ನರಸರಾವ್ ಪೇಟೆ (ಆಂಧ್ರಪ್ರದೇಶ):ಕಳೆದ 14 ತಿಂಗಳಿನಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಕೊಲೆಯಾಗಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆ ಬಾಪುಲಪಾಡು ಮಂಡಲದ ಬೊಮ್ಮುಲೂರು ಉಪನಗರದಲ್ಲಿ ನಡೆದಿದೆ.
ಪಲ್ನಾಡು ಜಿಲ್ಲೆಯ ನಾದೆಂಡ್ಲ ಮಂಡಲದ ಗೊರಿಜವೋಲುವಿನ ಜಂಗಮ ಚಂಟಿ (28) ಎಂಬ ವ್ಯಕ್ತಿ ಕಳೆದ ವರ್ಷ ಸೆ.16ರಂದು ನಾಪತ್ತೆಯಾಗಿದ್ದರು. ಆತನ ಅಣ್ಣ ಬಾಜಿ ದೂರಿನ ಮೇರೆಗೆ ಅದೇ ವರ್ಷ ಅಕ್ಟೋಬರ್ 24 ರಂದು ನಾದೆಂಡ್ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಬಾಜಿಯೂ ಸಹ ತನ್ನ ಸಹೋದರನನ್ನು ಹುಡುಕತೊಡಗಿದ ಎಂದು ಪೊಲೀಸರು ತಿಳಿಸಿದ್ದಾರೆ.
ನರಸರಾವ್ ಪೇಟೆ ಮಂಡಲದ ಕೇಸನುಪಲ್ಲಿ ನಿವಾಸಿ ರವಿಪತಿ ವೆಂಕಣ್ಣ, ದಾಗೇಪಲ್ಲಿಯ ನಾಗೂರ್ ಅಲಿಯಾಸ್ ಬಿಲ್ಲ ಎಂಬಾತನೊಂದಿಗೆ ಸೇರಿ ಚಂಟಿ ಕಳ್ಳತನ ಮಾಡುತ್ತಿದ್ದ ಎನ್ನಲಾಗ್ತಿದೆ. ಕದ್ದ ಚಿನ್ನವನ್ನು ಮಾರಲು ಜೊನ್ನಲಗಡ್ಡ ನಿವಾಸಿ ಹಾಗೂ ನರಸರಪೇಟೆಯ ಚಿನ್ನಾಭರಣ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಿಲಿವೇರು ರಾಮಾಂಜನೇಯು ಸಹಾಯ ಪಡೆಯುತ್ತಿದ್ದರು ಎಂಬ ಆರೋಪ ಮಾಡಲಾಗಿದೆ. ಈ ವರ್ಷ ಏಪ್ರಿಲ್ 22 ರಂದು ಬಾಜಿ, ರಾಮಾಂಜನೇಯನನ್ನು ಅಪಹರಿಸಿದ್ದನು. ನಂತರ ನಾದೆಂಡ್ಲ-ಯಡ್ಲಪಾಡು ನಡುವಿನ ಹೊಳೆಯಲ್ಲಿ ಆತನ ಶವ ಸಿಕ್ಕಿತ್ತು.
ಬಾಜಿ ಮೇಲೆ ಹತ್ಯೆ ಯತ್ನ:ಇತ್ತೀಚೆಗಷ್ಟೇ ರಾಮಾಂಜನೇಯುಲು ಕೊಲೆ ಪ್ರಕರಣದಲ್ಲಿ ನರಸರಾವ್ ಪೇಟೆ ಒಂದನೇ ಠಾಣೆಯಿಂದ ವಾಪಸಾಗುತ್ತಿದ್ದ ಬಾಜಿ ಎಂಬಾತನ ಮೇಲೆ ಹತ್ಯೆ ಯತ್ನ ನಡೆದಿತ್ತು. ಗಂಭೀರ ಗಾಯಗಳೊಂದಿಗೆ ಬದುಕುಳಿದ ಆತ ಪೊಲೀಸರಿಗೆ ದೂರು ನೀಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿಪತಿ ವೆಂಕಣ್ಣ, ಬಿಲ್ಲ ಹಾಗೂ ಕೆಲವರನ್ನು ಪೊಲೀಸರು ಬಂಧಿಸಿದ್ದರು. ಅವರ ತನಿಖೆಯಲ್ಲಿ ಹಲವು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.