ಕರ್ನಾಟಕ

karnataka

ETV Bharat / bharat

26/11 ಮುಂಬೈ ಮಾದರಿ ಮತ್ತೊಂದು ಅಟ್ಯಾಕ್​​ಗೆ ಉಗ್ರರು ಸಜ್ಜು: ಹೈ- ಸೆಕ್ಯುರಿಟಿ ಸಭೆ ಕರೆದ ಪ್ರಧಾನಿ ಮೋದಿ - ನಾಗ್ರೋಟಾ ಎನ್​​ಕೌಟರ್​​ ಬಗ್ಗೆ ಮೋದಿ ಸಭೆ

ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿದ ವರದಿಗಳ ಪ್ರಕಾರ, 26/11 ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಂದು ಭಯೋತ್ಪಾದಕರು ದೊಡ್ಡ ದಾಳಿಗೆ ಸಜ್ಜಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಇದರ ಪುಷ್ಟಿ ನೀಡುವಂತೆ ಕಾಶ್ಮೀರದ ನಾಗ್ರೋಟದಲ್ಲಿ ನಡೆದ ಎನ್​ಕೌಂಟರ್​​ನಲ್ಲಿ ನಾಲ್ವರು ಉಗ್ರರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಹೈ -ಸೆಕ್ಯುರಿಟಿ ಸಭೆ ಕರೆದಿದ್ದಾರೆ.

PM holds review meet
ಮೋದಿ ಶಾ

By

Published : Nov 20, 2020, 3:32 PM IST

ನವದೆಹಲಿ:ಜಮ್ಮು ಮತ್ತು ಕಾಶ್ಮೀರದ ನಾಗ್ರೋಟದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಭಯೋತ್ಪಾದಕರು ಹತರಾದ ಒಂದು ದಿನದ ನಂತರ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಇತರ ಉನ್ನತ ಅಧಿಕಾರಿಗಳು ಪರಿಶೀಲನಾ ಸಭೆ ನಡೆಸಿದರು.

ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿದ ವರದಿಗಳ ಪ್ರಕಾರ, 26/11 ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಂದು ಭಯೋತ್ಪಾದಕರು ದೊಡ್ಡ ದಾಳಿಗೆ ಸಜ್ಜಾಗಿದ್ದಾರೆ ಎಂಬುದು ತಿಳಿದು ಬಂದಿದೆ.

ಜಮ್ಮು ನಗರದ ಹೊರವಲಯದಲ್ಲಿ ಇರುವ ಜಮ್ಮು - ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಮುಂಜಾನೆ ಭದ್ರತಾ ಪಡೆಗಳು ನಾಲ್ವರು ಶಂಕಿತ ಜೈಶ್ - ಎ - ಮೊಹಮ್ಮದ್ ಭಯೋತ್ಪಾದಕರನ್ನು ಹತ್ಯೆ ಮಾಡಿದ್ದರು.

ಹತ್ಯೆಗೀಡಾದ ಭಯೋತ್ಪಾದಕರ ಬಳಿ ಶಸ್ತ್ರಾಸ್ತ್ರ, ಮದ್ದುಗುಂಡು ಸಂಗ್ರಹಿಸುತ್ತಿದ್ದರು. ದೊಡ್ಡ ಯೋಜನೆ ಕಾರ್ಯಗತಗೊಳಿಸಲು ಬಂದಿದ್ದರು ಎಂದು ಜಮ್ಮು ಐಜಿಪಿ ಮುಖೇಶ್ ಸಿಂಗ್ ಹೇಳಿದ್ದಾರೆ.

ABOUT THE AUTHOR

...view details