ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ 2024ರ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ದೇಶಾದ್ಯಂತ 100 ದಿನಗಳ ಕಾಲ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಸಜ್ಜಾಗುತ್ತಿದ್ದಾರೆ.
ದೊಡ್ಡ ವಿಜಯದ ಬಳಿಕ ವಿಶ್ರಾಂತಿ ಪಡೆಯದ ನಡ್ಡಾ, ಶೀಘ್ರದಲ್ಲೇ ದೇಶಾದ್ಯಂತ 100 ದಿನಗಳ ಕಾಲ ಸುದೀರ್ಘ 'ರಾಷ್ಟ್ರೀಯ ವಿಸ್ತೃತ್ ಪ್ರವಾಸ' ಕೈಗೊಳ್ಳಲಿದ್ದಾರೆ.
2024ರ ಸಾರ್ವತ್ರಿಕ ಚುನಾವಣೆಗಳಿಗೆ ಕಾರ್ಯತಂತ್ರ ರೂಪಿಸುವ ಕೆಲಸಕ್ಕೆ ಬೇರೆ ರಾಜ್ಯಗಳಲ್ಲಿ ಉಳಿದುಕೊಳ್ಳುವ ದಿನಗಳನ್ನು ಮತ್ತಷ್ಟು ವಿಸ್ತರಿಸಿದ್ದಾರೆ. 2019ರಲ್ಲಿ ಪಕ್ಷವು ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ 2024ರಲ್ಲಿ ಆ ಸ್ಥಾನಗಳನ್ನು ಹೇಗೆ ಗೆಲ್ಲುವುದು ಎಂಬುದರ ಕುರಿತು ಬಿಜೆಪಿ ಮುಖ್ಯಸ್ಥರ ಜತೆ ಶೀಘ್ರದಲ್ಲೇ ಚರ್ಚಿಸಲಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಜಯ ಗಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಮೆಚ್ಚುಗೆಗೆ ಪಾತ್ರರಾದ ನಡ್ಡಾ, ಪಕ್ಷದ ಸಾರ್ವಜನಿಕ ಪ್ರತಿನಿಧಿಗಳನ್ನು ಭೇಟಿ ಮಾಡುವುದು, ಹೊಸ ಸಂಭಾವ್ಯ ಘಟಗಳ ಬಗ್ಗೆ ಚರ್ಚೆ, ರಾಜ್ಯ ಸರ್ಕಾರಗಳ ಈಗಿನ ಅಧಿಕಾರ ಚಿತ್ರಣ ಸುಧಾರಿಸುವುದು, ನಾನಾ ಪ್ರಭಾವಿ ಗುಂಪುಗಳೊಂದಿಗೆ ಸಂವಹನ, ಕೇಡರ್ ಮಟ್ಟದಲ್ಲಿ ಪಕ್ಷದ ಸಿದ್ಧಾಂತದ ಬಗ್ಗೆ ಸ್ಪಷ್ಟತೆ ನೀಡುವುದು, ಪಕ್ಷದ ಹಿರಿಯ ಕಾರ್ಯಕರ್ತರು ಮತ್ತು ರಾಜ್ಯಗಳಲ್ಲಿನ ಮಿತ್ರ ಪಕ್ಷಗಳ ಜತೆ ಸಂವಾದ ನಡೆಸಲಿದ್ದಾರೆ.