ಕರ್ನಾಟಕ

karnataka

ETV Bharat / bharat

ನನಸಾಗದ ಕಾರು ಖರೀದಿ ಕನಸು.. ಗುಜರಿ ವಸ್ತುಗಳಿಂದ ಸ್ಪೋರ್ಟ್ಸ್​​​ ಕಾರು ತಯಾರಿಸಿದ ಹಳ್ಳಿ ಪ್ರತಿಭೆ! - ಮಹಾರಾಷ್ಟ್ರದ ನಾಗ್ಪುರ್ ಯುವಕನ ಆವಿಷ್ಕಾರ

Nagpur Youngster Made Sports Car : ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂಬ ಮಾತಿದೆ. ಮಹಾರಾಷ್ಟ್ರದ 26 ವರ್ಷದ ಯುವಕನೋರ್ವನ ಎರಡು ವರ್ಷಗಳ ಪರಿಶ್ರಮಕ್ಕೆ ಕೊನೆಗೂ ಯಶಸ್ಸು ಸಿಕ್ಕಿದೆ. ಫಾರ್ಮುಲಾ ರೇಸ್​​ಗಳಲ್ಲಿ ಬಳಕೆ ಮಾಡುವ ಕಾರು ಆವಿಷ್ಕಾರ ಮಾಡಿದ್ದಾನೆ..

Nagpur Youngster Made Sports Car
Nagpur Youngster Made Sports Car

By

Published : Jan 29, 2022, 3:12 PM IST

Updated : Jan 29, 2022, 11:00 PM IST

ನಾಗ್ಪುರ್​(ಮಹಾರಾಷ್ಟ್ರ):ಐಷಾರಾಮಿ ಕಾರು ಖರೀದಿ ಮಾಡಿ ಅದರಲ್ಲಿ ಸುತ್ತಾಡಬೇಕು ಎಂಬುದು ಬಹುತೇಕರ ಕನಸು. ಆದರೆ, ಅದು ಸಾಧ್ಯವಾಗದೇ ಹೋದಾಗ ನಮ್ಮಿಂದ ಆಗುವುದಿಲ್ಲ ಎಂದು ಸುಮ್ಮನಾಗಿ ಬಿಡ್ತಾರೆ. ನಾಗ್ಪುರದ ಮಹತ್ವಾಕಾಂಕ್ಷಿ ಯುವಕನೋರ್ವ ತಾನು ಕಂಡಿರುವ ಕನಸನ್ನ ಎರಡು ವರ್ಷಗಳ ಸತತ ಪರಿಶ್ರಮದಿಂದ ನನಸು ಮಾಡಿಕೊಂಡಿದ್ದಾನೆ.

ಮಹಾರಾಷ್ಟ್ರದ 26 ವರ್ಷದ ಯುವಕನೋರ್ವನ ಪ್ರಯತ್ನ

ಸ್ಪೋರ್ಟ್ಸ್​ ಕಾರು ಖರೀದಿ ಮಾಡಬೇಕೆಂಬ ಕನಸು ಕಾಣುತ್ತಿದ್ದ 26 ವರ್ಷದ ಕಾಶಿನಾಥ್​ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹೀಗಾಗಿ, ಕಾರು ಖರೀದಿ ಮಾಡಬೇಕೆಂಬ ಆತನ ಕನಸು ಈಡೇರಿರಲಿಲ್ಲ.

ಇದರಿಂದ ಹಿಂದೆ ಸರಿಯದ ಆತ ಹಳೆ ವಾಹನದ ಬಿಡಿ ವಸ್ತುಗಳಿಂದ ಫಾರ್ಮುಲಾ ಒನ್​ ರೇಸ್​ನಲ್ಲಿ ಓಡುವ ಸ್ಪೋರ್ಟ್ಸ್ ಕಾರು ಕಂಡು ಹಿಡಿದಿದ್ದಾನೆ. ಫಾರ್ಮುಲಾ ಒನ್ ರೇಸ್​ನಲ್ಲಿ ಓಡುವ ಸ್ಪೋರ್ಟ್ಸ್​ ಕಾರು ಇದಾಗಿದ್ದು, ಹಳೆಯ ವಾಹನದ ಬಿಡಿ ಭಾಗಗಳನ್ನ ಇದಕ್ಕಾಗಿ ಬಳಸಿದ್ದಾನೆ.

ಇದನ್ನೂ ಓದಿರಿ:ಕಿಕ್-ಸ್ಟಾರ್ಟಿಂಗ್ ಜೀಪ್‌ ತಯಾರಿಸಿದ ಬಡ ಪ್ರತಿಭೆಗೆ 'ಬೊಲೆರೋ' ಗಿಫ್ಟ್​ ನೀಡಿದ ಆನಂದ್ ಮಹೀಂದ್ರಾ!

ಕಳೆದ ಎರಡು ವರ್ಷಗಳಿಂದ ಈ ಕಾರು ತಯಾರಿಕೆಯಲ್ಲಿ ಭಾಗಿಯಾಗಿರುವ ಕಾಶಿನಾಥ್​​, ಅನೇಕ ಸಲ ವೈಫಲ್ಯ ಕೂಡ ಕಂಡಿದ್ದಾನೆ. ಆದರೆ, ಸತತ ಪರಿಶ್ರಮದಿಂದ ಕೊನೆಯದಾಗಿ ಫಾರ್ಮುಲಾ ಒನ್ ರೇಸಿಂಗ್ ಕಾರು ತಯಾರಿಸಿದ್ದಾರೆ. ಕಳೆದ ಜನವರಿ 26ರಂದು ಈ ಕಾರು ಬಿಡುಗಡೆ ಮಾಡಿದ್ದು, ಈತನ ಅವಿಷ್ಕಾರ ನೋಡಲು ಜನರು ಮುಗಿ ಬೀಳುತ್ತಿದ್ದಾರೆ.

ತಾನು ದುಡಿದ ಹಣದಿಂದ ಕಾರಿಗೋಸ್ಕರ ಇಂಜಿನ್​, ವೀಲ್, ಸೈಲೆನ್ಸರ್​​ ವಸ್ತು ಖರೀದಿ ಮಾಡಿದ್ದು, ಉಳಿದ ವಸ್ತುಗಳನ್ನ ಗುಜರಿ ಅಂಗಡಿಯಿಂದ ಸಂಗ್ರಹಿಸಿದ್ದಾನೆ. ಇದಕ್ಕಾಗಿ ಒಟ್ಟು 15 ಲಕ್ಷ ರೂ. ಖರ್ಚು ಮಾಡಿದ್ದು, 800 ಸಿಸಿ ಎಂಜಿನ್​ ಹೊಂದಿದೆ. ಪ್ರತಿ ಗಂಟೆಗೆ 140 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ ಎಂದು ತಿಳಿಸಿದ್ದಾನೆ.

ಗುಜರಿ ವಸ್ತುಗಳಿಂದ ಸ್ಪೋರ್ಟ್ಸ್​​​ ಕಾರು ತಯಾರಿಸಿದ ಹಳ್ಳಿ ಪ್ರತಿಭೆ

ಇದಕ್ಕೂ ಮುಂಚಿತವಾಗಿ ಹಳೇ ವಾಹನದ ಬಿಡಿ ಭಾಗಗಳಿಂದಲೇ ಮಹಾರಾಷ್ಟ್ರ ಮೂಲದ ದತ್ತಾತ್ರೇಯ ಲೋಹರ್ ಎಂಬ ವ್ಯಕ್ತಿ ದ್ವಿ-ಚಕ್ರ ವಾಹನ ಸಿದ್ಧಪಡಿಸಿದ್ದರು. ಇವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಮಹೀಂದ್ರಾ ಕಂಪನಿ ಎಂಡಿ ಆನಂದ್ ಮಹೀಂದ್ರಾ ಬೊಲೆರೋ ಕಾರು ಗಿಫ್ಟ್​ ನೀಡಿದ್ದರು. ಇದೀಗ ಅಂತಹ ಮತ್ತೊಂದು ಪ್ರತಿಭೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಹುಟ್ಟಿಕೊಂಡಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 29, 2022, 11:00 PM IST

ABOUT THE AUTHOR

...view details