ಪಶ್ಚಿಮ ಬಂಗಾಳ:ಮಮತಾ ಬ್ಯಾನರ್ಜಿ ಅವರು ಸಿಎಂ ಸ್ಥಾನದಿಂದ ಕೆಳಗಿಳಿದು, ಬಿಜೆಪಿಯ ಕಮಲ ಅರಳಿದಾಗ ಮಾತ್ರ ಪಶ್ಚಿಮ ಬಂಗಾಳದ ಅಭಿವೃದ್ಧಿ ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
ಬುಧವಾರ ಖರಗ್‌ಪುರ ಮಿಡ್ನಾಪುರ ಜಿಲ್ಲೆಯಲ್ಲಿ ನಡೆದ "ಚಾ ಚಕ್ರಾ" ಕಾರ್ಯಕ್ರಮದಲ್ಲಿ ನಡ್ಡಾ ಮತ್ತು ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಭಾಗವಹಿಸಿದ್ರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಡ್ಡಾ, "ಬಂಗಾಳವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಮೋದಿ ಅವರು ಎಲ್ಲಾ ರೀತಿಯಲ್ಲಿ ಪ್ರಯತ್ನಿಸಿದ್ದಾರೆ. ಆದರೆ ಮಮತಾ ಅವರ ದಬ್ಬಾಳಿಕೆ ಮತ್ತು ಸರ್ವಾಧಿಕಾರದಿಂದ ಯಾವುದೇ ಅಭಿವೃದ್ಧಿ ಆಗಿಲ್ಲ ಹಾಗೂ ಬಂಗಾಳದ ಸಂಸ್ಕೃತಿಯನ್ನು ಕೆಡಿಸಿದ್ದಾರೆ." ಎಂದು ಹೇಳಿದರು.