ನಾಗ್ಪುರ(ಮಹಾರಾಷ್ಟ್ರ): ಹವಾಲಾ ದಂಧೆಕೋರರ ಮೇಲೆ ದಾಳಿ ನಡೆಸಿರುವ ಪೊಲೀಸರು 4.2 ಕೋಟಿ ರೂ. ವಶಕ್ಕೆ ಪಡೆದಿದ್ದಾರೆ. ನಾಗ್ಪುರ ಪೊಲೀಸ್ ಇಲಾಖೆಯ ಮೂರು ಪೊಲೀಸ್ ತಂಡಗಳು ಸುರೇಶ್ ವಡಾಲಿಯಾ, ವರ್ಧಮಾನ್ ಮತ್ತು ಶಿವಕುಮಾರ್ ಎಂಬುವವರ ಮೇಲೆ ದಾಳಿ ನಡೆಸಿದ್ದಾಗಿ ತಿಳಿದು ಬಂದಿದೆ.
ಹವಾಲಾ ವ್ಯಾಪಾರಿಗಳ ಮೇಲೆ ದಾಳಿ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಆದೇಶದ ಮೇರೆಗೆ ಉಪ ಪೊಲೀಸ್ ಆಯುಕ್ತ ಗಜಾನನ ರಾಜಮಾನೆ ಮತ್ತು ಸಹಾಯಕ ಪೊಲೀಸ್ ಆಯುಕ್ತ ಸುರ್ವೆ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.
ಇದನ್ನೂ ಓದಿರಿ:ಕಾಶಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ ಅಖಿಲೇಶ್ ಯಾದವ್.. ಎಸ್‌ಪಿ ಗೆಲುವಿಗಾಗಿ ಪ್ರಾರ್ಥನೆ
ನಾಗ್ಪುರ ನಗರದ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಪಾರ್ಟ್ಮೆಂಟ್ನಲ್ಲಿ ದೊಡ್ಟ ಮಟ್ಟದ ಹವಾಲಾ ದಂಧೆ ನಡೆದಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಇದರ ಬೆನ್ನಲ್ಲೇ ದಾಳಿ ನಡೆಸಿ, ಇಷ್ಟೊಂದು ಮಟ್ಟದ ಹಣ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಮೂವರು ವ್ಯಾಪಾರಿಗಳ ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.