ಹೈದರಾಬಾದ್(ತೆಲಂಗಾಣ):ಬಂಜಾರ ಹಿಲ್ಸ್ನ ರಾಡಿಸನ್ ಬ್ಲೂ ಎಂಬ ಪಂಚತಾರಾ ಹೋಟೆಲ್ನಲ್ಲಿ ಡ್ರಗ್ಸ್ ಸೇವಿಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಇಲ್ಲಿಯ ಪೊಲೀಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ಸೆಲೆಬ್ರಿಟಿಗಳು ಸೇರಿದಂತೆ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಟಾಲಿವುಡ್ ಮೆಗಾ ಕುಟುಂಬದ ಕುಡಿಯೊಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಕುಟುಂಬವನ್ನು ಹೈರಾಣಾಗಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಸ್ಪಷ್ಟಪಡಿಸಿದ್ದಾರೆ.
ಪಬ್ ದಾಳಿ ವೇಳೆ ಸಿಕ್ಕಿಬಿದ್ದ ಟಾಲಿವುಡ್ ಮೆಗಾ ಕುಟುಂಬದ ಕುಡಿ; ಪುತ್ರಿಯ ಪಾತ್ರದ ಬಗ್ಗೆ ನಾಗಬಾಬು ಸ್ಪಷ್ಟನೆ - ಪುತ್ರಿಯ ಪಾತ್ರದ ಬಗ್ಗೆ ನಾಗಬಾಬು ಸ್ಪಷ್ಟನೆ
ಪಬ್ ದಾಳಿ ವೇಳೆ ಟಾಲಿವುಡ್ ಮೆಗಾ ಕುಟುಂಬದ ಕುಡಿಯೊಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಈ ಬಗ್ಗೆ ಹಿರಿಯ ನಟ ನಾಗಬಾಬು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದಲ್ಲಿ ನಮ್ಮ ಮಗಳು ಯಾವುದೇ ತಪ್ಪು ಮಾಡಿಲ್ಲ. ವಿನಾಕಾರಣ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಈ ತರಹದ ಸುಳ್ಳು ಸುದ್ದಿ ಪ್ರಚಾರ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ. ವಶಪಡಿಸಿಕೊಂಡ ಡ್ರಗ್ಸ್ ಅನ್ನು ಪೊಲೀಸರು ಲ್ಯಾಬ್ಗೆ ಕಳುಹಿಸಿದ್ದಾರೆ.
ವಿಡಿಯೋ ಮೂಲಕ ಮಾತನಾಡಿರುವ ಅವರು, ಖಾಸಗಿ ಹೋಟೆಲ್ ಮೇಲಿನ ಡ್ರಗ್ಸ್ ದಾಳಿ ಪ್ರಕರಣಕ್ಕೂ ನಮ್ಮ ಪುತ್ರಿ ನಿಹಾರಿಕಾಗೂ ಯಾವುದೇ ಸಂಬಂಧವಿಲ್ಲ. ಅಂದು ರಾತ್ರಿ ನಮ್ಮ ಮಗಳು ನಿಹಾರಿಕಾ ಹೋಟೆಲ್ನಲ್ಲಿ ಇದ್ದಿದ್ದು ನಿಜ. ಅವಧಿಗೂ ಮೀರಿ ಹೋಟೆಲ್ ಬಾಗಿಲು ತೆರೆದಿದ್ದರಿಂದ ಅಧಿಕಾರಿಗಳು ದಾಳಿ ನಡೆಸಿದ್ದು ನಿಜ. ಆದರೆ, ಈ ವಿಚಾರದಲ್ಲಿ ಪುತ್ರಿ ನಿಹಾರಿಕಾ ಯಾವುದೇ ತಪ್ಪು ಮಾಡಿಲ್ಲ ಎಂದು ಪೊಲೀಸರು ಸಹ ಹೇಳಿದ್ದಾರೆ. ಆದರೆ, ಸಾಮಾಜಿಕ ಜಾಲತಾಣ ಹಾಗೂ ಕೆಲವು ಮಾಧ್ಯಮಗಳಲ್ಲಿ ಈ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ವಿನಾಕಾರಣ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಈತರಹದ ಸುದ್ದಿಯನ್ನು ದಯವಿಟ್ಟು ಮಾಡಬೇಡಿ ಎಂದು ನಾಗಬಾಬು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪಬ್ ಮ್ಯಾನೇಜರ್ ಅಭಿಷೇಕ್, ಇವೆಂಟ್ ಮ್ಯಾನೇಜರ್ ಅನಿಲ್, ವಿಐಪಿ ಮೊಮೆಂಟ್ ವೀಕ್ಷಕ ಕುನಾಲ್ ಮತ್ತು ಡಿಜೆ ಆಪರೇಟರ್ ವಂಶಿಧರ್ ರಾವ್ ಅವರನ್ನು ಬಂಧಿಸಿದ್ದಾರೆ. ವಶಪಡಿಸಿಕೊಂಡ ಡ್ರಗ್ಸ್ ಅನ್ನು ಪೊಲೀಸರು ಲ್ಯಾಬ್ಗೆ ಕಳುಹಿಸಿದ್ದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ರಾಜಧಾನಿಯ ಹೃದಯ ಭಾಗದಲ್ಲಿರುವ ಈ ಪಬ್‌ನಲ್ಲಿ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದು, ಸಂಚಲನ ಮೂಡಿಸಿದೆ. ಹಲವು ಸೆಲೆಬ್ರಿಟಿಗಳ ಮಕ್ಕಳನ್ನು ಒಳಗೊಂಡಿದ್ದ ಪಾರ್ಟಿಯಲ್ಲಿ ಮಾದಕ ದ್ರವ್ಯ ದೊರೆತಿದೆ ಎನ್ನಲಾಗ್ತಿದ್ದು, ಹಲವರು ಶಾಕ್ಗೆ ಒಳಗಾಗಿದ್ದಾರೆ.