ಕರ್ನಾಟಕ

karnataka

ETV Bharat / bharat

ಅಸನಿ ಚಂಡಮಾರುತ: ಆಂಧ್ರದ ಸಮುದ್ರ ತೀರಕ್ಕೆ ತೇಲಿ ಬಂತು ನಿಗೂಢ ಚಿನ್ನದ ಬಣ್ಣದ ರಥ!

ಅಸನಿ ಚಂಡಮಾರುತದ ಪ್ರಭಾವದಿಂದ ಆಂಧ್ರಪ್ರದೇಶದ ಶ್ರೀಕಾಕುಳಂ ಸುನ್ನಪಲ್ಲಿ ಬಂದರಿನ ದಡಕ್ಕೆ ನಿಗೂಢ ಚಿನ್ನದ ಬಣ್ಣದ ರಥವೊಂದು ತೇಲಿ ಬಂದಿದೆ.

ಚಿನ್ನದ ಬಣ್ಣದ ರಥ
ತೇಲಿ ಬಂತು ಚಿನ್ನದ ಬಣ್ಣದ ರಥ

By

Published : May 11, 2022, 3:02 PM IST

Updated : May 11, 2022, 5:59 PM IST

ಶ್ರೀಕಾಕುಳಂ(ಆಂಧ್ರಪ್ರದೇಶ):ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಸನಿ ಚಂಡಮಾರುತ ಈಗಾಗಲೇ ಆಂಧ್ರಪ್ರದೇಶಕ್ಕೆ ಲಗ್ಗೆ ಹಾಕಿದ್ದು, ತನ್ನ ಆರ್ಭಟ ಶುರು ಮಾಡಿದೆ. ಇದರ ಮಧ್ಯೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಚಿನ್ನದ ಬಣ್ಣ ಹೋಲಿಕೆಯ ರಥವೊಂದು ಸಮುದ್ರದಲ್ಲಿ ತೇಲಿ ಬಂದಿದೆ. ಆಂಧ್ರಪ್ರದೇಶದ ಸಂತಬೊಮ್ಮಲಿ ಮಂಡಲದ ಸುನ್ನಪಲ್ಲಿಯ ಕರಾವಳಿ ತೀರದಲ್ಲಿ ಈ ಘಟನೆ ನಡೆದಿದೆ.

ಆಂಧ್ರದ ಸಮುದ್ರ ತೀರಕ್ಕೆ ತೇಲಿ ಬಂತು ನಿಗೂಢ ಚಿನ್ನದ ರಥ!

ಅಸನಿ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಈ ಚಿನ್ನದ ಬಣ್ಣ ಹೋಲಿಕೆಯ ರಥ ತೇಲಿ ಬರುತ್ತಿರುವುದನ್ನ ನೋಡಿರುವ ಕೆಲವರು ಅದನ್ನ ಎಳೆದು ದಡಕ್ಕೆ ತಂದು ನಿಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶ್ರೀಕಾಕುಳಂ ಜಿಲ್ಲೆಯ ಸಬ್​​ ಇನ್ಸ್​​ಪೆಕ್ಟರ್​​, ಬೇರೆ ದೇಶದಿಂದ ತೇಲಿ ಬಂದಿರುವ ಸಾಧ್ಯತೆ ಇದ್ದು, ಇದಕ್ಕೆ ಸಂಬಂಧಿಸಿದಂತೆ ಗುಪ್ತಚರ ಮತ್ತು ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.

ಆಂಧ್ರದ ಸಮುದ್ರ ತೀರಕ್ಕೆ ತೇಲಿ ಬಂತು ನಿಗೂಢ ಚಿನ್ನದ ರಥ!

ಮಲೇಶಿಯಾ, ಥಾಯ್ಲೆಂಡ್​​ ಅಥವಾ ಜಪಾನ್​​ನಿಂದ ತೇಲಿ ಬಂದಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈ ರಥವನ್ನ ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಅಸನಿ ಚಂಡಮಾರುತ ಅಬ್ಬರ ಜೋರಾಗಿರುವ ಕಾರಣ ಈಗಾಗಲೇ ಆಂಧ್ರಪ್ರದೇಶದಲ್ಲಿ ರೆಡ್​ ಅಲರ್ಟ್​​ ಘೋಷಣೆ ಮಾಡಲಾಗಿದ್ದು, ಎಸ್​​ಡಿಆರ್​ಎಫ್​ ಮತ್ತು ಎನ್​​ಡಿಆರ್​​ಎಫ್​​​ ತಂಡ ವಿವಿಧ ಸ್ಥಳಗಳಲ್ಲಿ ನಿಯೋಜನೆಗೊಂಡಿವೆ.

ನಿಗೂಢ ಚಿನ್ನದ ಬಣ್ಣದ ರಥ
Last Updated : May 11, 2022, 5:59 PM IST

ABOUT THE AUTHOR

...view details