ಕರ್ನಾಟಕ

karnataka

ETV Bharat / bharat

ಸಚಿವಾಲಯದ 228 ನೌಕರರ ವಜಾ ಆದೇಶ ಎತ್ತಿಹಿಡಿದ ಉತ್ತರಾಖಂಡ್ ಹೈಕೋರ್ಟ್ - ವಿಧಾನಸಭಾ ಸೇವಾ ನಿಯಮಗಳಿಗೆ ವಿರುದ್ಧ

ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಈ ಸಿಬ್ಬಂದಿಯನ್ನು ಯಾವುದೇ ಕಾರಣ ಅಥವಾ ಸೂಚನೆ ನೀಡದೇ ಅವರ ಸೇವೆಗಳನ್ನು ಯಾವುದೇ ಸಮಯದಲ್ಲಿ ಕೊನೆಗೊಳಿಸಬಹುದು ಎಂಬ ಷರತ್ತಿನ ಮೇಲೆ ನೇಮಿಸಲಾಗಿತ್ತು. ಈ ನೇಮಕಾತಿಗಳನ್ನು ವಿಧಾನಸಭಾ ಸೇವಾ ನಿಯಮಗಳಿಗೆ ವಿರುದ್ಧವಾಗಿ ಮಾಡಲಾಗಿದೆ ಎಂದು ವಿಧಾನಸಭಾ ಸಚಿವಾಲಯವು ನ್ಯಾಯಾಲಯಕ್ಕೆ ಹೇಳಿದೆ.

ಸಚಿವಾಲಯದ 228 ನೌಕರರ ವಜಾ ಆದೇಶ ಎತ್ತಿಹಿಡಿದ ಉತ್ತರಾಖಂಡ್ ಹೈಕೋರ್ಟ್
nainital-high-court-orders-dismissal-of-uttarakhand-assembly-secretariat-personnel-recruited-from-backdoor

By

Published : Nov 24, 2022, 5:29 PM IST

ನೈನಿತಾಲ್ (ಉತ್ತರಾಖಂಡ್) : ವಿಧಾನಸಭೆ ಸಚಿವಾಲಯದ 228 ನೌಕರರನ್ನು ವಜಾಗೊಳಿಸಿದ ಕ್ರಮವನ್ನು ಉತ್ತರಾಖಂಡ್ ಹೈಕೋರ್ಟ್ ಎತ್ತಿ ಹಿಡಿದಿದೆ. ಈ ಹಿಂದೆ ಏಕಸದಸ್ಯ ಪೀಠ ಸಭಾಧ್ಯಕ್ಷರ ಈ ಆದೇಶಕ್ಕೆ ತಡೆ ನೀಡಿತ್ತು. ವಿಧಾನಸೌಧದಿಂದ ವಜಾಗೊಂಡ ನೌಕರರ ಮರು ನೇಮಕ ಮಾಡಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಹಾಗೂ ನ್ಯಾಯಮೂರ್ತಿ ಆರ್.ಸಿ. ಖುಲ್ಬೆ ಅವರಿದ್ದ ವಿಭಾಗೀಯ ಪೀಠವು, ವಿಧಾನಸಭೆ ಆದೇಶವನ್ನು ಎತ್ತಿಹಿಡಿಯಿತು. ನೌಕರರನ್ನು ವಜಾಗೊಳಿಸಿದ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಈ ಸಿಬ್ಬಂದಿಯನ್ನು ಯಾವುದೇ ಕಾರಣ ಅಥವಾ ಸೂಚನೆ ನೀಡದೇ ಅವರ ಸೇವೆಗಳನ್ನು ಯಾವುದೇ ಸಮಯದಲ್ಲಿ ಕೊನೆಗೊಳಿಸಬಹುದು ಎಂಬ ಷರತ್ತಿನ ಮೇಲೆ ನೇಮಿಸಲಾಗಿತ್ತು. ಈ ನೇಮಕಾತಿಗಳನ್ನು ವಿಧಾನಸಭಾ ಸೇವಾ ನಿಯಮಗಳಿಗೆ ವಿರುದ್ಧವಾಗಿ ಮಾಡಲಾಗಿದೆ ಎಂದು ವಿಧಾನಸಭಾ ಸಚಿವಾಲಯವು ನ್ಯಾಯಾಲಯಕ್ಕೆ ಹೇಳಿದೆ.

ಮತ್ತೊಂದೆಡೆ ತಮ್ಮನ್ನು ವಿಧಾನಸಭಾಧ್ಯಕ್ಷರು ವಜಾಗೊಳಿಸುವ ಸಂದರ್ಭದಲ್ಲಿ ಸಂವಿಧಾನದ 14ನೇ ಪರಿಚ್ಛೇದವನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ ಎಂದು ನೌಕರರ ಪರವಾಗಿ ವಾದಿಸಲಾಯಿತು. 2016 ರಿಂದ 2021 ರವರೆಗೆ ನೇಮಕವಾದ ನೌಕರರನ್ನು ಮಾತ್ರ ಸ್ಪೀಕರ್ ವಜಾಗೊಳಿಸಿದ್ದಾರೆ.

ಆದರೆ, 2000 ಮತ್ತು 2015 ರ ನಡುವೆ ವಿಧಾನಸಭೆ ಸಚಿವಾಲಯದಲ್ಲಿ ಇದೇ ರೀತಿಯ ನೇಮಕಾತಿಗಳನ್ನು ಮಾಡಲಾಗಿದ್ದು, ಅವುಗಳನ್ನು ಕಾಯಂಗೊಳಿಸಲಾಗಿದೆ. ಹಾಗಾಗಿ ಇದೇ ನಿಯಮ ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕಿತ್ತು ಎಂದು ನೌಕರರು ವಾದಿಸಿದ್ದರು.

ತಮ್ಮ ವಜಾ ಆದೇಶ ಪ್ರಶ್ನಿಸಿ ನೌಕರರಾದ ಬಬಿತಾ ಭಂಡಾರಿ, ಭೂಪೇಂದ್ರ ಸಿಂಗ್ ಬಿಶ್ತ್, ಕುಲದೀಪ್ ಸಿಂಗ್ ಮತ್ತು ಇತರ 102 ಮಂದಿ ಏಕ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.

ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸಭಾಧ್ಯಕ್ಷರು ಸೆ.27, 28 ಮತ್ತು 29ರಂದು ನಮ್ಮನ್ನು ವಜಾ ಮಾಡಿದ್ದಾರೆ ಎಂದು ನಮಗೆ ತಿಳಿಸಲಾಗಿದೆ. ಆದರೆ, ಯಾವ ಆಧಾರದ ಮೇಲೆ ಮತ್ತು ಯಾವ ಕಾರಣಕ್ಕಾಗಿ ತೆಗೆದು ಹಾಕಲಾಗಿದೆ ಎಂಬುದನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ ಅಥವಾ ನಮ್ಮ ವಾದವನ್ನು ಕೂಡ ಅವರು ಕೇಳಿಲ್ಲ.

ನಾವು ಸಚಿವಾಲಯದಲ್ಲಿ ಸಾಮಾನ್ಯ ನೌಕರರಂತೆ ಕೆಲಸ ಮಾಡಿದ್ದೇವೆ. ಒಂದೇ ಬಾರಿಗೆ ಇಷ್ಟೊಂದು ನೌಕರರನ್ನು ವಜಾಗೊಳಿಸಿರುವುದು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿಲ್ಲ ಮತ್ತು ಈ ಆದೇಶ ಕಾನೂನಿಗೆ ವಿರುದ್ಧವಾಗಿದೆ ಎಂದು ನೌಕರರು ವಾದಿಸಿದರು.

ಉಮಾದೇವಿ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ ಪ್ರಕರಣದ ತೀರ್ಪು ತಮಗೆ ಅನ್ವಯಿಸುವುದಿಲ್ಲ. ಏಕೆಂದರೆ ಹುದ್ದೆಗಳು ಖಾಲಿ ಇಲ್ಲದ ಮತ್ತು ಹಿಂಬಾಗಿಲ ನೇಮಕಾತಿ ನಡೆದಿರುವ ಕಡೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ ಎಂದು ನೌಕರರು ತಿಳಿಸಿದ್ದಾರೆ.

ಇಲ್ಲಿ ಹುದ್ದೆಗಳು ಖಾಲಿ ಇದ್ದು ನಂತರವೇ ನೇಮಕಾತಿ ನಡೆದಿದೆ. 2002ರಿಂದ 2015ರ ಅವಧಿಯಲ್ಲಿ ವಿಧಾನಸಭಾ ಸಚಿವಾಲಯದ 396 ಹುದ್ದೆಗಳಿಗೆ ಹಿಂಬಾಗಿಲ ನೇಮಕಾತಿಯೂ ನಡೆದಿದ್ದು, ಇವುಗಳನ್ನು ಸಕ್ರಮಗೊಳಿಸಲಾಗಿದೆ. ಹಾಗಾದರೆ ನಮ್ಮನ್ನು ಯಾವ ಆಧಾರದ ಮೇಲೆ ವಜಾ ಮಾಡಲಾಗಿದೆ ಎಂದು ನೌಕರರು ಪ್ರಶ್ನಿಸಿದ್ದರು.

2014ರ ವರೆಗೆ ತಾತ್ಕಾಲಿಕವಾಗಿ ನೇಮಕಗೊಂಡ ನೌಕರರಿಗೆ ನಾಲ್ಕು ವರ್ಷಕ್ಕಿಂತ ಕಡಿಮೆ ಸೇವಾವಧಿಯಲ್ಲಿ ನಿಯಮಿತ ನೇಮಕಾತಿ ನೀಡಲಾಗಿದೆ. ಆದರೆ, ತಮ್ಮನ್ನು ಮಾತ್ರ 6 ವರ್ಷ ಕಳೆದರೂ ಖಾಯಂ ಮಾಡದೇ ಈಗ ತೆಗೆದುಹಾಕಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಹಿಂದೆಯೂ 2018ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ನಮ್ಮ ನೇಮಕಾತಿಯನ್ನು ಪ್ರಶ್ನಿಸಲಾಗಿತ್ತು.

ಆದರೆ, ಆಗ ನ್ಯಾಯಾಲಯವು ನಮ್ಮ ನೇಮಕಾತಿ ಮಾನ್ಯವಾಗಿದೆ ಎಂದು ಒಪ್ಪಿಕೊಂಡಿತ್ತು. ಅದರ ನಂತರ ನಮ್ಮ ಎಲ್ಲ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಸಮಿತಿಯು ಪರಿಶೀಲಿಸಿದ್ದು, ಅವು ಮಾನ್ಯವಾಗಿವೆ ಎಂದು ಕಂಡು ಬಂದಿದೆ. ಅಲ್ಲದೇ ನಿಯಮಗಳ ಪ್ರಕಾರ 6 ತಿಂಗಳ ನಿಯಮಿತ ಸೇವೆಯ ನಂತರ ನಮ್ಮನ್ನು ಕ್ರಮಬದ್ಧಗೊಳಿಸಬೇಕಾಗಿತ್ತು ಎಂದು ನೌಕರರು ವಾದ ಮಂಡಿಸಿದ್ದರು.

ಇದನ್ನೂ ಓದಿ: ಅರ್ಧದಷ್ಟು ನೌಕರರ ವಜಾಕ್ಕೆ ಎಲೋನ್​​ ಮಸ್ಕ್​ ನೀಡಿದ ಕಾರಣವಿದು!

ABOUT THE AUTHOR

...view details