ಕರ್ನಾಟಕ

karnataka

ETV Bharat / bharat

ಪ್ರಿಯಕರನ ಮದುವೆಯಾಗಲು ಯುವತಿಯಿಂದ ಅತ್ಯಾಚಾರದ ಸುಳ್ಳು ಕಥೆ...ಸಾವಿರ ಪೊಲೀಸರಿಂದ ದಿನವಿಡೀ ತನಿಖೆ! - ಸುಳ್ಳು ಅತ್ಯಾಚಾರದ ಪ್ರಕರಣ ದಾಖಲು

ಪ್ರಿಯಕರನೊಂದಿಗೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ 19 ವರ್ಷದ ಯುವತಿಯೋರ್ವಳು ಅತ್ಯಾಚಾರದ ಸುಳ್ಳು ಪ್ರಕರಣ ದಾಖಲು ಮಾಡಿ ಸಿಕ್ಕಿ ಹಾಕಿಕೊಂಡಿದ್ದಾಳೆ.

Girl filed fake gang rape case for personal vendetta
Girl filed fake gang rape case for personal vendetta

By

Published : Dec 14, 2021, 11:54 PM IST

Updated : Dec 15, 2021, 4:13 AM IST

ನಾಗ್ಪುರ್​(ಮಹಾರಾಷ್ಟ್ರ):19 ವರ್ಷದ ಯುವತಿಯೋರ್ವಳು ತನ್ನ ಪ್ರಿಯಕರನೊಂದಿಗೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಅತ್ಯಾಚಾರದ ಸುಳ್ಳು ಕಥೆ ಕಟ್ಟಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾಳೆ. ಮಹಾರಾಷ್ಟ್ರದ ನಾಗ್ಪುರ್​​ದಲ್ಲಿ ಈ ಘಟನೆ ನಡೆದಿದೆ.

ಯುವತಿ ನೀಡಿರುವ ದೂರಿನನ್ವಯ ನಾಗ್ಪುರ್​​ ಪೊಲೀಸ್​ ಕಮಿಷನರ್​​ ಅಮಿತೇಶ್ ಕುಮಾರ್​ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳ ಜೊತೆ ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿ ತನಿಖೆಯಲ್ಲಿ ಭಾಗಿಯಾಗಿದ್ದರು. ನಗರದಾದ್ಯಂತ 250ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಕೊನೆಯದಾಗಿ ಇದೊಂದು ಸುಳ್ಳು ಕಥೆ ಎಂಬುದು ಅವರಿಗೆ ಗೊತ್ತಾಗಿದೆ. ತಾನು ಪ್ರೀತಿಸುತ್ತಿದ್ದ ಪ್ರಿಯಕರನೊಂದಿಗೆ ಮದುವೆ ಮಾಡಿಕೊಳ್ಳಲು ಈ ರೀತಿಯಾಗಿ ನಡೆದುಕೊಂಡಿದ್ದಾಗಿ ತಿಳಿದು ಬಂದಿದೆ.

ಏನಿದು ಪ್ರಕರಣ?

ನಾಗ್ಪುರ್​​ದ ಚಿಖಾಲಿ ಪ್ರದೇಶದ ಇಬ್ಬರು ಯುವಕರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆಂದು ಯುವತಿ ದೂರು ದಾಖಲು ಮಾಡಿದ್ದಳು. ಬೆಳಗ್ಗೆ ರಾಮದಾಸ್​​ಪೇಟ್​​ ಪ್ರದೇಶದಿಂದ ಸಂಗೀತ ಅಭ್ಯಾಸಕ್ಕಾಗಿ ತರಗತಿಗೆ ತೆರಳುತ್ತಿದ್ದಾಗ ವ್ಯಾನ್​​ನಲ್ಲಿ ಬಂದ ಇಬ್ಬರು ತನ್ನನ್ನ ಅಪಹರಣ ಮಾಡಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದಿದ್ದಳು. ಕೂಡಲೇ ತನಿಖೆ ಆರಂಭಿಸಿರುವ ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಶೋಧಕಾರ್ಯ ಆರಂಭಿಸಿದ್ದಾರೆ.

ಇದನ್ನೂ ಓದಿರಿ:ಅದ್ಧೂರಿ ಮದುವೆ ತಂದಿಟ್ಟ ಫಜೀತಿ... ಕ್ರೇನ್​ ಮೇಲಿಂದ ಬಿದ್ದ ವಧು-ವರ!

ಯುವತಿ ನೀಡಿರುವ ದೂರಿನ ಆಧಾರದ ಮೇಲೆ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ್ದು, ಅದಕ್ಕಾಗಿ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಒಳಗೊಂಡ 40 ವಿಶೇಷ ತಂಡ ರಚನೆ ಮಾಡಿದ್ದಾರೆ. ಇದರ ಮಧ್ಯೆ ಮಹಿಳೆಯನ್ನ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ವರದಿ ಬರಲು ತಡವಾಗಬಹುದೆಂಬ ಕಾರಣಕ್ಕಾಗಿ ಸುಮಾರು ಆರು ಗಂಟೆಗಳ ಕಾಲ ತನಿಖೆಯಲ್ಲಿ ಭಾಗಿಯಾಗಿರುವ ಪೊಲೀಸ್ ತಂಡಗಳು 50ಕ್ಕೂ ಅಧಿಕ ಜನರ ವಿಚಾರಣೆ ಮಾಡಿದೆ. ಆದರೆ, ಈ ವೇಳೆ ಆಕೆಯ ಮೇಲೆ ಯಾವುದೇ ರೀತಿಯ ಅತ್ಯಾಚಾರ ನಡೆದಿಲ್ಲ ಎಂಬುದು ಗೊತ್ತಾಗಿದೆ. ಲವರ್​​ನೊಂದಿಗೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಈ ರೀತಿಯಾಗಿ ನಡೆದುಕೊಂಡಿದ್ದಾಳೆಂಬ ತಿರ್ಮಾನಕ್ಕೆ ಬರಲಾಗಿದೆ. ಈಗಾಗಲೇ ಆಕೆಯ ಬಂಧನ ಮಾಡಿ ವಿಚಾರಣೆಗೊಳಪಡಿಸಲಾಗಿದೆ.

Last Updated : Dec 15, 2021, 4:13 AM IST

ABOUT THE AUTHOR

...view details