ಕರ್ನಾಟಕ

karnataka

ETV Bharat / bharat

ನಾಗ್ಪುರದಲ್ಲಿ ಮಹಿಳೆಯರಿಂದ ಬೆತ್ತಲೆ ಡ್ಯಾನ್ಸ್​​.. ವಿಡಿಯೋ ವೈರಲ್​!

Nagpur women dancing without dress: ಕೋವಿಡ್​ ಅಬ್ಬರದ ನಡುವೆ ನಡೆಸಲಾಗಿರುವ ಎತ್ತಿನಗಾಡಿ ಓಡಿಸುವ ಸ್ಪರ್ಧೆ ವೇಳೆ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರು ಬೆತ್ತಲೆ ಡ್ಯಾನ್ಸ್ ಮಾಡಿದ್ದಾರೆ ಎನ್ನಲಾಗ್ತಿರುವ ವಿಡಿಯೋವೊಂದು ವೈರಲ್​ ಆಗಿದೆ.

Nagpur women dancing without dress
Nagpur women dancing without dress

By

Published : Jan 22, 2022, 4:44 PM IST

Updated : Jan 22, 2022, 8:13 PM IST

ನಾಗ್ಪುರ(ಮಹಾರಾಷ್ಟ್ರ):ಜಿಲ್ಲೆಯಲ್ಲಿ ಮಹಿಳೆಯರು ಬೆತ್ತಲೆ ಡ್ಯಾನ್ಸ್​ ಮಾಡಿದ್ದಾರೆಂದು ಹೇಳಲಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಗ್ರಾಮವೊಂದರಲ್ಲಿ ಆಯೋಜನೆ ಮಾಡಲಾಗಿದ್ದ ಎತ್ತಿನ ಗಾಡಿ ಓಟದ ಸ್ಪರ್ಧೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ವಿಡಿಯೋ ವೈರಲ್​ ಆಗಿದೆ.

ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಎತ್ತಿನ ಗಾಡಿ ಓಡಿಸುವ ಸ್ಪರ್ಧೆ(ಶಂಕರಪಟ್) ಏರ್ಪಡಿಸಲಾಗುತ್ತಿದ್ದು, ಅದನ್ನು ವೀಕ್ಷಣೆ ಮಾಡಲು ಸಾವಿರಾರು ಜನರು ಆಗಮಿಸುತ್ತಾರೆ. ​​ಸ್ಪರ್ಧೆಯ ನಂತರ ರಾತ್ರಿ ನಡೆಯುವ ಮನರಂಜನಾ ಕಾರ್ಯಕ್ರಮದಲ್ಲಿ ಮಹಿಳೆಯರು ಕುಣಿದು ಕುಪ್ಪಳಿಸುತ್ತಾರೆ. ಇದೀಗ, ಬಮ್ಹಣಿ ಗ್ರಾಮದಲ್ಲಿ ಈ ಕಾರ್ಯಕ್ರಮ ನಡೆಸಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದು, ಮಹಿಳೆಯರು ಬೆತ್ತಲೆಯಾಗಿ ಡ್ಯಾನ್ಸ್ ಮಾಡಿದ್ದಾರೆ. ಕಾರ್ಯಕ್ರಮ ವೀಕ್ಷಣೆಗೆ 100 ರೂ. ಟಿಕೆಟ್​ ಸಹ ಫಿಕ್ಸ್​ ಮಾಡಲಾಗಿತ್ತು ಎಂದು ಹೇಳಲಾಗ್ತಿದೆ.

ನಾಗ್ಪುರ್​​ದಲ್ಲಿ ಮಹಿಳೆಯರಿಂದ ಬೆತ್ತಲೆ ಡ್ಯಾನ್ಸ್​​...

ಇದನ್ನೂ ಓದಿರಿ:ಮುಂಬೈ ಅಗ್ನಿ ಅವಘಡದಲ್ಲಿ 7 ಮಂದಿ ಸಾವು: ಕೇಂದ್ರ, ರಾಜ್ಯ ಸರ್ಕಾರದಿಂದ ಪರಿಹಾರ ಘೋಷಣೆ

ಮಹಾರಾಷ್ಟ್ರದಲ್ಲಿ ಕೋವಿಡ್​ ಅಬ್ಬರ ಜೋರಾಗಿದ್ದು, ಎತ್ತಿನ ಗಾಡಿ ಸ್ಪರ್ಧೆಗೆ ಸರ್ಕಾರ ಅನುಮತಿ ನೀಡಿರಲಿಲ್ಲ. ಈ ಮಧ್ಯೆಯೂ ಕೂಡ ಇಂತಹ ಘಟನೆ ನಡೆದಿದೆ. ಇದರ ಬಗ್ಗೆ ತಮಗೆ ಯಾವುದೇ ರೀತಿಯ ಮಾಹಿತಿ ಇಲ್ಲವೆಂದು ಬಮ್ಹಣಿ ಗ್ರಾಮದ ಸರಪಂಚ್​ ರಿತೇಶ್​​ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಹಿಳೆಯರು ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್​ ಆಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ.

ವಿಡಿಯೋ ವೈರಲ್​ ಆಗುತ್ತಿದ್ದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮೂವರು ಆಯೋಜಕರನ್ನ ಬಂಧನ ಮಾಡಿದ್ದಾರೆ. ಬಂಧಿತರನ್ನ ಚಂದ್ರಶೇಖರ್​, ಸೂರಜ್​ ಮತ್ತು ಅನಿಲ್​ ಎಂದು ಗುರುತಿಸಲಾಗಿದೆ. ಮಹಿಳೆಯರೊಂದಿಗೆ ಕೆಲ ಯುವಕರು ಕೂಡ ಡ್ಯಾನ್ಸ್ ಮಾಡಿದ್ದು, ದೃಶ್ಯಾವಳಿ ಆಧರಿಸಿ ಇವರನ್ನ ಬಂಧನ ಮಾಡಲಾಗುವುದು ಎಂದು ನಾಗ್ಪುರ್ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 22, 2022, 8:13 PM IST

ABOUT THE AUTHOR

...view details