ಕರ್ನಾಟಕ

karnataka

ETV Bharat / bharat

Nabard Recruitment: ನಬಾರ್ಡ್​ನಲ್ಲಿ 150 ಅಸಿಸ್ಟಂಟ್​ ಮ್ಯಾನೇಜರ್​ ಹುದ್ದೆ ನೇಮಕಾತಿ; ಪದವಿ ಆದವರಿಗೆ ಅವಕಾಶ - ಗ್ರೇಡ್ ​ಎ ಮಟ್ಟದ ಅಸಿಸ್ಟಂಟ್​ ಮ್ಯಾನೇಜರ್​ ಹುದ್ದೆ

ಪದವಿ ಓದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಈ ಹುದ್ದೆ ಕುರಿತದ ಸಂಪೂರ್ಣ ಮಾಹಿತಿ ಇಲ್ಲಿದೆ.

Nabard Invited application From degree holders for assistant manager post
Nabard Invited application From degree holders for assistant manager post

By ETV Bharat Karnataka Team

Published : Sep 4, 2023, 12:40 PM IST

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್​ (ನಬಾರ್ಡ್​)ನಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ರಾಷ್ಟ್ರಾದ್ಯಂತ ಈ ನೇಮಕಾತಿ ನಡೆಯಲಿದ್ದು, ಗ್ರೇಡ್ ​ಎ ಮಟ್ಟದ ಅಸಿಸ್ಟಂಟ್​ ಮ್ಯಾನೇಜರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 150 ಹುದ್ದೆಗಳ ಭರ್ತಿ ನಡೆಯಲಿದೆ. ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ನೇಮಕಾತಿ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ವಿವರಗಳು ಇಲ್ಲಿದೆ.

ಹುದ್ದೆ ವಿವರ: ಒಟ್ಟು 150 ಅಸಿಸ್ಟಂಟ್​ ಮ್ಯಾನೇಜರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಸಾಮಾನ್ಯಕ್ಕೆ 77, ಕಂಪ್ಯೂಟರ್​/ ಇನ್ಫಾರ್ಮೆಷನ್​ ಟೆಕ್ನಾಲಜಿ 40, ಫೈನಾನ್ಸ್​ 15, ಕಂಪನಿ ಸೆಕ್ರೆಟರಿ 3, ಸಿವಿಲ್​ ಇಂಜಿನಿಯರಿಂಗ್​ 3, ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​ 3, ಜಿಯೋ ಇನ್ಫಾರ್ಮೆಟಿಕ್ಸ್​ 2, ಅರಣ್ಯಶಾಸ್ತ್ರ 2, ಆಹಾರ ಸಂಸ್ಕರಣೆ 2, ಅಂಕಿ ಅಂಶ 2, ಮೀಡಿಯಾ ಸ್ಪೆಷಲಿಸ್ಟ್​ 1 ಹುದ್ದೆಗಳನ್ನು ನಿಗದಿಸಲಾಗಿದೆ.

ಅಧಿಸೂಚನೆ

ವಿದ್ಯಾರ್ಹತೆ:ಅಭ್ಯರ್ಥಿಗಳು ಸಂಬಂಧಿಸಿದ ಕ್ಷೇತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 21 ಗರಿಷ್ಠ 30 ವರ್ಷಗಳ ವಯೋಮಿತಿ ಮೀರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 150 ರೂ. ಮತ್ತು ಇತರೆ ಅಭ್ಯರ್ಥಿಗಳು 800 ರೂ. ಅರ್ಜಿ ಶುಲ್ಕ ಪಾವತಿಸಬೇಕಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಮೂರು ಹಂತದ ಮೂಲಕ ಅಯ್ಕೆ ಮಾಡಲಾಗುವುದು. ಪ್ರಿಲಿಮನರಿ, ಮೇನ್ಸ್​ ಮತ್ತು ಸಂದರ್ಶನವಾಗಿದೆ.

ವೇತನ:ಹುದ್ದೆಗೆ ಅನುಸಾರವಾಗಿ ಮಾಸಿಕ 44500-89150 ರೂ.ವರೆಗೆ ವೇತನ ನಿಗದಿಸಲಾಗಿದೆ. ಈ ಹುದ್ದೆಗೆ ಸೆಪ್ಟೆಂಬರ್​ 2ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 23 ಆಗಿದೆ. ಅರ್ಜಿ ಸಲ್ಲಿಕೆಗೆ ಮುನ್ನ ನಬಾರ್ಡ್​ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿ, ಅರ್ಥೈಸಿಕೊಂಡು ಮುಂದುವರೆಯುವುದು ಅವಶ್ಯವಾಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರ ಮಾಹಿತಿಗೆ nabard.org ಈ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: SSC Recruitment: 7547 ಕಾನ್ಸ್​ಟೇಬಲ್​ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ABOUT THE AUTHOR

...view details