಟ್ಟೆಯೇ ಇಲ್ಲದ ಪರಿಸ್ಥಿತಿಯಲ್ಲಿರುವುದು ಸಹ ಕಂಡುಬಂದಿದೆ.