ಕರ್ನಾಟಕ

karnataka

ETV Bharat / bharat

ಉರುಸ್​ನಲ್ಲಿ ಪಾಲ್ಗೊಳ್ಳಲು ಬಂದಿದ್ದ ಐವರು ಯುವಕರು ನೀರುಪಾಲು..

ಉರುಸ್​​ಗೆ ತೆರಳುವ ಮುನ್ನ ನಾಗ್ಪುರದ ಗದೆಘಾಟ್‌ ಗ್ರಾಮದಲ್ಲಿರುವ ಕನ್ಹಾನ್‌ ನದಿಯಲ್ಲಿ ಐದು ಮಂದಿ ಸ್ನಾನಕ್ಕೆಂದು ಇಳಿದಿದ್ದಾರೆ. ಉಳಿದ 7 ಮಂದಿ ಕಾರಿನಲ್ಲೇ ಕುಳಿತುಕೊಂಡಿದ್ದರು. ಆಳ ತಿಳಿಯದೇ ನದಿಗೆ ಇಳಿದಿದ್ದ ಐವರೂ ನೀರಿನಲ್ಲಿ ಮುಳುಗಿದ್ದಾರೆ..

5 youths drowned in Kanhan river
ದೇವರ ದರ್ಶನಕ್ಕೆ ಬಂದಿದ್ದ ಐವರು ಯುವಕರು ನೀರುಪಾಲು

By

Published : Sep 5, 2021, 3:43 PM IST

ನಾಗ್ಪುರ (ಮಹಾರಾಷ್ಟ್ರ) :ದೇವರ ದರ್ಶನಕ್ಕೆ ತೆರಳುವ ಮುನ್ನ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಐವರು ಯುವಕರು ನೀರುಪಾಲಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಮೃತರನ್ನು ಮಹಾರಾಷ್ಟ್ರದ ಯವತ್ಮಾಲ್‌ ಜಿಲ್ಲೆಯ ನಿವಾಸಿಗಳಾದ ಸೈಯದ್ ಅರ್ಬಾಜ್ (21), ಖ್ವಾಜಾ ಬೇಗ್ (19), ಸಪ್ತಾಹಿನ್ ಶೇಖ್ (20), ಅಯಾಜ್ ಬೇಗ್ (22) ಮತ್ತು ಮೊಅಖುಜರ್ (21) ಎಂದು ಗುರುತಿಸಲಾಗಿದೆ.

ನಾಗ್ಪುರ ಜಿಲ್ಲೆಯ ಅನೇಕ ದರ್ಗಾಗಳಲ್ಲಿ ನಡೆಯುತ್ತಿರುವ ಮುಸ್ಲಿಂಮರ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಾಹುನ ದರ್ಶನ ಪಡೆಯಲು ಯವತ್ಮಾಲ್‌ ಜಿಲ್ಲೆಯಿಂದ ಒಟ್ಟು 12 ಮಂದಿ ಯುವಕರು ಕಾರಿನಲ್ಲಿ ಬಂದಿದ್ದರು.

ಇದನ್ನೂ ಓದಿ: ಭದ್ರಾವತಿ : ಈಜಲು ಹೋದ ಗೆಳೆಯರು ನೀರುಪಾಲು

ಉರುಸ್​​ಗೆ ತೆರಳುವ ಮುನ್ನ ನಾಗ್ಪುರದ ಗದೆಘಾಟ್‌ ಗ್ರಾಮದಲ್ಲಿರುವ ಕನ್ಹಾನ್‌ ನದಿಯಲ್ಲಿ ಐದು ಮಂದಿ ಸ್ನಾನಕ್ಕೆಂದು ಇಳಿದಿದ್ದಾರೆ. ಉಳಿದ 7 ಮಂದಿ ಕಾರಿನಲ್ಲೇ ಕುಳಿತುಕೊಂಡಿದ್ದರು. ಆಳ ತಿಳಿಯದೇ ನದಿಗೆ ಇಳಿದಿದ್ದ ಐವರೂ ನೀರಿನಲ್ಲಿ ಮುಳುಗಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯ ಈಜುಗಾರರ ಸಹಾಯದೊಂದಿಗೆ ಐವರನ್ನು ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಯಾರೊಬ್ಬರೂ ಸಿಕ್ಕಿಲ್ಲ. ಸದ್ಯ ಎಸ್​ಡಿಆರ್​ಎಫ್ ತಂಡ ಬಂದಿದ್ದು, ಶೋಧ ಕಾರ್ಯ ಮುಂದುವರೆದಿದೆ. ಈ ಸಂಬಂಧ ಕನ್ಹಾನ್‌ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details